December 22, 2024

AKSHARA KRAANTI

AKSHARA KRAANTI




ಬ್ಲಾಸಮ್ ಶಾಲೆಯಲ್ಲಿ ಯೋಗ ದಿನಾಚರಣೆ

ಕನಕಪುರ,: ಬ್ಲಾಸಮ್ ಶಾಲೆಯಲ್ಲಿ 10ನೇ ವರ್ಷದ ‘ ವಿಶ್ವ ಯೋಗ ದಿನಾಚರಣೆ ಸಂಭ್ರಮ ನೆರವೇರಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಪ್ರಿನ್ಸಿಪಾಲರದ ಶ್ರೀಮತಿ ಗಂಗಾಂಬಿಕೆಯವರು, ಯೋಗವನ್ನು ಪತಂಜಲಿ ಮಹರ್ಷಿಯವರು ನಮಗೆ ನೀಡಿದರು ಅವರು ಅಭ್ಯಾಸ ಮಾಡಿ ಅದರಲ್ಲಿ ನಿಪುಣರಾಗಿ ನೀಡಿದಂತಹ ಮಾರ್ಗದರ್ಶನ ಯೋಗ ಮಾಡುವುದರಿಂದ ದೇಹವನ್ನು ಸದೃಢಗೊಳಿಸುವುದಲ್ಲದೆ ಮನಸು ಏಕಾಗ್ರತೆ ದೇಹದ ಸ್ವಅಧ್ಯಾಯನ ಆರೋಗ್ಯ ಮತ್ತು ಜೀವನ ಪದ್ಧತಿ ದಿನನಿತ್ಯದ ವ್ಯವಹಾರಿಕ ಜೀವನ ಶೈಲಿಯನ್ನು ಎಲ್ಲಾ ರೀತಿಯಲ್ಲೂ ಯೋಜಿಸಿ ಯೋಚಿಸಿ ಜೋಡಿಸಿ ಉಳಿಸಿ ಬೆಳೆಸಿ ನಮಗೆ ನೀಡಿದ್ದಾರೆ ಅದನ್ನು ಈ ದಿನ ಭಾರತ ವಿಶ್ವಕ್ಕೆ ನೀಡಿ ವಿಶ್ವವೇಲ್ಲ ಆಚರಣೆ ಮಾಡುವಂತಾಗಿದೆ ಅದು ನಮ್ಮ ದೇಶದ ಹೆಮ್ಮೆ ಅಂತಹ ಯೋಗ ದಿನವನ್ನು ನಾವೆಲ್ಲ ಆಚರಣೆ ಮಾಡುತ್ತಿರುವುದು ಸುದೈವ ಇಂತಹ ಪರಂಪರೆ ಇರುವ ಯೋಗಭ್ಯಾಸವನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಜೀವನ ಉತ್ಸಾಹವನ್ನು ಹೆಚ್ಚು ಹೆಚ್ಚು ನೀಡುತ್ತಿದೆ ಎಂದರು.

ಯೋಗ ದಿನಾಚರಣೆಯಲ್ಲಿ ಶಾಲಾ ಮಕ್ಕಳು, ಪ್ರಾಂಶುಪಾಲರು, ಶಿಕ್ಷಕರು ಬಹಳ ಉತ್ಸಾಹ ಸಂಭ್ರಮದಿಂದ ಆಚರಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!