ಶಾಲಾ ಮಕ್ಕಳ ಜೊತೆ ಊಟ ಮಾಡಿದ ಶಾಸಕಿ ಲತಾ
ಅಕ್ಷರಕ್ರಾಂತಿ ನ್ಯೂಸ್
ಹರಪನಹಳ್ಳಿ,: ತಾಲೂಕಿನ ಪೃಥೇಶ್ವರ, ಶೀರನಹಳ್ಳಿ, ಹಗರಿಗುಡಿಹಳ್ಳಿ, ಕುಣಿಮಾದಿಹಳ್ಳಿ, ಕನಕನಬಸಾಪುರ, ದ್ಯಾಪನಾಯಕನಹಳ್ಳಿ ಕುಮಾರನಹಳ್ಳಿ ಅಡವಿ ಮಲ್ಲಾಪುರ ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆಗಳ ನೂತನ ಕೊಠಡಿಯ ಉದ್ಘಾಟನೆ ಶಾಸಕರಾದ ಲತಾ ಮಲ್ಲಿಕಾರ್ಜುನ ಅವರು ನೆರವೇರಿಸಿದರು.ನಂತರ ಮಾತನಾಡಿದ ಅವರು, ಅಜ್ಞಾನ, ಅಂಧಕಾರ, ಮೌಢ್ಯದಿಂದ ಹೊರಬರಬೇಕು, ಜ್ಞಾನ ಸಂಪತ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವುದೇ ಶಿಕ್ಷಕರ ಮತ್ತು ಪಾಲಕರ ಪ್ರಥಮ ಆದ್ಯತೆ ಆಗಬೇಕೆಂಬ ಕಿವಿಮಾತನ್ನು ಶಿಕ್ಷಕರಿಗೆ ಹಾಗೂ ಮಕ್ಕಳ ಪೋಷಕರಿಗೆ ತಿಳಿಸಿದರು. ನಂತರ ಶಾಲಾ ಮಕ್ಕಳ ಜೊತೆ ಊಟ ಮಾಡಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಪುರಸಭೆ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು, ಶಾಲಾ ಮಕ್ಕಳು ಹಾಗೂ ಗ್ರಾಮದ ಗುರು- ಹಿರಿಯರು ಇದ್ದರು.
More Stories