ಕೊಪ್ಪಳ,: ಕುಮ್ಮಟದುರ್ಗದಲ್ಲಿ ಕುಮಾರರಾಮ ಜಾತ್ರೆಯು ಕೆಲ ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು.
ಈ ಜಾತ್ರೆಯು ತ್ಯಾಗ ಬಲಿದಾನಗಳ ಪ್ರತೀಕವಾಗಿರವುದು ಚಿರಪರಚಿತ. ಆದರೆ ಕಾಲಾಂತರಗಳಿಂದ ನಂಬಿಕೆ, ಸಂಸ್ಕೃತಿ, ಸಂಪ್ರದಾಯಗಳನ್ನು ಕಾಪಿಟ್ಟುಕೊಂಡು ಬಂದ ಸಮುದಾಯಗಳು ತಮ್ಮ ಆಚರಣೆಗಳಲ್ಲಿ ಕುಮಾರರಾಮನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವುದು ವಿಶೇಷ. ಅಂತದ್ದೊಂದು ವಿಶಿಷ್ಟ ಹಾಗೂ ವಿಪರ್ಯಾಸದ ಆಚರಣೆಯಾಗಿ ಈ ಜಾತ್ರೆಯಲ್ಲಿ ನೀಡುವ ಅಕ್ಕಿ ಪಡಿಗೆ ವಿಶೇಷವಾದ ಸ್ಥಾನವಿದೆ. ಜಾತ್ರೆಯಲ್ಲಿನ ಎಲ್ಲಾ ಆಚರಣೆಗಳಿಗಿಂತ ಇದು ಹೆಚ್ಚು ಮೌಲ್ಯಯುತವಾದು. ಈ ಅಕ್ಕಿ ಪಡಿಗೆ ಸಂಬಂಧಿಸಿದಂತೆ ಕೊಪ್ಪಳ, ಗಂಗಾವತಿ ಸುತ್ತಮುತ್ತಲ ಪರಿಸರದಲ್ಲಿ ಒಂದು ವಿಭಿನ್ನವಾದ ನಂಬಿಕೆ ಇದೆ.
ಈ ಅಕ್ಕಿ ಪಡಿಯನ್ನು ತಮ್ಮ ಕೃಷಿ ಭೂಮಿಯಲ್ಲಿ ಹರಡುವುದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗಿ, ಬೆಳೆಯುವ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ಜನರದ್ದಾಗಿದೆ. ಈ ಕಾರಣಕ್ಕಾಗಿ ಸುತ್ತಮುತ್ತಲ ಭಾಗದ ಜನರು ತಮ್ಮ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿಯೂ ಅಕ್ಕಿಪಡಿ ಹಂಚುವ ಆಚರಣೆಯಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಆಧುನಿಕತೆಗೆ ಒಳಪಟ್ಟಂತೆ ತನ್ನ ಕಾರ್ಯಗಳನ್ನು ಸುಲಭ ಹಾಗೂ ಸಂಕುಚಿತಗೊಸಿಕೊಳ್ಳುವುದು ಮನುಷ್ಯನ ಸಹಜ ಗುಣ. ಆದರೆ ಕಾಲದೊಂದಿಗಿನ ಅನುಸಂಧಾನವು ಆಚರಣೆ ಹಾಗೂ ಸಂಪ್ರದಾಯಗಳ ಮಹತ್ವವನ್ನು ಕಡಿಮೆಗೊಳಿಸುತ್ತಿರುವ ಕಾಲದಲ್ಲಿಯೂ ಕುಮಾರರಾಮನ ಜಾತ್ರೆಯ ಅಕ್ಕಿಪಡಿಯು ವರ್ಷದಿಂದ ವರ್ಷಕ್ಕೆ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸಂತೋಷದಾಯಕವಾದ ಸಂಗತಿಯಾಗಿದೆ ಎಂದು ಗಂಡುಗಲಿ ಕುಮಾರರಾಮನ ವಂಶಸ್ಥ ಎಚ್.ರಾಜೇಶ್ ನಾಯಕ ದೊರೆ ಕುವೆಂಪು ವಿಶ್ವವಿದ್ಯಾನಿಲಯಸಂಶೋಧನಾ ವಿದ್ಯಾರ್ಥಿ ಪ್ರಕಾಶ್. ಕೆ ತಿಳಿಸಿದ್ದಾರೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ