ಕೊಪ್ಪಳ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಕಚೇರಿಗಳ ಅವಶ್ಯಕತೆ ಇತ್ತೆ ಎಂದು ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ ಪ್ರಶ್ನೀಸಿದರು.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿವರು ದೂರ ದೃಷ್ಠಿಯುಳ್ಳವರು, ಅವರು ಆರ್ಥಿಕವಾಗಿ ಎಲ್ಲವನ್ನು ಬಲ್ಲವರು ಎಂದ ಮೇಲೆ, ಗ್ಯಾರಂಟಿ ಯೋಜನೆಗಳೇ ಸರಕಾರಕ್ಕೆ ಹೊರೆಯಾಗಿದೆ ಎನ್ನುವುದು ಗೊತ್ತಿಲ್ಲವೇ.
ಹಾಗಿದ್ದರು ಅದರ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಕಚೇರಿ, ಅಲ್ಲಿ ಮೂಲಭೂತ ಸೌಕರ್ಯ, ಮತ್ತೆ ಅಧ್ಯಕ್ಷರ ಸಂಬಳ ಇವೆಲ್ಲವಕ್ಕೆ ಯಾರು ಹೊಣೆ, ಸರಕಾರದ ಹಣ ಬೇಕಾ ಬಿಟ್ಟಿಯಾಗಿ ಪೋಲಾಗುತ್ತಿದ್ದು ಇದರ ಹೊಡೆತ ಸಾರ್ವಜನಿಕರು ಅನುಭವಿಸಬೇಕಲ್ಲವೇ ಎಂದು ಪ್ರಶ್ನೀಸಿದರು.
ಕುಕನೂರು ಪಟ್ಟಣದ ಎಪಿಎಂಸಿಯ ಪ್ರಾಂಗಣದಲ್ಲಿ ಸುಮಾರು 7.30ಕೋಟಿ ಮೊತ್ತದ ಕೋಲ್ಡ್ ಸ್ಟೋರೆಜ್, ಮತ್ತು ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ಇದೇ 3 ರಂದು ಶನಿವಾರ ದೊರೆಯಲಿದ್ದು ಅವುಗಳಿಂದ ಮುಂದೆ ರೈತರಿಗೆ, ಹಾಗೂ ವ್ಯಾಪಾರಸ್ಥರಿಗೆ ಅನೂಕೂಲವಾಗಲಿವೆಯೇ ಎನ್ನುವುದರ ಬಗ್ಗೆ ಸ್ವಲ್ಪ ಕುಕನೂರು ತಾಲೂಕಿನ ಜನತೆ ಯೋಚಿಸಬೇಕಿದೆ.
ಮೊದಲೇ ಕೃಷಿ ಉತ್ಪನ್ನ ಮಾರುಕಟ್ಟೆ ಇದ್ದರು ಪ್ರಯೋಜನವಿಲ್ಲ, ಯಾವೋಬ್ಬ ರೈತರು ವ್ಯಾಪಾರ ವಹಿವಾಟುಗಳನ್ನು ಇಲ್ಲಿ ನಡೆಸುತ್ತಿಲ್ಲಾ, ರೈತರು ದಲ್ಲಾಳಿಗಳ ಕೈ ಗೊಂಬೆ ಯಾಗಿದ್ದಾರೆ ಅವರು ಆಡಿಸಿದಂತೆ ಆಡುವುದು ಬಡ ರೈತಾಪಿ ವರ್ಗದ ಪಾಡಾಗಿದೆ.
ಸುಮಾರು ಹತ್ತು ವರ್ಪಗಳಿಂದ ಇಲ್ಲಿ ರೈತರ ಯಾವ ವ್ಯಾಪಾರ ವಹಿವಾಟು ನಡೆಯುತ್ತಿಲ್ಲಾ. ರೈತರು ಬೆಳೆದ ಬೆಳೆಗಳು ಎಪಿಎಂಸಿ ಮೂಲಕ ಟೆಂಡರ್ ಆಗದೇ ನೆರ ದಲ್ಲಾಳಿಗಳ ಪಾಲಾಗುತ್ತಿವೆ.
ಇದೇ ಎಪಿಎಂಸಿ ಪ್ರಾಂಗಣದಲ್ಲಿ 7-8 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ ಕುರಿ ದೊಡ್ಡಿ, ದನದ ದೊಡ್ಡಿ ನಿರುಪಯುಕ್ತಗೊಂಡು ಅದರಲ್ಲಿ ಕೌದಿ ಹೋಲಿಯುವ ಜನಾಂಗದವರಿಗೆ ಸೂರಾಗಿ ಮಾರ್ಪಟ್ಟಿವೆ.
ಈಗ ಇದೇ ಪ್ರಾಂಗಣದಲ್ಲಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಹಣ್ಣು, ತರಕಾರಿ, ಕಾಳು ಪದಾರ್ಥಗಳು ಇನ್ನಿತರೇ ಕೃಷಿ ಉತ್ಪನ್ನಗಳ ಶೇಖರಣೆ, ಸಂಗ್ರಹಣೆಗಾಗಿ ಕೋಲ್ಡ್ ಸ್ಟೋರಜನ್ನು ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಯಾವ ರೈತರು ಇತ್ತ ಮುಖ ಮಾಡದೇ ಅವುಗಳು ಸಹ ನಿರುಪಯುಕ್ತವಾಗುತ್ತವೆ. ಇದರಿಂದ ಸರಕಾರದ ಖಜಾನೆಯ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ ಎನ್ನುವುದು ಮೆಲ್ನೋಟಕ್ಕೆ ಕಾಣುತ್ತದೆ. ಕುಕನೂರು ತಾಲೂಕಿನ ಕೆಲವೊಂದಿಷ್ಟು ಗ್ರಾಮಗಳಲ್ಲಿ ದಿನಕ್ಕೆ ಎರಡು ಮೂರು ಸಾರಿಗೆ ವಾಹನಗಳು ಬಂದು ಹೋಗುವುದು ಬಿಟ್ಟರೇ ಸಾರಿಗೆ ವ್ಯವಸ್ಥೆ ಇಲ್ಲ ಇಂತಹ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿಗಳ ಬಸ್ ನಿಲ್ದಾಣ ಮಾಡಲು ಹೊರಟಿರುವುದು ಸರಿಯೇ, ಅಂತಹ ಪ್ರದೇಶಗಳಲ್ಲಿ ಕಡಿಮೆ ಬಜೆಟ್ ನಲ್ಲಿ ಬಸ್ ನಿಲ್ದಾಣ ನಿರ್ಮಿಸಿ ಸರಕಾರದ ಖಜಾನೆಯ ಉಳಿತಾಯ ಮಾಡ ಬಹುದಲ್ಲವೇ ಎನ್ನುವದು ಸಾರ್ವಜನಿಕರು ಮಾತಾಗಿದೆ.
ಕುಕನೂರು ತಾಲೂಕಿನಾದ್ಯಂತ ರೈತರು ತಮ್ಮ ಜಮೀನುಗಳಲ್ಲಿ ಹೆಸರು ಬೆಳೆ ಬೆಳೆದದ್ದು ಜಿಂಕೆ ಹಾವಳಿಯಿಂದ ಅರ್ದದಷ್ಟು ಹಾಳಾದರೇ ಮೊಡ ಕವಿದ ವಾತಾವರಣ ಹಾಗೂ ಜಿಟಿ, ಜಿಟಿ ಮಳೆಯಿಂದ ಬೆಳೆಗಳಿಗೆ ಹಳದಿ ರೋಗ, ಬೂದು ರೋಗ, ನಂಜಾಣು ರೋಗ ಬಂದು ಅಲ್ಪ ಸ್ವಲ್ಪ ಉಳಿದ ಬೆಳೆಗಳು ಕೈಗೆ ಬಂದಿದ್ದು, ಆ ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಕು, ಕೂಡಲೇ ಜಿಂಕೆ ವನ ನಿರ್ಮಿಸಲು ಸೂಚಿಸಬೇಕು.
ಕೇಲವೊಂದೆಡೆಗಳಲ್ಲಿನ ರೈತರು ಸಜ್ಜೆಯನ್ನು ಬಿತ್ತನೆ ಮಾಡಿದ್ದು ಮಳೆಯಿಂದ, ಕೀಟ ಭಾದೆಯಿಂದ ಬೆಳೆಗಳು ಹಾಳಾಗಿದ್ದು ಅಂತಹ ರೈತರಿಗೆಪರಿಹಾರ, ಬೆಳೆ ವಿಮೆಯನ್ನು ನೀಡಬೇಕು ಎಂದು ಈ ಮೂಲಕ ಆಗ್ರಹಿಸಿದರು.
ವರದಿ : ಪಂಚಯ್ಯ ಹಿರೇಮಠ
More Stories
ವೀರಶೈವ- ಲಿಂಗಾಯತ ಮಹಾಸಭಾದ ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಪೋರೇಟ್ ಶ್ರೀಮಂತರ ಮನೆಯ ವೈಭವಕ್ಕಿಂತ ದುಡಿದು ಬದುಕುವವರ ಬವಣೆಗೆ ಕ್ಯಾಮರಾ ಹಿಡಿಯಿರಿ : ಕೆ.ವಿ.ಪ್ರಭಾಕರ್
ಮಾನವೀಯ ಮೌಲ್ಯಗಳಡಿ ಪತ್ರಕರ್ತರು ಕಾರ್ಯನಿರ್ವಹಿಸುವಂತಾಗಲಿ : ಶಿವಾನಂದ ತಗಡೂರು