ಯಲಬುರ್ಗಾ,: ತಾಲೂಕಿನ ಬಂಡಿ ಗ್ರಾಮದ ಶ್ರೀ ಶರಣಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಸಂಸ್ಥೆಯ ಗೌರವ ಸಲಹೆಗಾರರಾದ ಮತ್ತು ಆರೋಗ್ಯ ಇಲಾಖೆಯ ನಿವೃತ್ತ ನೌಕರರಾದ ಮುದ್ದಪ್ಪ ಲಿಂಗಶೆಟ್ಟರ್ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ನಿವೃತ್ತ ಲೆಕ್ಕಾಧಿಕಾರಿಯಾದ ಈಶಪ್ಪ ಎಂ. ನೆಲಾಗಣಿ ನೆರವೇರಿಸಿದರು.
ಇದೇ ವೇಳೆ ಮುದ್ದಣ್ಣ ಲಿಂಗಶೆಟ್ಟರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶಾಭಿಮಾನದ ಜೊತೆಗೆ ಅರೋಗ್ಯವಂತರಾಗಬೇಕು ಮತ್ತು ನಾಡು, ನುಡಿಗೆ ದಕ್ಕೆ ಬಂದಾಗ ಸದ ಹೋರಾಟ ಮಾಡಲು ಸಿದ್ದ ರಾಗಬೇಕು ಎಂದರು.ಇನ್ನೋರ್ವ ಅತಿಥಿಗಳಾದ ಈಶಪ್ಪ ಎಂ. ನೆಲಾಗಣಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳುವುದರ ಜೊತೆಗೆ ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು, ಮೊಬೈಲ್ ನಿಂದ ದೂರವಿದ್ದು ಹೊರಾಂಗಣ ಆಟಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಅಧಿಕಾರಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಹೆಚ್.ಪಿ. ತೊಂಡಿಹಾಳ, ಸಹಕಾರ್ಯದರ್ಶಿ ಎನ್.ಜಿ. ಅರಕೇರಿ ಹಾಗೂ ನಿರ್ದೇಶಕರು ಹಾಗೂ ಶಾಲೆಯ ಆಡಳಿತ ಅಧಿಕಾರಿಯಾದ ಮಹಾಂತೇಶ ಬಿ. ನೆಲಾಗಣಿ, VSSN ವಿಎಸ್ಎಸ್ಎನ್ ವ್ಯವಸ್ಥಾಪಕರಾದ ಪವನ್ ಕುಮಾರ್ ಕುಲಕರ್ಣಿ, ಮುಖ್ಯ ಶಿಕ್ಷಕರಾದ ಶ್ರೀಮತಿ ನವ್ಯಾ ಎಂ. ನೆಲಾಗಣಿ, ಸಹಶಿಕ್ಷಕರಾದ ಕು. ಈರಮ್ಮ ಕೆ. ಮೂಲಿಮನಿ, ಶ್ರೀಮತಿ ಸರೋಜಾ ಅಲೋಕ್ ಮಹಾಮನಿ, ಶಿಕ್ಷಣ ಪ್ರೇಮಿಗಳಾದ ಶರಣಪ್ಪ ಸುಣಗಾರ, ನಾಗರಾಜ್ ಸುಣಗಾರ, ಶ್ರೀಮತಿ ಈರಮ್ಮ ಬಸವಂತಪ್ಪ ಗೋಟೂರು, ಸುನೀಲ್ ಎಫ್. ಕಳ್ಳಿ, ಅತಿಥಿ ಶಿಕ್ಷಕರು ಹಾಗೂ ಪಾಲಕರಾದ ಶಿವಪ್ಪ ಕೊತಬಾಳ, ಕೊಟ್ರೇಶ್, ಸೇರಿದಂತೆ ಇನ್ನಿತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳು ಭಾಷಣ ಮಾಡಿದರು ಹಾಗೂ ಕಾರ್ಯದರ್ಶಿ, ಸಹಕಾರ್ಯದರ್ಶಿ, ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯನೆರವೇರಿಸಿದರು. ನಂತರ ನಿವೃತ್ತ ನೌಕರರಿಗೆ ಹಾಗೂ ಶಿಕ್ಷಣಪ್ರೇಮಿಗಳಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಮಹಾಂತೇಶ ನೆಲಾಗಣಿ ಕಾರ್ಯಕ್ರಮ ನಿರ್ವಹಿಸಿದರು.
More Stories
ಬ್ರಿಟಿಷರ ವಿರುದ್ದ ದಂಗೆ ಎದ್ದ ಮೊದಲ ವೀರ ಮಹಿಳೆ ಕಿತ್ತೂರ ಚೆನ್ನಮ್ಮ
ಶರಣಬಸವೇಶ್ವರ ಶಾಲೆಯಲ್ಲಿ ಗಾಂಧೀಜಿ- ಶಾಸ್ತ್ರಿಜಿ ಜಯಂತಿ ಆಚರಣೆ
ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಿರಿ : ಶ್ರೀಧರ ಮುರಡಿ ಶ್ರೀಗಳು