ಬೆಂಗಳೂರು,: ಕೇಂದ್ರ ಉಕ್ಕು ಹಾಗೂ ಬಾರಿ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಎಚ್ ಡಿ ಕುಮಾರಸ್ವಾಮಿ ಅವರನ್ನು ರಾಜ್ಯ ಜೆಡಿಎಸ್ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಭೇಟಿಯಾಗಿ ಸನ್ಮಾನಿಸಿದರು.
ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಗದಗ ಜಿಲ್ಲೆಯು ಒಂದು ಅಭಿವೃದ್ಧಿ ಹೊಂದದ ಜಿಲ್ಲೆಯಾಗಿ ಉಳಿದಿದ್ದು, ಜಿಲ್ಲೆಯ ಯುವಕರು ಉದ್ಯೋಗ ಅರಸಿಕೊಂಡು ಬೇರೆ ಬೇರೆ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ, ಮಕ್ಕಳಿಂದ ದೂರವಾದ ಪಾಲಕರು ಕೂಡ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅತ್ತ ಕಲ್ಯಾಣ ಕರ್ನಾಟಕಕ್ಕೂ ಸೇರದೆ ಇತ್ತ ಮುಂಬೈ ಕರ್ನಾಟಕದ ಭಾಗವಾಗದೆ ಅಭಿವೃದ್ಧಿ ಗದಗ ಜಿಲ್ಲೆಯಲ್ಲಿ ಮರೀಚಿಕೆಯಾಗಿದೆ. ಗದಗ ಜಿಲ್ಲೆಯಲ್ಲಿ ಎಲ್ಲ ಸಂಪನ್ಮೂಲಗಳು ಲಭ್ಯವಿದ್ದರೂ ಕೂಡ ಯಾವುದೇ ಅಭಿವೃದ್ಧಿಯಾಗಲಿ ವಿಶೇಷ ಕೈಗಾರಿಕೆಗಳಾಗಲಿ ಇದುವರೆಗೆ ಸ್ಥಾಪನೆಯಾಗಿರುವುದಿಲ್ಲ ಎಂದು ಕೇಂದ್ರ ಸಚಿವರಿಗೆ ವೆಂಕನಗೌಡ ಆರ್ ಗೋವಿಂದಗೌಡ್ರ ವಿವರಿಸಿದರು.
ಗದಗ ಜಿಲ್ಲೆ ಆದ್ಯಂತ ಪವನ್ ವಿದ್ಯುತ್ ಯಂತ್ರಗಳು ಹಾಗೂ ಸೌರಶಕ್ತಿ ವಿದ್ಯುತ್ ಉತ್ಪಾದಕ ಸೋಲಾರ್ ಪ್ಯಾನೆಲ್ಗಳ ಅಳವಡಿಕೆ ಬಿಟ್ಟರೆ ಯಾವುದೇ ಉದ್ಯೋಗಗಳು ಗದಗಿಗೆ ಬರಲಿಲ್ಲ. ಇವೆರಡರಿಂದ ಯಾವುದೇ ಹುದ್ದೆಗೆ ಸೃಷ್ಟಿ ಆಗಿರುವುದಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ವಿವರಿಸಿದರು.
ಗದಗ ಜಿಲ್ಲೆ ಅಭಿವೃದ್ಧಿ ಹೊಂದಬೇಕು ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು ಎಂದರೆ ಬೃಹತ್ ಕೈಗಾರಿಕೆಗಳು ಸ್ಥಾಪನೆ ಆಗಬೇಕು ಇದಕ್ಕೆ ತಾವು ವಿಶೇಷ ಕಾಳಜಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ನೀಡಿ ಮನವಿ ಮಾಡಿಕೊಂಡರು.
ಎಲ್ಲವನ್ನು ಸಂಯಮದಿಂದ ಕೇಳಿದ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದು ನನ್ನ ಗುರಿ ಈ ಬಗ್ಗೆ ನಾನು ಗಮನಹರಿಸಿ ಕ್ರಮ ಕೈಕೊಳ್ಳುತ್ತೇನೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಮನವಿ ಸ್ವೀಕರಿಸಿ ಭರವಸೆ ನೀಡಿದರು.
ವರದಿ : ಮಹಾಂತೇಶ ಮಸ್ತಮರ್ಡಿ
More Stories
ಮೊದಲ ಹಂತದ 100 ನೂತನ ಬಿಎಂಟಿಸಿ ಬಸ್ ಗಳ ಲೋಕಾರ್ಪಣೆ
ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಗುತ್ತಿದೆ : ಸಿ.ಎಂ. ಸಿದ್ದರಾಮಯ್ಯ
ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ನಾನು ಸದಾ ಸಿದ್ದ : ಸಿಎಂ ಸಿದ್ದರಾಮಯ್ಯ