ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಶ್ರೀ ಶರಣಬಸವೇಶ್ವರ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ಹಾಗೂ 1ನೇ ತರಗತಿ ರಿಂದ 5ನೇ ತರಗತಿ ರವರೆಗೆ ಪ್ರವೇಶಗಳು ಪ್ರಾರಂಭವಾಗಿವೆ.
ಸುಮಾರು 14 ವರ್ಷಗಳಿಂದ ಬಂಡಿ ಗ್ರಾಮದಲ್ಲಿ ನಮ್ಮ ಶ್ರೀ ಶರಣಬಸವೇಶ್ವರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಬಂಡಿ ಇದರ ಅಡಿಯಲ್ಲಿ ಶ್ರೀ ಶರಣಬಸವೇಶ್ವರ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಎಂಬ ಶಿರೋನಾಮೆಯೊಂದಿಗೆ ತನ್ನದೇ ಆದ ಇತಿಹಾಸ ಸೃಷ್ಟಿಸಿದ ಬಂಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ನಮ್ಮ ಶಾಲೆಯ ವಿದ್ಯಾರ್ಥಿಗಳು ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಆಗಿದ್ದಾರೆ. ಮಕ್ಕಳು ಆಯ್ಕೆಯಾಗುವಲ್ಲಿ ಶ್ರಮಿಸಿದ್ದಕ್ಕಾಗಿ ನಮ್ಮ ಸಂಸ್ಥೆಯ ಅಡಿಯಲ್ಲಿ ಪಾಲಕರ ಅಪೇಕ್ಷೆಯ ಮೇರೆಗೆ ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನಿಂದ 3,4,5, ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ನವೋದಯ, ಮುರಾರ್ಜಿ, ಕಿತ್ತೂರರಾಣಿ ಚೆನ್ನಮ್ಮ, ಆದರ್ಶ, ಸೈನಿಕ, ಅಳಿಕೆ ಹಾಗೂ ವಿವಿಧ ವಸತಿ ಶಾಲೆಗಳ ಪ್ರವೇಶ ಪೂರ್ವ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ. ಆದ ಕಾರಣ ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿದ್ದಲ್ಲಿ ಶಾಲಾ ಶುಲ್ಕದಲ್ಲಿಯೇ ನವೋದಯ ಮಾದರಿಯ ತರಬೇತಿಯನ್ನು ನೀಡುತ್ತೇವೆ. ಆದ ಕಾರಣ ಪಾಲಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ದಾಖಲಾತಿ ಮಾಡಿಸಬೇಕೆಂದು ತಮ್ಮಲ್ಲಿ ವಿನಂತಿ.
ಹಾಗೇ ಶಾಲಾ ಪ್ರಾರಂಭೋತ್ಸವ ವೇಳೆ ಯೋಗ ದಿನ ಸಹ ಆಚರಿಸಲಾಯಿತು.
ಆಡಳಿತ ಅಧಿಕಾರಿಗಳು : ಶ್ರೀ ಮಹಾಂತೇಶ ಬಿ. ನೆಲಾಗಣಿ.9964811198.,
ಮುಖ್ಯ್ಯೊಪಾಧ್ಯಾಯರು : ಶ್ರೀಮತಿ ನವ್ಯಾ ಎಂ. ನೆಲಾಗಣಿ. 9481467998.
More Stories
ಬ್ರಿಟಿಷರ ವಿರುದ್ದ ದಂಗೆ ಎದ್ದ ಮೊದಲ ವೀರ ಮಹಿಳೆ ಕಿತ್ತೂರ ಚೆನ್ನಮ್ಮ
ಶರಣಬಸವೇಶ್ವರ ಶಾಲೆಯಲ್ಲಿ ಗಾಂಧೀಜಿ- ಶಾಸ್ತ್ರಿಜಿ ಜಯಂತಿ ಆಚರಣೆ
ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆ