December 23, 2024

AKSHARA KRAANTI

AKSHARA KRAANTI




ಅಪಘಾತದಲ್ಲಿ ಮೃತರಾದವರ ಮನೆಗೆ ತಹಶಿಲ್ದಾರ ಭೇಟಿ

ಸಂತ್ರಸ್ತರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸ್ವಾಂತಾನ ಹೇಳಿದ ತಾಲೂಕಾ ದಂಡಾಧಿಕಾರಿ

ಯಲಬುರ್ಗಾ,: ಶುಕ್ರವಾರ ರಾತ್ರಿ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ನಾಲ್ವರು ಮೃತಪಟ್ಟು,18 ಜನ ಗಾಯಗೊಂಡಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕರಮುಡಿ ಗ್ರಾಮಕ್ಕೆ ಯಲಬುರ್ಗಾ ತಾಲೂಕು ತಹಶಿಲ್ದಾರರು ಸಂತ್ರಸ್ತರ ಮನೆಗೆ ಬೇಟಿ ನೀಡಿ ಕುಟುಂಬದವರಿಗೆ ಸ್ವಾಂತಾನ ಹೇಳಿದರು.

ನಂತರ ಗಾಯಗೊಂಡವರ ಮನೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಕೊಡಿಸುವದಾಗಿ ಭರವಸೆ ನೀಡಿದರು.

ಶಾಸಕರಾದ ಬಸವರಾಜ ರಾಯರೆಡ್ಡಿ ಅವರ ನಿರ್ದೇಶನದ ಪ್ರಕಾರ ಕರಮುಡಿ ಗ್ರಾಮದ ಮೃತ ಕುಟುಂಬಗಳಿಗೆ ತಹಶಿಲ್ದಾರರ ಭೇಟಿ ನೀಡಿ ಸಾಂತ್ವನ ಹೇಳಿದರು ಹಾಗೂ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿ ಅಡಿ ಪರಿಹಾರ ನೀಡಲು ಮುಖ್ಯಮಂತ್ರಿಯವರ ಕಚೇರಿಗೆ ಪತ್ರ ಬರೆಯಲಾಗುವುದು ಹಾಗೂ ಶಾಸಕರ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ತಹಶಿಲ್ದಾರ ಬಸವರಾಜ್ ತೆನ್ನಳ್ಳಿ ಅವರು ತಿಳಿಸಿದರು. ದೂರವಾಣಿ ಮೂಲಕ ಬಸವರಾಜ ರಾಯರೆಡ್ಡಿ ಅವರು ಗ್ರಾಮಸ್ಥರ ಮೂಲಕ ಮೃತ ಕುಟುಂಬದವರಿಗೆ ಧೈರ್ಯ ತುಂಬಿದರು ಎಂದು ಗ್ರಾಮದ ಹಿರಿಯರಾದ ಶಿವಪುತ್ರಪ್ಪ ಮಲ್ಲಿಗವಾಡ ಹೇಳಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!