ಶರಣಬಸವೇಶ್ವರ ಶಾಲೆಯಲ್ಲಿ ಗಾಂಧೀಜಿ-ಶಾಸ್ತ್ರಿಜಿ ಜಯಂತಿ ಆಚರಣೆ
ಅಕ್ಷರಕ್ರಾಂತಿ ನ್ಯೂಸ್
ಯಲಬುರ್ಗಾ,: ತಾಲೂಕಿನ ಬಂಡಿ ಗ್ರಾಮದ ಶ್ರೀ ಶರಣಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಟೋಬರ್ 02 ರಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 155ನೇ ಜನ್ಮ ದಿನಾಚರಣೆ ಹಾಗೂ ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ ಶಾಸ್ತ್ರಿಜಿ ಯವರ 120ನೇ ಜಯಂತಿಯನ್ನು ಆಚರಿಸಲಾಯಿತು.
ಮೊದಲಿಗೆ ಮಹಾನ್ ನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸ್ವಚ್ಛತಾ ಆಂದೋಲನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಮೂಲಕ ಶ್ರಮದಾನ ಮಾಡಿದರು.ಮಕ್ಕಳು ಭಾಷಣ ಮಾಡಿ, ದೇಶಭಕ್ತಿ ಗೀತೆ ಹಾಡಿದರು. ನಂತರ ಮಹಾತ್ಮ ಗಾಂಧೀಜಿ ಯವರ ನೆಚ್ಚಿನ ಗೀತೆಯಾದ ರಘುಪತಿ ರಾಘವ ರಾಜಾರಾಮ್ ಎನ್ನುವ ಗೀತೆಯನ್ನು ಎಲ್ಲರೂ ಸೇರಿ ಹಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಅಧಿಕಾರಿಯಾದ ಮಹಾಂತೇಶ ಬಿ. ನೆಲಾಗಣಿ ರವರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಮಹಾತ್ಮಗಾಂಧೀಜಿ ಪಟ್ಟ ಶ್ರಮ, ತ್ಯಾಗ ಬಲಿದಾನದ ಕುರಿತು ಮಕ್ಕಳಿಗೆ ತಿಳಿಸಿದರು, ಗಾಂಧೀಜಿಯವರು ಭಗವದ್ಗೀತೆಯನ್ನು ಸಂಪೂರ್ಣವಾಗಿ ಓದಿ ಅದನ್ನು ದಕ್ಷಿಣ ಆಫ್ರಿಕಾದಲ್ಲಿರುವ ಅವರ ಸ್ನೇಹಿತರಿಗೆ ಹೇಳುತ್ತಿದ್ದಿದ್ದು ಹಾಗೂ ಮಧ್ಯ- ಮಾಂಸ ಮುಟ್ಟುವುದಿಲ್ಲ ಎನ್ನುವ ಶಪಥ ಮಾಡಿದ್ದು, ಮತ್ತು ಅವರು ದೇಶಕ್ಕಾಗಿ ಅನುಭವಿಸಿದ ಜೈಲುವಾಸ, ಜೈಲಿನಲ್ಲಿ ಇರುವಾಗಲೇ ರಚಿಸಿದ ತಮ್ಮ ಆತ್ಮಚರಿತ್ರೆ ಮೈ ಎಕ್ಸ್ಪೀರಿಮೆಂಟ್ ವಿಥ್ ಟ್ರುಥ್ ( ನನ್ನ ಸತ್ಯಾನ್ವೇಷಣೆ )ಎಂಬ ಗ್ರಂಥದ ಕುರಿತು ತಿಳಿಸಿದರು. ನಂತರ ಇನ್ನೊರ್ವ್ ಸ್ವಾತಂತ್ರ್ಯ ಹೋರಾಟಗಾರರದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಈ ದೇಶ ಕಂಡ ಶ್ರೇಷ್ಠ ಪ್ರಧಾನಿ ಎಂದರು, ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ನಿಧನದ ನಂತರ ಎರಡನೇ ಪ್ರಧಾನಿಯಾದವರು, ಜೈ ಜವಾನ್ ಜೈ ಕಿಸಾನ್ ಎಂಬ ಇವರ ಘೋಷವಾಕ್ಯವನ್ನು ಗಮನಿಸಿದಾಗ ಈ ನಾಡಿನ ಸೈನಿಕರು ಮತ್ತು ರೈತರ ಬಗ್ಗೆ ಅವರಿಗಿರುವ ಕಾಳಜಿ ತಿಳಿಯುತ್ತದೆ ಎಂದರು.ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ನವ್ಯಾ ಎಂ. ನೆಲಾಗಣಿ ಹಾಗೂ ಸಹ ಶಿಕ್ಷಕರಾದ ಕು.ಈರಮ್ಮ ಕಳಕಪ್ಪ ಮೂಲಿಮನಿ, ಶ್ರೀಮತಿ ಸರೋಜಾ ಅಲೋಕ್ ಮಹಾಮನಿ ಹಾಗೂ ಎರಡನೇ ಅಂಗನವಾಡಿ ಕೇಂದ್ರದ ಪರಿಚಾರಕಿ ಶ್ರೀಮತಿ ಈರಮ್ಮ, ಶಾಲೆಯ ವಿದ್ಯಾರ್ಥಿಗಳು ಮತ್ತು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಾದ ಕು. ಸಂಗೀತಾ ಹಾಗೂ ಲಕ್ಶ್ಮಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
More Stories
ಬ್ರಿಟಿಷರ ವಿರುದ್ದ ದಂಗೆ ಎದ್ದ ಮೊದಲ ವೀರ ಮಹಿಳೆ ಕಿತ್ತೂರ ಚೆನ್ನಮ್ಮ
ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆ
ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಿರಿ : ಶ್ರೀಧರ ಮುರಡಿ ಶ್ರೀಗಳು