ಯಲಬುರ್ಗಾ,: ವಕೀಲರು ತಮ್ಮ ಕಕ್ಷಿದಾರನಿಗೆ ನ್ಯಾಯ ಕೊಡಿಸಲು ಅಗತ್ಯ ದಾಖಲೆಗಳು ಹಾಗೂ ಸಾಕ್ಷಿಗಳನ್ನ ಸರಿಯಾದ ರೀತಿಯಲ್ಲಿ ತಂದಾಗ ಮಾತ್ರ ನ್ಯಾಯಾಧೀಶರಾದ ನಾವು ನ್ಯಾಯ ಒದಗಿಸಲು ಸಾದ್ಯವಿದೆ ಆಗಾಗಿ ನಿಮ್ಮದು ಪವಿತ್ರ ಹುದ್ದೆಯಾಗಿದ್ದು ಅದರ ಘನತೆಯನ್ನು ಎತ್ತಿ ಇಡಿಯಿರಿ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ವಿಜಯಕುಮಾರ್ ಕನ್ನೂರು ಹೇಳಿದರು.
ಯಲಬುರ್ಗಾ ವಕೀಲ ಸಂಘದಿಂದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ್ ಕನ್ನೂರ್ ವರ್ಗಾವಣೆಯಾದ ಪ್ರಯುಕ್ತ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಭಾಗವಹಿಸಿ, ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಹುದ್ದೆಯಲ್ಲಿ ವರ್ಗಾವಣೆ ಅತ್ಯಂತ ಸಹಜ ಪ್ರಕ್ರಿಯೆ ಆಗಾಗಿ ನಾವು ಸರಕಾರ ನಮಗೆ ತೋರಿಸಿದ ಸ್ಥಳಕ್ಕೆ ನಾವು ಹೋಗಬೇಕು ಹಾಗೂ ಈ ಹುದ್ದೆಯಲ್ಲಿ ಯಾರೇ ಇದ್ದರೂ ಸಹಿತ ತಮ್ಮ ನ್ಯಾಯಪರತೆಯನ್ನು ಎತ್ತಿಯಿಡಿಯುತ್ತಾರೆ ನನಗೆ ಸಹಕಾರ ನೀಡಿದಂತೆ ಮುಂದೆ ಬರುವ ನ್ಯಾಯಾದೀಶರಿಗೂ ಸಹಕಾರ ಇರಲಿ ನ್ಯಾಯಾಂಗದ ಮೇಲೆ ಜನರು ಇಟ್ಟಿರುವ ನಂಬಿಕೆ ಪ್ರೀತಿ ವಿಶ್ವಾಸ ಸದಾಕಾಲ ಇಗೆ ಇರಲಿ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಪ್ರಕಾಶ ಬೆಲೇರಿ ಹಿರಿಯ ವಕೀಲರಾದ ಬಿಎಂ ಶಿರೂರ, ಎಚ್.ಎಚ್. ಹಿರೇಮನಿ, ಯು.ಮೇಣಸಗೇರಿ, ಪ್ರಭುರಾಜ ಕಲಬುರ್ಗಿ, ರಾಜಶೇಖರ್ ನಿಂಗೋಜಿ, ಆನಂದ ಉಳ್ಳಾಗಡ್ಡಿ, ಬನ್ನಪ್ಪಗೌಡ್ರ ಎಸ್. ಎನ್ ಶ್ಯಾಗೋಟಿ, ದಾದು ಎಲಿಗಾರ, ಹುಚ್ಚಿರಪ್ಪ. ಶರಣಯ್ಯಸ್ವಾಮಿ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಎಲ್ಲಾ ಗೌರವಾನ್ವಿತ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.
ವರದಿ: ದುರಗೇಶ ಪೂಜಾರ
More Stories
ಬ್ರಿಟಿಷರ ವಿರುದ್ದ ದಂಗೆ ಎದ್ದ ಮೊದಲ ವೀರ ಮಹಿಳೆ ಕಿತ್ತೂರ ಚೆನ್ನಮ್ಮ
ಶರಣಬಸವೇಶ್ವರ ಶಾಲೆಯಲ್ಲಿ ಗಾಂಧೀಜಿ- ಶಾಸ್ತ್ರಿಜಿ ಜಯಂತಿ ಆಚರಣೆ
ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ 78ನೇ ಸ್ವಾತಂತ್ರ ದಿನಾಚರಣೆ