December 23, 2024

AKSHARA KRAANTI

AKSHARA KRAANTI




ನರೇಂದ್ರ ಗ್ರಾಮದ ಹಿರೆ ಕೆರೆ ಅಭಿವೃದ್ದಿ

ವರುಣ ಬೆವೆರಜೆಸ್‌.ಲಿ ವತಿಯಿಂದ ಕೆರೆ ಸ್ವಚ್ಷತೆ

ಧಾರವಾಡ,: ಇಲ್ಲಿನ ಪ್ರತಿಷ್ಟಿತ ಕಂಪನಿಯಾದ ವರುಣ ಬೆವೆರಜೆಸ್‌ .ಲಿ ಮತ್ತು ಆರ್‌.ಜೆ. ಪೌಂಡೇಶನವರು, ನರೇಂದ್ರ ಗ್ರಾಮದ ಹಿರೆ ಕೆರೆಯ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೊಳವೆ ಭಾವಿ ನಿರ್ಮಾಣ ಹಾಗೂ ಕೆರೆಯ ಸ್ವಚ್ಷತೆ ಮತ್ತು ಗ್ರಾಮದ ನಿವಾಸಿಗಳ ಹಿತರಕ್ಷಣೆಗಾಗಿ ಪಥ ನಿರ್ಮಾಣ ಮತ್ತು ನಿವಾಸಿಗಳಿಗೆ ತಂಗುದಾಣ ನಿರ್ಮಿಸಿ, ಕುಳಿತಕೊಳ್ಳಲು ಬೆಂಚುಗಳ ವ್ಯವಸ್ಥೆ ಹಾಗೂ ಸೌರ ದೀಪಗಳನ್ನು ಮಾಡಿಸಿದ್ದು, ಈ ಎಲ್ಲಾ ಕೆಲಸಗಳ ಕಾರ್ಯಕ್ರಮ ದಿ.17 ರಂದು ಉದ್ಘಾಟನೆಯಾಯಿತು.

ವರುಣ ಬೆವೆರಜೆಸ್‌ .ಲಿ ಮತ್ತು ಆರ್‌ಜೆ ಪೌಂಡೇಶನ ಹಿರಿಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಸಧಸ್ಯರೆಲ್ಲರೂ ಭಾಗವಹಿಸಿ ಉದ್ಘಾಟನಾ ಸಮಾರಂಭವನ್ನು ನೆರೆವೇರಿಸಿದರು.

ಈ ಮಹತ್ವದ ಕೆಲಸಕ್ಕೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರೂ ಹಾಗೂ ಗ್ರಾಮಸ್ಥರು ವರುಣ ಬೆವೆರಜೆಸ್‌.ಲಿನ ಪರಿಸರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಆಗಮಿಸಿದ ಪ್ರೋಪೆಸರ್‌ ಡಾ.ರವಿ ಪಾಟೀಲ ಕೃಷಿ ವಿಧ್ಯಾಲಯ ಧಾರವಾಡ, ರವರು ಪರಿಸರದ ಮಹತ್ವ ಮತ್ತು ಕೆರೆಯ ಸಂರಕ್ಷಣೆಯ ಕುರಿತು ಮಾತನಾಡಿ, ವರುಣ ಬೆವೆರಜಿಸ .ಲಿ ನವರು ಮಾಡಿರುವ ಕೆಲಸದ ಬಗ್ಗೆ ಮತ್ತು ಕಂಪನಿಗೆ ಇರುವ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲರೂ ಸೇರಿ ಪರಿಸರ ಸಂರಕ್ಷಣೆಗಾಗಿ ಕೈಜೋಡಿಸೋಣ ಎನ್ನುವ ಸಂದೇಶವನ್ನು ನೀಡಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!