ಮಾರ್ಚ್ 15ರ ಒಳಗೆ ಕನ್ನಡ ನಾಮ ಫಲಕ ಹಾಕಿ
ಸಿಂಧನೂರು,: ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆದಾರರಿಗೆ, ಉದ್ದಿಮೆದಾರರಿಗೆ, ಅಂಗಡಿ, ಹೋಟೆಲ್, ಲಾಡ್ಜ್ ಮಾಲಿಕರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಛೇರಿಗಳಿಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ ಮಾ.15 ರೊಳಗಾಗಿ ಕನ್ನಡ ನಾಮ ಫಲಕಗಳನ್ನು ಹಾಕಬೇಕು ಇಲ್ಲದಿದ್ದಲ್ಲಿ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೆವೆಂದು ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಕರ್ನಾಟಕ ಅಧೀನ ಕಾರ್ಯದರ್ಶಿಗಳು, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ (ಆಡಳಿತ ಕನ್ನಡ) ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಕಸವಾ:80 : ಕೆಓಎಲ್: 2017 ದಿನಾ೦ಕ: 24-03 -2018, 2)ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸ್ಥಾಪನೆಗಳ ಕಾಯ್ದೆ 1961, ಕಲಂ ಸಂಖ್ಯೆ 24 (ಆ) ಹಾಗೂ ಸರ್ಕಾರದ ನಿರ್ದೇಶನದಂತೆ, ಕರ್ನಾಟಕದ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿ ಯನ್ನು ಹೊರಡಿಸಿದ್ದು, ಅದರಂತೆ ಎಲ್ಲಾ ಅಂಗಡಿ, ಮುಂಗಟ್ಟು ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60% ರಷ್ಟು ಕನ್ನಡ ಪದ ಬಳಕೆ ಮಾಡುವಂತೆ ಆದೇಶವಿರುತ್ತದೆ.
ಆ ಪ್ರಯುಕ್ತ ಸಿಂಧನೂರು ನಗರಸಭೆಯ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ/ ಮುಂಗಟ್ಟು ವಾಣಿಜ್ಯ ಮಳಿಗೆಗಳಲ್ಲಿನ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಪದಗಳ ಬಳಕೆಯನ್ನು ಮಾರ್ಚ 15 ರೊಳಗಾಗಿ ಮಾಡತಕ್ಕದ್ದು, ಒಂದು ವೇಳೆ ನಾಮಫಲಕದಲ್ಲಿ 60% ಕನ್ನಡ ಪದ ಬಳಕೆಯಾಗದೇ ಇದ್ದಲ್ಲಿ ನಗರಸಭೆ ವತಿಯಿಂದ ಸದರಿ ನಾಮ ಫಲಕವನ್ನು ತೆರುವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ತಮ್ಮಿಂದ ವಸೂಲಿ ಮಾಡಲಾಗುವುದು ಹಾಗೂ ತಮಗೆ ನೀಡಿರುವ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ ಅದಕ್ಕೆ ಕಾನೂನಿನಂತೆ ಕ್ರಮ ಕೈಗೊಳ್ಳಲಾವುದು. ಕಾರ್ಯಾಚರಣೆ ಯಿಂದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾದಲ್ಲಿ ನಗರಸಭೆ ಸಿಂಧನೂರು ಜವಬ್ದಾರಿಯಾಗಿರುವುದಿಲ್ಲಾ ಇದು ಅಂತಿಮ ತಿಳುವಳಿಕೆ ಪ್ರಕಟಣೆಯಾಗಿರುತ್ತದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಿ ಎಂದರು.
More Stories