ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ
(ದಿ. 17-10-2024 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಲೇಖನ)
“ಓಂ ತತ್ ಸತ್’ ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ|
ಅರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ
ಭಾರತವೊಂದು ವಿಶಾಲವಾದ ದೇಶ, ಈ ವಿಶಾಲ ಹಲವಾರು ಧರ್ಮಗಳ ನೆಲೆವೀಡು, ಹಲವು ಸಾಧು ಸಂತರ ಋಷಿ ಮುನಿಗಳು, ದಾಸರ ಶರಣರು ಮಹರ್ಷಿಗಳು ಹಾಗೂ ಅದೇ ರೀತಿಯಾಗಿ ಹಲವಾರು ಜನಾಂಗಗಳು ಜಾತಿ ಉಪಜಾತಿಗಳು ಆದಿಕಾಲದಿಂದಲೂ ನೆಲೆಯೂರಿ ತಮ್ಮದೇ ಸಂಸ್ಕೃತಿ ರೂಢಿ ಸಂಪ್ರದಾಯ ಪದ್ಧತಿಗಳನ್ನು ಉಳಿಸಿ ಬೆಳೆಯಿಸಿಕೊಂಡು ಬಂದಿವೆ. ಪ್ರತಿಯೊಂದು ಜನಾಂಗಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಇತಿಹಾಸ ಇದೆ. ಭಾರತ ಉತ್ತರದಲ್ಲಿ ಆರ್ಯರು ದಕ್ಷಿಣದಲ್ಲಿ ದ್ರಾವಿಡರು ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿ ಧಾರ್ಮಿಕ ಸಂಪ್ರದಾಯಗಳನ್ನು ಹಾಕಿಕೊಂಡಿದ್ದಾರೆ. ದ್ರಾವಿಡರಿಗಿಂತಲೂ ಪೂರ್ವದ ಆದಿವಾಸಿಗಳೆಂಬ ನಂಬಿಕೆ ಇರುವ ದಕ್ಷಿಣ ಭಾರತದ ವಾಲ್ಮೀಕಿ ಅಥವಾ ನಾಯಕ ಇಲ್ಲವೇ ಬೇಡ ಜನಾಂಗದವರು ಇತಿಹಾಸ ಕುತೂಹಲಕಾರಿಯಾಗಿದೆ ಇಂತಹ ಜನಾಂಗದವರನ್ನು ಗುರುತು ಹಿಡಿಯುವಂತೆ ಮಾಡಿದ ಆದಿಕವಿ. ಕವಿ ಕವಿಗಳಿಗೆಲ್ಲ ಕವಿಯಾದ ಮಹರ್ಷಿ ವಾಲ್ಮೀಕಿಯ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ.
ಮಹರ್ಷಿ ವಾಲ್ಮೀಕಿ ಜೀವನ ಪರಿಚಯ : ಭವ್ಯ ಭಾರತದ ಸಂಸ್ಕೃತಿಗೆ ಮುನ್ನಡಿ ಬರೆದು ಜಗತ್ತಿಗೆ ಆದರ್ಶಮಯವಾದ ಹಾಗೂ ಮನುಕುಲದ ಸನ್ಮಾರ್ಗಕ್ಕಾಗಿ ಪವಿತ್ರ ಗ್ರಂಥವನ್ನು ಪರಿಚಯಸಿದ ವಾಲ್ಮೀಕಿಗೆ ತ್ರೇತಾಯುಗದ ಮೂಲ ಸಂವೇದನಯೆ ಬದುಕಿನ ಮೌಲ್ಯವನ್ನು ಸೋಲು ಗೆಲವುಗಳನ್ನು ಒಟ್ಟಾಗಿ ಹಿಡಿದಿಟ್ಟು ದಾರ್ಶನಿಕ ಶಕ್ತಿ ದಕ್ಕಿತು. ಅದು ರಾಮಾಯಣ ರೂಪದಲ್ಲಿ ಹೊರಬಂದಿತು. ಇಂತಹ ಮಹಾನ್ ವ್ಯಕ್ತಿ ಪ್ರಪಂಚದಲ್ಲಿ ಚರಿತ್ರೆಯಲ್ಲಿ ಎಂದೋ ಮಿನುಗಿದ ದ್ರುವತಾರೆ ಆದಿಕವಿ ಮಹರ್ಷಿ ತಪಸ್ವಿ ಸರ್ವತೋಮುಖ ಚಿಂತಕ ಎಂದು ಖ್ಯಾತಿ ಪಡೆದವರು. ಇಂತಹ ಮಹಾಕವಿ ವಾಲ್ಮೀಕಿ ಹೆಸರು ಪಡೆದಿದ್ದ ಒಂದು ಪವಾಡ ಸದೃಶ್ಯದ ಕಥೆ ಒಂದು ಮೂಲದ ಪ್ರಕಾರ ಪ್ರಚೇತಸೇನೆಂಬ ಮಹರ್ಷಿಯು ತಮಸಾ ನದಿಯ ದಂಡೆಯಲ್ಲಿದ್ದ ಅರಣ್ಯದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ವೇದಾದ್ಯಯನ ಮಾಡುತ್ತಿದ್ದನು ಇವನಿಗೆ ರತ್ನಾಕರ ಎಂಬ ಮಗನಿದ್ದನು. ಇವನ್ನಿನೂ ಬಾಲಕನಾಗಿರುವಾಗಲೇ ಅರಣ್ಯದಲ್ಲಿ ತಪ್ಪಿ ಹೋಗಿ ಒಬ್ಬ ಬೇಡರ ರಾಜನಿಗೆ ಸಿಕ್ಕಿದ್ದನ್ನು ಅವನ್ನು ರತ್ನಾಕರನನ್ನು ತನ್ನ ಮಗನನ್ನಾಗಿ ಸ್ವೀಕರಿಸಿದ್ದರು. ವಾಲ್ಮೀಕಿಯ ಮೂಲ ಹೆಸರು ರತ್ನಾಕರ ತಂದೆ ಪ್ರಚೇತಸೇನನೆಂಬ ತಾಯಿ ವೃಕ್ಷಕನ್ಯೆ ಆ ಬೇಡರಾಜನು ಕೊಲೆ ಸುಲಿಗೆ ಮಾಡಿ ಮೋಸದಿಂದ ಹಣ ಸಂಪಾದಿಸುತ್ತಿದ್ದನು. ಅದರಂತೆ ರತ್ನಾಕರನು ಕೊಲೆ ಸುಲಿಗೆ ಮಾಡುವ ಒಬ್ಬ ದೊಡ್ಡ ದರೋಡೆಕೋರನಾಗಿದ್ದನ್ನು. ಇದನ್ನು ಕಂಡ ಬ್ರಹ್ಮನು ತ್ರಿಲೋಕ ಸಂಚಾರಿಯಾದ ನಾರದ ಮಹರ್ಷಿಗೆ ಇವನು ಸಾಮಾನ್ಯ ವ್ಯಕ್ತಿಯಲ್ಲ ಆತನಿಗೆ ಅವನು ಮಾಡುವ ಕೆಲಸ ಕೆಟ್ಟದ್ದು ಎಂದು ತಿಳಿಯದೇ ತಪ್ಪಿನ ಅರವಿಲ್ಲವಾದ್ದುದರಿಂದ ಅವನಿಗೆ ಜ್ಞಾನೋಪದೇಶವನ್ನು ನೀಡಲು ನಾರದನಿಗೆ ಕಳುಹಿಸುತ್ತಾನೆ. ಅದರಂತೆ ನಾರದ ಮುನಿಗಳು ರತ್ನಾಕರನನ್ನು ಅಡ್ಡಗಟ್ಟಿ ನೀನು ತಪ್ಪು ಮಾಡುತ್ತಿರುವೆ ಎಂದು ಕೇಳಿದರು. ಆಗ ರತ್ನಾಕರ ಒಪ್ಪದಿದ್ದಾಗೆ ನೀನು ಮಾಡುವ ಪಾಪ ಕಾರ್ಯದಿಂದ ಪ್ರಾಪ್ತವಾಗುವ ಪಾಪದಲ್ಲಿ ನಿನ್ನ ಹೆಂಡತಿ, ಮಕ್ಕಳೂ ಬಾದ್ಯಸ್ಥರೆ ಎಂದು ಪ್ರಶ್ನಿಸುತ್ತಾರೆ. ಗೊತ್ತಿಲ್ಲ ಎಂದಾಗ ಹಾಗಾದರೆ ನೀನು ಅವರನ್ನು ಕೇಳು ಎಂದರು. ಆಗ ತನ್ನ ಕುಟುಂಬದವರೊಡನೆ ಚರ್ಚಿಸಿದಾಗ, ವಿಚಾರಿಸಿದಾಗ ನಿನ್ನ ಪಾಪಕ್ಕೆ ನೀನೆ ಹೊಣೆ ಎಂದು ಉತ್ತರಿಸಿದಾಗ ಆಗ ದಿಗ್ಮೂಡನಾಗಿ ತನ್ನ ತಪ್ಪಿನ ಅರಿವಾಯಿತು. ಆಗ ತನ್ನವರೆನಲ್ಲ ಬಿಟ್ಟು ಅರಣ್ಯದಲ್ಲಿ ನಾರದರ ಜ್ಞಾನೋಪದೇಶ ಪಡೆದು ತಪಸ್ಸನ್ನು ಆಚರಿಸಲು ಪ್ರಾರಂಭಿಸುತ್ತಾನೆ. ರಾಮ ರಾಮ ಎಂಬ ಜಪ ಮಂತ್ರ ಬೋಧಿಸಲು ತಿಳಿಸುವರು. ರಾಮ ರಾಮ ಎಂಬ ಉಚ್ಛಾರಣೆಯು ಬಾರದೆ ಮರಾ ಮರಾ ಎಂದು ಉಚ್ಚರಿಸುತ್ತಾ ತಪಸ್ಸಿನಲ್ಲಿ ಮಗ್ನರಾಗುತ್ತಾರೆ. ಆತನ ಸುತ್ತ ಹುತ್ತವು ಬೆಳೆಯುತ್ತದೆ. ಆ ಹುತ್ತಕ್ಕೆ ವಲ್ಮೀಕ ಎಂದು ಕರೆಯುತ್ತಾರೆ. ಹೀಗೆ ಅನೇಕ ವರ್ಷಗಳು ಕಳೆದವು. ಒಮ್ಮೆ ವರುಣನು ಮಳೆಗೆರೆದು ಹುತ್ತನ್ನು ಕರಗಿಸಿದನು. ಹುತ್ತದಿಂದ ಜನ್ಮ ತಾಳಿದನೆಂದು ಪ್ರತೀತ ಹುತ್ತದಿಂದ ಜನ್ಮ ಪಡೆದಿದ್ದರಿಂದಾಗಿ ವಾಲ್ಮೀಕಿ ಎಂದು ಕರೆಯಲಾಗುತ್ತಿದೆ.
ಒಮ್ಮೆ ಶಿಷ್ಯರೊಂದಿಗೆ ತಮಸಾ ನದಿಗೆ ಸ್ನಾನ ಮಾಡಲು ಹೊರಟಾಗ ಮರದಲ್ಲಿ ಕ್ರೌಂಚ ಪಕ್ಷಿಗಳ ಸರಸ ಕಂಡು ಸುಂದರ ಪಕ್ಷಿ ದಂಪತಿಗಳ ಪ್ರೇಮಲೀಲೆಯು ವಾಲ್ಮೀಕಿಗೆ ಕಾವ್ಯರಚನೆಯ ಸ್ಫೂರ್ತಿ ನೀಡಿತು. ಸರಸವಾಡುವ ಕ್ರೌಂಚ ಪಕ್ಷಿಗಳಲ್ಲಿ ಗಂಡು ಪಕ್ಷಿಯು ಶಬರನೆಂಬ ಬೇಟೆಗಾರನ ಬಾಣಕ್ಕೆ ಬಲಿಯಾಗಿ ಕೆಳಗೆ ಬಿದ್ದು ಜೀವ ಬಿಡುತ್ತಿರುವುದನ್ನು ಮತ್ತು ಹೆಣ್ಣು ಪಕ್ಷಿಯ ಆಕ್ರಂದನವನನ್ನು ಕಂಡು ವಾಲ್ಮೀಕಿಗೆ ಸಹಿಸಲಾಗದೆ ಕೋಪದ ಬರದಲ್ಲಿ ಬೇಡನಿಗೆ ಶಾಪವಿತ್ತನು ನಂತರ ಬೇಡ ತನ್ನ ಕಾಯಕದ ಬಗ್ಗೆ ವಾಲ್ಮೀಕಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯ ತಿಳಿಯದೇ ಶಾಪಕೊಟ್ಟನು. ತಪ್ಪಾಯಿತೆಂದು ವಾಲ್ಮೀಕಿ ಋಷಿಯನ್ನು ಪಶ್ಚಾತ್ತಾಪ ಪಟ್ಟು ಮನಶಾಂತಿಗಾಗಿ ಪರಮಾತ್ಮನು ವಾಲ್ಮೀಕಿಯನ್ನು ಕುರಿತು ಪುಣ್ಯ ಶ್ಲೋಕದ ಮಹರ್ಷಿ ನಿನ್ನಿಂದ ಲೋಕ ಕಲ್ಯಾಣ ಮಹಾಕಾರ್ಯ ಜರುಗಬೇಕಾಗಿದೆ. ಅದಕ್ಕಾಗಿ ಕ್ರೌಂಚ ವಧೆಯ ಘಟನೆಯು ನಿನ್ನದುರೆ ನಡೆಯಿತು ನಾರದರು ಹೇಳಿದ ರಾಮಚರಿತ್ರೆಯು ನಿನಗೆ ಪೂರ್ಣವಾಗಿ ಅವಗÀಹತವಾಗಿದೆ. ಅದನ್ನು ನೀನು ಕಾವ್ಯರೂಪವಾಗಿ ಮಹಾಕಾವ್ಯವಾಗಿ ಬರೆಯಬೇಕು. ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿಶಿಖರಗಳನ್ನು ನದಿ ಸಮುದ್ರಗಳಿರುವವು ಅಲ್ಲಿಯವರೆಗೆ ಈ ಲೋಕ ಲೋಕಗಳಲ್ಲಿ ರಾಮಾಯಣ ಕಥೆಯು ಪ್ರಚಲಿತವಾಗಿರುತ್ತದೆ ಎಂದು ಬ್ರಹ್ಮದೇವ ಹೇಳಿ ಉಪದೇಶ ಮಾಡಿ ಕಣ್ಮರೆ ಹೊಂದಿದರೆಂದು ಮರುಕ್ಷಣವೇ ಮಹರ್ಷಿಯು ಕಾವ್ಯ ರಚನೆಗೆ ಸ್ಫೂರ್ತಿ ಉದಯವಾಯಿತು.
ರಾಮಾಯಣದಲ್ಲಿ ಶ್ರೀರಾಮ ಜನನದಿಂದ ಹಿಡಿದು ರಾಮನ ಪಟ್ಟಾಭಿಷೇಕದವರಿಗೆ ಮಹಾಕಾವ್ಯ ರೂಪದಲ್ಲಿ 1) ಬಾಲಕಾಂಡ 2) ಅಯೋದ್ಯಕಾಂಡ 3) ಅರಣ್ಯಕಾಂಡ 4)ಕಿಷ್ಕಂದಾಕಾಂಡ 5) ಸುಂದರಕಾಂಡ 6) ಯುದ್ಧಕಾಂಡ 7) ಉತ್ತರಕಾಂಡಗಳಿಂದ ಕಾಂಡುಗಳಿಂದ ವಿಭಜಿಸಲಾಗಿದೆ. 24 ಸಾವಿರ ಶ್ಲೋಕಗಳನ್ನು ಒಳಗೊಂಡ ಶ್ರೀರಾಮ ಚರಿತ್ರೆಯನ್ನು ಅನುಷಪ್ ಛಂದಸ್ಸಿನಲ್ಲಿ ರಚಿಸಿದರು. 7
ವಾಲ್ಮೀಕಿಯು ಶಿಕ್ಷಣ ಪ್ರೇಮಿಯಾಗಿ ಹಾಗೂ ತತ್ವಜ್ಞಾನಿಯಾಗಿ ವಾಲ್ಮೀಕಿಯು ಶಿಕ್ಷಣ ಪ್ರೇಮಿ ಆದರ್ಶ ಶಿಕ್ಷಕನಾಗಿರುವ ಸೀತಾಮಾತೆಯ ಮಕ್ಕಳಾದ ಲವ-ಕುಶರಿಗೆ ಶಾಸ್ತ್ರ ಮತ್ತು ಸಶಾಸ್ತ್ರಭ್ಯಾಸ ವಿಧಿ ವಿಧಾನ ಸಂಸ್ಕಾರಗಳು ಬಿಲ್ವವಿದ್ಯೆ, ಧರ್ನುವಿದ್ಯೆ ಹೀಗೆ ಸಕಲ ವಿದ್ಯೆ ಪರಾಂಗತರನ್ನಾಗಿ ಮಾಡಿರುವರು ಲವಕುಶರಿಗೆ ಉನ್ನತ ಶಿಕ್ಷಣ ನೀಡಿದ್ದು ತತ್ವಜ್ಞಾನಿಯಾಗಿ ಶೋಷಿತರ ನೇತಾರನಾಗಿ ಸಮಾಜ ಸುಧಾರಕರ ಚಿಂತಕರು, ರಾಜನೀತಜ್ಞನಾಗಿ ಪರಿಸರ ಪ್ರೇಮಿಯಾಗಿ ಕವಿಯಾಗಿ ವೈವಿಧ್ಯಮಯವಾಗಿ ಜಗತ್ಪಸಿದ್ದ ಪಡೆದಿದ್ದಾರೆ.
ವಾಲ್ಮೀಕಿ ಜನಾಂಗದ ಹುಟ್ಟು ಮತ್ತು ಬೆಳವಣಿಗೆ :
ವಾಲ್ಮೀಕಿಯ ಹನ್ನೆರಡು ಮಕ್ಕಳು ಒಂದು ಸಲ ತಮ್ಮ ತಮ್ಮೊಳಗೆ ಜಗಳವಾಡಿ ಹೊರಬಿದ್ದರು ಈ ಜಗಳದಲ್ಲಿ ಕೆಲವರು ಸಾವನ್ನಪ್ಪಿದರು. ವಾಲ್ಮೀಕಿಯ ಹಿರಿಯ ಮಗ ಮಂದಲ ಮನಿಬೆಟ್ಟು ರಾಜು ಎಂಬಾತನು ಈ ಭೀಕರ ಬಡಿದಾಟ ಹಾಗೂ ಸಂಹಾರವನ್ನು ಕೇಳಿ ಉಳಿದವರಿಗೆ ಶಿಕ್ಷೆ ವಿಧಿಸಲು ಜಗಳವಾಡಿದ ಸ್ಥಳಕ್ಕೆ ಬಂದನು. ಜಗಳವಾಡಿದ ಸಹೋದರರು ಬೇರೆ ಬೇರೆ ಪ್ರಾಂತಗಳಲ್ಲಿ ಸೇರಿಕೊಂಡರು. ಆಗ ಸ್ಥಳಗಳ ಹೆಸರಿನಿಂದ ಅವರು ಮಾಡುವ ಉದ್ಯೋಗದಿಂದ ಹಾಗೂ ತೊಡುತ್ತಿದ್ದ ವೇಷ ಭೂಷಣಗಳ ಮೇಲೆ ಅವರನ್ನು ಗುರುತಿಸಿ ಅವುಗಳ ಆಧಾರದ ಮೇಲೆ ಪಂಗಡಗಳ ವಿಂಗಡಣೆ ಮಾಡಲಾಯಿತು. ಬೇಡ, ನಾಯಕ, ತಳವಾರ, ಪಾಳೇಗಾರ, ವಾಲಿಕಾರ, ಗುರಿಕಾರ, ಪರಿವಾರ, ಕನಕಜಾತಿ, ಬಿಲ್ಲರು, ಕನ್ನಯ್ಯನಜಾತಿ, ಮ್ಯಾಸ ಬೇಡರ, ವಾಲ್ಮೀಕಿ ಹೀಗೆ ಸಮಾಜದ ಬೆಳವಣಿಗೆ ಹೀಗೆ 3 ವಿಧದ ಗೋತ್ರಗಳಾಗಿ ವಿಂಗಡನೆಯಾದವು. 1) ಸೂರ್ಯವಂಶ 2) ಚಂದ್ರವಂಶ 3) ನಕ್ಷತ್ರವಂಶ ಎಂದು ನಾಮಕರಣವಾದವು.
ಹೀಗೆ ವಾಲ್ಮೀಕಿ ಸಮಾಜದಲ್ಲಿ 500ಕ್ಕೂ ಹೆಚ್ಚು ಬೆಡಗುಗಳಾಗಿ ಇಂದಿಗೂ ಪ್ರಚಲಿತದಲ್ಲಿವೆ. ಈ ದಿನಮಾನದಲ್ಲಿ ನಮ್ಮ ಭಾರತದಲ್ಲಿ ವಾಲ್ಮೀಕಿ ಜನಸಂಖ್ಯೆ 1) ಜಮ್ಮು ಕಾಶ್ಮೀರ 2 ಲಕ್ಷ +4 ಲಕ್ಷ, 2) ಪಂಜಾಬ 9 ಲಕ್ಷ, 3) ಹರಿಯಾಣ -14 ಲಕ್ಷ , 4) ರಾಜಸ್ಥಾನ -78 ಲಕ್ಷ, 5) ಗುಜರಾತ-15 ಲಕ್ಷ, 6) ಮಹಾರಾಷ್ಟ್ರ -45 ಲಕ್ಷ, 7) ಗೋವಾ -5 ಲಕ್ಷ, 8) ಕರ್ನಾಟಕ -45 ಲಕ್ಷ, 9) ಕೇರಳ-1.2 ದಶಲಕ್ಷ, 10) ತಮಿಳನಾಡು -36ಲಕ್ಷ, 11) ಆಂದ್ರಪ್ರದೇಶ -24 ಲಕ್ಷ, 12) ಛತ್ತಿಸಗಡ -24 ಲಕ್ಷ, 13) ಓಡಿಸಾ -37 ಲಕ್ಷ, 14) ಜಾಖರ್ಂಡ -12 ಲಕ್ಷ, 15) ಬಿಹಾರ-9 ಮಿಲಿಯನ್, 16) ಪಶ್ಚಿಮ ಬಂಗಾಳ-18 ಲಕ್ಷ, 17) ಮಧ್ಯಪ್ರದೇಶ-98ಲಕ್ಷ, 18) ಉತ್ತರಪ್ರದೇಶ -200 ಲಕ್ಷ, 19) ಉತರಖಂಡ -20 ಲಕ್ಷ, 20) ಹಿಮಾಚಲ-45 ಲಕ್ಷ, 21) ಸಿಕ್ಕಿಂ-1 ಲಕ್ಷ, 22) ಆಸಮ್- ಒಂದು ಮಿಲಿಯನ್, 23) ಮಿಜೋರಾಮ್-1.5ಲಕ್ಷ, 24) ಅರುಣಾಚಾಲಪ್ರದೇಶ -1 ಲಕ್ಷ, 25) ಮಣಿಪುರ -7 ಲಕ್ಷ, 26) ನಾಗಾಲ್ಯಾಂಡ -2 ಲಕ್ಷ, 27) ಮಣಿಪುರ- 7 ಲಕ್ಷ, 28) ತ್ರಿಪುರ -2 ಲಕ್ಷ, 29) ದೆಹಲಿ-40 ಲಕ್ಷ ಇರುವ ಜನಾಂಗವು ದೇಶಕ್ಕೆ ಹಲವಾರು ಕೊಡುಗೆಯನ್ನು ಕೊಟ್ಟಿದೆ. ನಾಡು ನುಡಿಗಾಗಿ ಸ್ವಾತಂತ್ರ್ಯಕ್ಕಾಗಿ ಈ ಸಮಾಜದ ಸಾಕಷ್ಟು ವೀರರು ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಅಂತೆಯೆ ಈ ಜನಾಂಗದವರು ಕುರಿತು ದಿ. ವಿಲಿಯಂಸ್ಮಿತ್ ಈ ಜನರ ಬಗ್ಗೆ ಹೇಳಿದ್ದನೆಂದರೆ ಈ ಜಗತ್ತಿನಲ್ಲಿ ಶೂರರು ಸಿಗಬಹುದು. ಆದರೆ ಬೇಡರಿಗಿಂತ ಶೂರರು ದೊರೆಯಲಾರರು. ವಾಲ್ಮೀಕಿ ಜನಾಂಗದಲ್ಲಿಯ ಹೆಮ್ಮೆ ಪಡುವಂತೆ ವಂಶಜರು ಆಗಿ ಹೋಗಿರುವರು,
1. ರಾಮಾಯಣದಲ್ಲಿ ಬರುವ ಶಬರಿ
2. ಭಕ್ತಿಗೆ ಹೆಸರಾದ ತನ್ನ ಕಣ್ಣನ್ನೆ ಕಿತ್ತು ಶಿವನಿಗೆ ಇಟ್ಟ ಶಿವಭಕ್ತ ಬೇಡರ ಕಣ್ಣಪ್ಪ
3. ಮಹಾಭಾರತದಲ್ಲಿ ಬರುವ ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕೊಟ್ಟ ಏಕಲವ್ಯ
4. ಮಹಾಸ್ವಾತಂತ್ರ್ಯ ಸೇನಾನಿ -ರಾಜಾ ವೆಂಕಟಪ್ಪ ನಾಯಕ
5. ಚಿತ್ರದುರ್ಗದ ಸಂಸ್ಥಾಪಕ -ರಾಜಾವೀರ ಮದಕರಿ ನಾಯಕ
6. ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು – ಹಕ್ಕ-ಬುಕ್ಕರು.
7. ಸಿಂಧೂರ ಸಿಂಹನಾಗಿ ಮೆರೆದ ಬೆಂಡರ ಭಂಟ -ವೀರ ಸಿಂಧೂರ ಲಕ್ಷ್ಮಣ
8. ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಹಲಗಲಿಯ ರಾಮಕ್ಕ
9. ಸುರಪುರದ ವೆಂಕಟಪ್ಪ ನಾಯಕ
10. ಗಂಡು ಹೆಜ್ಜೆ ಹಾಕಿ ವೀರಾವೇಶದಿಂದ ಹೋರಾಡಿದ ಧೀರ ಮಹಿಳೆ ಓನಕೆ ಓಬವ್ವ ಹೀಗೇ ಇವರೆಲ್ಲ ವಾಲ್ಮೀಕಿ ಸಂತತಿಯವರೆಂದು ಹೇಳಲು ತುಂಬಾ ಹೆಮ್ಮೆ ಸಂತೋಷವೆನಿಸುತ್ತದೆ. ಇಂತಹ ಸಮಾಜದಲ್ಲಿ ಕೆಳವರ್ಗದಲ್ಲಿ ಜನಿಸಿದ ಎಷ್ಟೋ ವ್ಯಕ್ತಿಗಳು ಅವರ ಸಾಧನೆಯಿಂದ ಉತ್ತುಂಗಕ್ಕೇರಿ ಇತಿಹಾಸ ಪುಟಗಳಲ್ಲಿ ಅಜರಾಮರಾಗಿದ್ದಾರೆ.
ಇಂತಹ ಮಹಾಕಾವ್ಯ ರಾಮಾಯಾಣವನ್ನು ನೀಡಿದಂತ ವಾಲ್ಮೀಕಿಯು ಒಂದು ಸಮುದಾಯಕ್ಕೆಲ್ಲದೇ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದ ಘನ ಸರಕಾರವು ಸೀಗೆ ಹುಣ್ಣಿಮೆಯಂದು ವಾಲ್ಮೀಕಿ ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಿಸುವ ನಿರ್ಧರಿಸುವುದಕ್ಕೆ ಧನ್ಯವಾದಗಳು ಈ ವಾಲ್ಮೀಕಿ ರಾಮಾಯಣವನ್ನು ಭಕ್ತಿಯಿಂದ ಪಠಣ ಮಾಡಿ ಪ್ರತಿ ದಿನವು ದೇವರೆಂದು ಋಷಿ ಮಹರ್ಷಿಯನ್ನು ಸ್ಮರಿಸಿಕೊಳ್ಳೋಣ.
– ಶ್ರೀಮತಿ ಸುಮಂಗಲಾ ಮ. ತಳವಾರ (ಚಿಗರಿ) ಶಿಕ್ಷಕಿ,
ಶ್ರೀ ಸಿ.ಎಸ್.ಪಾಟೀಲ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಗದಗ.
More Stories
ಸ್ವಾತಂತ್ರ್ಯದ ಕಿಡಿಹೊತ್ತಿಸಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಮೊದಲ ಮಹಿಳೆ- ಕಿತ್ತೂರಿನ ರಾಣಿ ಚೆನ್ನಮ್ಮ
ಬಹುಮುಖ ಪ್ರತಿಭೆ ಕು.ವೈಷ್ಣವಿ ರಾಠೋಡ, ಸಾಂಸ್ಕೃತಿಕ ಕಲಾ ಸಂಪತ್ತು
ಗಾಂಧೀಜಿ ತತ್ವದಡಿಯಲ್ಲಿ ಕಾಮನೂರು ಗ್ರಾಮ