December 22, 2024

AKSHARA KRAANTI

AKSHARA KRAANTI




ಕಲ್ಪನೆಯ ಕನಸಿಗೆ ಬಣ್ಣ ಬಳಿಯುವ ಅಪರೂಪದ ಕಲಾವಿದೆ ಅನುಶ್ರೀ

ಗದಗ-ಬೆಟಗೇರಿಯ ಚಿತ್ರ ಕಲಾವಿದೆ ಅನುಶ್ರೀ ಅವರ ಕಲಾ ಪ್ರತಿಭೆಯ ಓರೇನೋಟ

ತಮ್ಮದೇರು ಕುಳಿತ ವ್ಯಕ್ತಿಯನ್ನು ಪಟ-ಪಟನೆ ಬಿಡಿಸುವ ಕಲೆಯನ್ನು ಒಲಿಸಿಕೊಂಡಿರುವ ಅಪರೂಪದ ಕಲಾವಿದೆ ಅನುಶ್ರೀ.

ತಮ್ಮ ಕುಂಚದ ಮೂಲಕ ಹಲವಾರು ನೈಜ ಚಿತ್ರಗಳನ್ನು ಬಿಡಿಸುವ ಇವರು ಗದಗ-ಬೆಟಗೇರಿಯ ನೇಕಾರಿಕೆ ಕುಟುಂಬದಿಂದ ಬಂದವರು. ತಂದೆ ಪಂಪಾಪತಿ ಬಿದರೂರ ಮತ್ತು ನಾಗರತ್ನ ಬಿದರೂರ ದಂಪತಿಗಳ ಸುಪುತ್ರಿಯಾದ ಇವರು ಅನ್ನಪೂರ್ಣೇಶ್ವರಿ ಗದಗಿನ ಪೈನ್ ಆಟ್೯ ಕಾಲೇಜನಲ್ಲಿ ಫೈನ್ ಆಟ್೯ ಚಿತ್ರಕಲಾ ವಿಭಾಗದಲ್ಲಿ ಮೂರನೇ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಇವರು ತರಬೇತಿ ಹಂತದಲ್ಲೇ ತಮ್ಮ ಕುಂಚದ ಮೂಲಕ ಹಲವಾರು ಕಲಾಕೃತಿಗಳನ್ನು ಬಿಡಿಸಿದ್ದಾರೆ.ಸ್ಟೋಕರ್ ವರ್ಕ್, ನೈಪ್ ವರ್ಕ್ ಪೇಂಟಿಂಗ್, ಕ್ಯಾನ್​​ವಾಸ್ ಪೇಂಟಿಂಗ್, ವಾಟರ್ ಕಲರ್, ಲ್ಯಾಂಡ್ ಸ್ಕೇಪ್ ಹೀಗೆ ಹಲವಾರು ನೈಜ ಕಲಾಕೃತಿಗಳನ್ನು ಬಿಡಿಸಿ ಹಲವರ ಮೆಚ್ಚುಗೆಗಳಿಸಿದ್ದಾರೆ.

ಕಲೆ ಎನ್ನುವುದು ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವ ಸೇತುವೆ. ತಮ್ಮ ಕುಂಚದ ಮೂಲಕ ಅನುಶ್ರೀ ಆ ಮಾತನ್ನ ಅಕ್ಷರಶ ನಿಜವಾಗಿಸಿದ್ದಾರೆ. ಅವರು ವಿದ್ಯಾರ್ಥಿ ದೆಸೆಯಲ್ಲೇ ಸಾಕಷ್ಟು ಭರವಸೆ ಮೂಡಿಸಿರುವ ಪ್ರಬುದ್ಧ ಕಲಾವಿದೆ. ಬಾಲ್ಯದಲ್ಲೇ ಚಿತ್ರಕಲೆ ಬಗ್ಗೆ ಆಸಕ್ತಿ ಇತ್ತು. ಯಾವುದೇ ವಸ್ತು ಕಂಡರೆ ಸಾಕು ಅದನ್ನು ಬಣ್ಣದಲ್ಲಿ ಹಿಡಿದಿಡುವ ಪಯತ್ನ ಮಾಡುತ್ತಿದ್ದರು. ಅವರು ತಮ್ಮದೇ ಶೈಲಿಯ ಕೈ ಚಳಕದಿಂದ ಚಿತ್ರ ಬಿಡಿಸಿ ಹಲವು ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕಗಳನ್ನು ಬಾಚಿಕೊಂಡಿದ್ದಾರೆ. ಚಿತ್ರಕಲೆ ಉಸಿರಾಗಿಸಿಕೊಂಡು ಅವಿರತ ಶ್ರಮದಿಂದ ಭಿನ್ನ-ವಿಭಿನ್ನವಾಗಿ ಹತ್ತು ಹಲವಾರು ಸಂದೇಶ ಸಾರುವ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ನಿಸರ್ಗದ ನೋಟ, ನಾಗಾಲೋಟ ಕುದುರೆ ಕಲಾಕೃತಿ, ಪಕ್ಷಿ ಸಂಕುಲಗಳ ಸರಣಿ ಹಾಗೂ ಪರಿಸರದ ಮತ್ತು ಕಲ್ಪನೆ ಆಧಾರಿತ ಪುರುಷ, ಮಹಿಳೆ ಚಿತ್ರವನ್ನು ಬಿಡಿಸುವ ಅತ್ಯ ಅದ್ಬುತ ಕಲಾ ಪ್ರತಿಭೆಯನ್ನು ಹೊಂದಿರುವ ಅವರು ಇತ್ತೀಚಿಗೆ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ವತಿಯಿಂದ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಮ್ಮ ಕೈಚಳಕದಿಂದ ಸ್ಟೋಕರ್ ವರ್ಕ್, ನೈಪ್ ವರ್ಕ್ ಪೇಂಟಿಂಗ್, ಕ್ಯಾನ್​​ವಾಸ್ ಪೇಂಟಿಂಗ್, ವಾಟರ್ ಕಲರ್, ಲ್ಯಾಂಡ್ ಸ್ಕೇಪ್ ಹೀಗೆ ಹಲವಾರು ಕಲಾಕೃತಿಗಳನ್ನು ಬಿಡಿಸುವ ಮೂಲಕ ಡಿಎಡ್, ಬಿಎಡ್ ಹಾಗೂ ಕಾಲೇಜು ವಿದ್ಯಾರ್ಥಿಗಳ ಪ್ರೋಜಕ್ಟ ವರ್ಕ್ ಕಲಾಕೃತಿಗಳನ್ನು ಬಿಡಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ತಮ್ಮ ಅದ್ಬುತ ಕೈಚಳಕದಿಂದ ವಿಭಿನ್ನ ಚಿತ್ರಕಲೆಯನ್ನು ಬಿಡಿಸುವ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಗಮನ ಸೆಳೆಯಲಿ ಎಂದು ಅಕ್ಷರಕ್ರಾಂತಿ ನ್ಯೂಸ್ ಪತ್ರಿಕೆಯ ಆಶಯ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!