December 23, 2024

AKSHARA KRAANTI

AKSHARA KRAANTI




ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಮಸ್ಯೆ ಪರಿಹಾರಕ್ಕೆ ಡಿಸಿಪಿಗೆ ಮನವಿ

ಹೈದರಾಬಾದ,: ನಗರದ ಪೊಲೀಸ ಸಂಚಾರ ಡಿಸಿಪಿ ಕನ್ನಡಿಗ ಐಪಿಎಸ್ ಅಧಿಕಾರಿ ರಾಹುಲ ಹೆಗಡೆಯವರನ್ನು ಮಹಾತ್ಮ ಗಾಂಧಿ ಕೇಂದ್ರ ಸಬ್ ನಿಲ್ದಾಣದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಯ ನಿಯೋಗ ಭೇಟಿಯಾಗಿ ನಮ್ಮ ಸಾರಿಗೆ ಬಸ್ಸ್ ಸಂಚಾರದಲ್ಲಿ ಏನಾದರೂ ಸಮಸ್ಯೆಯನ್ನು ಬಂದರೆ ದಯವಿಟ್ಟು ಶೀಘ್ರವೇ ಪರಿಹಾರ ಮಾಡಿಕೊಡಬೇಕು ಎಂದು ಕರಾರನಿ ನಿಯಂತ್ರಣಾಧಿಕಾರಿ ವಿಠಲ ಅವರು ಮನವಿ ಮಾಡಿದರು.

ಕರ್ನಾಟಕದಿಂದ ಪ್ರತಿನಿತ್ಯ ಹೈದರಾಬಾದ ಕೇಂದ್ರಕ್ಕೆ ಅನೇಕ ಬಸ್ಸಗಳು ಆಗಮಿಸುತ್ತವೆ. ಹೀಗಾಗಿ ಗಣೇಶ ಹಬ್ಬದ ಸಂದರ್ಭದಲ್ಲಿ ನಗರದ ಹೊರಹೊರತುಲದಲ್ಲಿ ನಮ್ಮ ಸಾರಿಗೆ ಬಸ್ಸ ನಿಲ್ಲಿಸಲು ತಾವು ಅನುವು ಮಾಡಿಕೊಡಬೇಕಾಗಿ ವಿನಂತಿಸಿದರು. ನಮ್ಮ ಬಸ್ಸಗಳ ಸುರಕ್ಷೆತೆಯ ಬಗ್ಗೆ ಹಾಗೂ ಸಿಬ್ಬಂದಿಗಳ ಸುರಕ್ಷತೆ ಮುಖ್ಯವಾಗಿದೆ. ಹೀಗಾಗಿ ತಮ್ಮ ಸಹಕಾರ ನೀಡಬೇಕು ಎಂದು ಡಿಸಿಪಿಯವರಿಗೆ ನಿಯೋಗ ಮನವಿ ಮಾಡಿತು.ಹೆಗಡೆಯವರ ಆಶ್ವಾಸನೆ : ನಗರದಲ್ಲಿ ನಿಮ್ಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಇಲಾಖೆ ನಿಮ್ಮಗೆ ಸಹಕಾರ ನೀಡುತ್ತದೆ ಎಂದು ರಾಹುಲ ಹೆಗಡೆ ಐಪಿಎಸ್ ಕರ್ನಾಟಕ ಸಾರಿಗೆ ನಿಗಮದ ನಿಯೋಗಕ್ಕೆ ಆಶ್ವಾಸನೆ ನೀಡಿದರು. ತಾವು ನಿರರ್ಗಳವಾಗಿ ಇರಿ ಯಾವುದೇ ತೊಂದರೆಯಾದರೇ ನಮ್ಮನ್ನು ಭೇಟಿಯಾಗಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೆಗಡೆ ನುಡಿದರು.

ಕರ್ನಾಟಕ ಸಾರಿಗೆಯಿಂದ ಸನ್ಮಾನ : ನಗರದ ಸಂಚಾರಿ ಪೊಲೀಸ ಉಪ ಆಯುಕ್ತರಾಗಿ ಅಧಿಕಾರವಹಿಸಿಕೊಂಡಿರುವ ಕಾರಣ ಇಂದು ಕಛೇರಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೈದರಾಬಾದ ಕಛೇರಿಯ ಸಿಬ್ಬಂದಿಗಳಿಂದ ರಾಹುಲ ಹೆಗಡೆ ಐಪಿಎಸ್ ಅವರಿಗೆ ವಿಠಲ, ಉದಯಕುಮಾರ, ದಾಮಾಜಿ, ಜ್ಯೋತಿ ಜಾಧವ, ಲೋಕೇಶ ಸಾಗವೇ ಸನ್ಮಾನಿಸಿ ಹೂಗೂಚ್ಚ ನೀಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೈದರಾಬಾದ ಕಛೇರಿಯ ಸಿಬ್ಬಂದಿಗಳಿಂದ ನಗರ ಸಾರಿಗೆ ಪೊಲೀಸ ಡಿಸಿಪಿ ರಾಹುಲ ಹೆಗಡೆ ಐಪಿಎಸ್‍ಗೆ ವಿಠಲ, ಉದಯ ಕುಮಾರ, ದಾಮಾಜಿ, ಜ್ಯೋತಿ ಜಾಧವ, ಲೋಕೇಶ ಸಾಗವೇ ಸನ್ಮಾನಿಸಿ ಹೂಗೂಚ್ಚ ನೀಡಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!