December 23, 2024

AKSHARA KRAANTI

AKSHARA KRAANTI




ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಿರಿ : ಶ್ರೀಧರ ಮುರಡಿ ಶ್ರೀಗಳು

ಯಲಬುರ್ಗಾ : ಗ್ರಾಮದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕು ಎಂದು ಯಲಬುರ್ಗಾ ಶ್ರೀಧರ ಮುರಡಿಮಠದ ಬಸವಲಿಂಗೇಶ್ವರ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಹಾನಗಲ್ ಕುಮಾರೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ವೃತ್ತ ಲೋಕಾರ್ಪಣೆ ಮತ್ತು ನಿವೃತ್ತ ನೌಕರರಿಗೆ ಹಾಗೂ ಮಾಜಿ ಸೈನಿಕರಿಗೆ ಹಮ್ಮಕೊಂಡ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪ್ರವಚನ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಐಕ್ಯತೆ, ಸಾಮರಸ್ಯವಿರುವುದು ಇಂದಿಗೂ ಪ್ರಸ್ತುತ ಎನ್ನುವುದು ಈ ಗ್ರಾಮದ ಜನತೆಯನ್ನು ನೋಡಿದರೇ ತಿಳಿಯುತ್ತದೆ.

ಈ ಗ್ರಾಮದ ಜನತೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು, ಪ್ರವಚನಗಳನ್ನು ನಡೆಸಿಕೊಂಡು ಹೋಗುತ್ತಿರುವುದರಿಂದ, ಮುಂದಿನ ಪೀಳಿಗೆಯು ಸಹ ಧಾರ್ಮಿಕವಾಗಿ ನಡೆದುಕೊಳ್ಳಲು ಸಂದೇಶ ನೀಡಿದಂತಾಗುತ್ತದೆ ಎಂದು ನುಡಿದರು.

ನಂತರದಲ್ಲಿ ಇಲಕಲ್ಲ ಗುಡೂರನ ಪ್ರವಚನಕಾರರಾದ ಅನ್ನದಾನೇಶ್ವರ ಶಾಸ್ತ್ರೀಗಳು ಮಾತನಾಡಿ ನಮ್ಮ ನಾಡಿನ ನೂರಾರು ಮಠ, ಮಾನ್ಯಗಳು ಕೊಡುಗೆ ಅಪಾರವಾಗಿದೆ, ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹವನ್ನು ನಡೆಸುತ್ತಾ ಸಾವಿರಾರು ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡುತ್ತಿವೆ.

ಅದರಂತೆ ಹಾನಗಲ್ಲ ಗುರು ಕುಮಾರೇಶ್ವರರು ನೂರಾರು, ಸಾವಿರಾರು ಭಕ್ತಾಧಿಗಳ ಪಾಲಿನ ಕಾಮಧೇನುವಾಗಿದ್ದು ಆಂತಹ ಗುರುಗಳ ಮೂರ್ತಿಯನ್ನು ಈ ಗ್ರಾಮದ ಜನತೆ ಪ್ರತಿಷ್ಠಾಪಿಸಿದ್ದು ತುಂಬಾ ಸಂತಸದ ವಿಷಯ ಎಂದರು.

ಇಲ್ಲಿ ಹಾನಗಲ್ಲ ಗುರು ಕುಮಾರೇಶ್ವರರ ಮೂರ್ತಿ ಅಷ್ಟೇ ಅಲ್ಲ, ಮುಂದೆ ಭಕ್ತಾಧಿಗಳು ಮಠವನ್ನು ನಿರ್ಮಾಣ ಮಾಡಿ ರಥೋತ್ಸವವನ್ನು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭವಿಷ್ಯ ನುಡಿದರು.

ನಂತರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮಿಗಳು ಪ್ರವಚನ ನೀಡಿ ಪ್ರತಿಯೊಬ್ಬರು ಧರ್ಮ ಕಾರ್ಯಗಳಲ್ಲಿ ಭಾಗವಹಿಸಿ ಪುನಿತರಾಗಬೇಕು ಹಾಗೇ ರೈತಾಪಿ ವರ್ಗಕ್ಕೆ ಮಳೆ ಬೆಳೆಗಳು ಸಕಾಲಕ್ಕೆ ಆಗಿ ಜನ, ಜಾನುವಾರುಗಳು ನೆಮ್ಮದಿ ಜೀವನ ಸಾಗಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಂದ ಕುಂಭೋತ್ಸವ, ನಂತರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿದವು.
ಈ ಸಂದರ್ಭದಲ್ಲಿ ಹೊಸಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಸಕಲ ಸಧ್ಬಕ್ತರು, ಮಹಿಳೆಯರು, ವಿವಿಧ ಶಾಲಾ ಮಕ್ಕಳು, ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭೂದಾನಿಗಳಿಗೆ, ವಿವಿಧ ದಾನಿಗಳನ್ನು, ನಿವೃತ್ತ ನೌಕರರನ್ನು, ಮಾಜಿ ಯೋಧರನ್ನು ಸನ್ಮಾನಿಸಲಾಯಿತು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!