December 23, 2024

AKSHARA KRAANTI

AKSHARA KRAANTI




ಜೀವಮಾನ ಸಾಧನೆಗಾಗಿ ಹಿರಿಯ ಸಾಹಿತಿಗಳು ಹಾಗೂ ಪ್ರಕಾಶಕರಿಗೆ ಕರೆ

ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯ ಪ್ರಶಸ್ತಿ

ಅಕ್ಷರಕ್ರಾಂತಿ ನ್ಯೂಸ್
ಬೆಂಗಳೂರು,: ಪುಸ್ತಕ ಪ್ರೀತಿ ಬೆಳೆಸುವ ದೃಷ್ಥಿಯಿಂದ, ಓದುಗರ ಮುಂದೆ, ಓದಲೇಬೇಕಾದ ಕೃತಿಗಳನ್ನು ಒದಗಿಸಿದರೆ, ಸೊಗಸಾದ ಮೃಷ್ಟಾನ್ನ ಭೋಜನ ಒದಗಿಸಿದಂತೆ. ಈ ಜಾಡಿನಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಕಳೆದ 32 ವರ್ಷಗಳಿಂದ, ಶ್ರೇಷ್ಠ ಕೃತಿಗಳ ಆಯ್ಕೆಗಾಗಿ, ಸಾಹಿತ್ಯ ಸ್ವರ್ಧೆ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ 32 ವರ್ಷದಲ್ಲಿ, 4೦೦ಕ್ಕೂ ಹೆಚ್ಚು ಕೃತಿಗಳನ್ನು ಆಯ್ಕೆ ಮಾಡಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಿ ಲೇಖಕರನ್ನು ಗೌರವಿಸಿ, ಪ್ರೋತ್ಸಾಹಿಸಿದೆ.
ಸಮಾರಂಭವು ಡಿಸೆಂಬರ್ 2024 ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುವುದು.

5೦ ವರ್ಷ ಮೇಲ್ಪಟ್ಟ, ಕನಿಷ್ಟ 1೦ ವಿವಿಧ ಪ್ರಕಾರಗಳ ಕೃತಿಗಳನ್ನು ರಚನೆ ಮಾಡಿರುವ ಹಿರಿಯ ಲೇಖಕರು, ಈ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಅರ್ಹರಿರುತ್ತಾರೆ. ಹಿರಿಯನ್ನು ಗೌರವಿಸಬೇಕೆಂದು, ಅವರ ಕೃತಿಗಳ ಆಯ್ಕೆ ಮಾಡಿ ಓದುಗರ ಮುಂದೆ ಪ್ರಸ್ತುತ ಪಡಿಸುವುದೆ ಈ ಸಮಾರಂಭದ ವಿಶೇಷ.
ಆಸಕ್ತಿ ಇರುವ ಲೇಖಕರು, ಪ್ರಕಾಶಕರು ತಮ್ಮ ಇತ್ತೀಚಿನ ಸಂಪೂರ್ಣ ಬಯೋಡಾಟಾ ಮತ್ತು 2 ಫೋಟೋದೊಂದಿಗೆ, ತಮ್ಮ ರಚನೆಯ 1೦ ಮತ್ತು ಪ್ರಕಾಶಕರು 25ಕ್ಕೂ ಹೆಚ್ಚು ಕೃತಿಗಳನ್ನು, ಕೂಡಲೇ ಕಳುಹಿಸಲು ಕೋರಲಾಗಿದೆ. ಈ ಪ್ರಶಸ್ತಿಯು ಜಿಲ್ಲಾವಾರು ಆಯ್ಕೆಯಾಗಿರುವುದರಿಂದ, ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಕೋರಲಾಗಿದೆ.

ಸಂಸ್ಥೆ ವಿಶ್ವೇಶ್ವರಯ್ಯ ಆಕರ ಗ್ರಂಥಾಲಯ ಸ್ಥಾಪಿಸಿದ್ದು, ಸದರಿ ಗ್ರಂಥಾಲಯಕ್ಕೆ ನಿಮ್ಮ 1೦ ಕೃತಿಗಳ ಹೊರತಾಗಿ, ಹೆಚ್ಚಿನ ಬೇರೆ ಬೇರೆ ಪುಸ್ತಕಗಳನ್ನು ದಾನ ಮಾಡಬಹುದು. ಒಟ್ಟಾರೆ ಪುಸ್ತಕಗಳನ್ನು ಕಳುಹಿಸುವವರು ವಿ.ಆರ್.ಎಲ್. (ಗಾಂಧಿನಗರ) ಅಥವಾ ಎಸ್.ಆರ್.ಎಸ್. (ಆನಂದ್‌ರಾವ್ ಸರ್ಕಲ್) ರೀತಿಯ ಬಸ್ ಪಾರ್ಸೆಲ್ ಮೂಲಕ – ರಮೇಶ ಸುರ್ವೆ, ಪತ್ರಕರ್ತರು, ಗಾಂಧಿನಗರ, ಬೆಂಗಳೂರು ವಿಳಾಸಕ್ಕೆ ಕಳುಹಿಸಬಹುದು ಅಥವಾ ನೇರವಾಗಿ ನಮ್ಮ ಕಛೇರಿಗೆ ತಲುಪಿಸಬಹುದು.

ಇದು ಗೌರವ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಮುತ್ತಿನ ಹಾರ, ಶಾಲು ಮತ್ತು ಬ್ಯಾಡ್ಜ್ ಒಳಗೊಂಡಿರುತ್ತದೆ. ಆಹ್ವಾನ ಪತ್ರಿಕೆ ಮತ್ತು ಸ್ಮರಣ ಸಂಚಿಕೆಯಲ್ಲಿ ಲೇಖಕರ ಫೋಟೋ ಸಮೇತ ವಿವರಗಳು ದಾಖಲಾಗುತ್ತದೆ. ಸಮಾರಂಭದ ಸಂಪೂರ್ಣ ವಿಡಿಯೋ “ಸುರ್ವೆ ನ್ಯೂಸ್” ಯು ಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೌಡ್ ಮಾಡಲಾಗುವುದು ಎಂದು ರಮೇಶ ಸುರ್ವೆ ಅವರು ಪಕ್ರಟಣೆಯಲ್ಲಿ ತಿಳಿಸಿದ್ದಾರೆ.

ಪುಸ್ತಕ ಕಳುಹಿಸುವ ವಿಳಾಸ : ರಮೇಶ ಸುರ್ವೆ ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.) ನಂ. ೪೬೮/ಸುರ್ವೆ, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತೆ, ಮಂಜುನಾಥನಗರ, ಬೆಂಗಳೂರು-೫೬೦೦೧೦. ಮೊ : ೯೮೪೫೩೦೭೩೨೭

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!