ಹೆಣ್ಣು ಮಕ್ಕಳಿಗೆ ಹಬ್ಬ ಎಂದರೆ ಸಡಗರ ಸಂಭ್ರಮ
Excellent Swiss Movement AAA+ Breitling Replica Watches With Low Prices For Men And Ladies.
Get cheap fake watches.Explore our knock offs & homage watches that look like Real.
Choose and buy cheap Hublot replica watches of good quality.
ಅಕ್ಷರಕ್ರಾಂತಿ ನ್ಯೂಸ್
ಗದಗ,: ಹೆಣ್ಣು ಮಕ್ಕಳಿಗೆ ಹಬ್ಬ ಎಂದರೆ ಸಡಗರ ಸಂಭ್ರಮ, ಪ್ರತಿ ಹಬ್ಬದಲ್ಲೂ ಒಂದು ವಿಶೇಷತೆಯನ್ನು ಕಂಡುಕೊಳ್ಳುತ್ತಾ, ಸಂಭ್ರಮಿಸುವುದು ನಮ್ಮ ಸಂಪ್ರದಾಯ, ಶರನ್ನವರಾತ್ರಿಯ ಸಂದರ್ಭದಲ್ಲಿ ದಾಂಡಿಯಾ ಕಾರ್ಯಕ್ರಮ ಎಲ್ಲೆಲ್ಲೂ ಕಾಣುತ್ತೇವೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಈ ಸಂಪ್ರದಾಯ ಈಗ ದಕ್ಷಿಣಕ್ಕೂ ಲಗ್ಗೆ ಇಟ್ಟಿದೆ. ನವರಾತ್ರಿ ನಿಮಿತ್ತ ನಡೆಯುವ ಕೊನೆಯ ದಿನದ ಕಾರ್ಯಕ್ರಮದಲ್ಲಿ ಎಲ್ಲ ಸದಸ್ಯನಿಯರು ದಾಂಡಿಯಾಕ್ಕೆ ಹೆಜ್ಜೆ ಹಾಕುವುದರ ಮೂಲಕ ತಮ್ಮ ಸಡಗರವನ್ನು ವ್ಯಕ್ತಪಡಿಸಿದರು. ಮಳೆರಾಯನ ಆರ್ಭಟವನ್ನು ಲೆಕ್ಕಿಸದೇ ಎಲ್ಲರೂ ಅತ್ಯಂತ ಉತ್ಸಾಹದಿಂದ ನೃತ್ಯಗಳನ್ನು ಮಾಡಿ ಎಲ್ಲರನ್ನೂ ಮನರಂಜಿಸಿದರು. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಖುಷಿ ಖುಷಿಯಾಗಿ ನೃತ್ಯ ಮಾಡಿದರು. ಚಿಕ್ಕ ಮಗುವಾದ ಸ್ವಾತಿ ಬೈರಗೊಂಡ, ಆದ್ಯ ಮಸ್ಕಿ ಸುಂದರವಾಗಿ ನೃತ್ಯ ಮಾಡಿದರು. ಅನ್ವಿತಾ ಬಳ್ಳಾರಿ, ಶಿವಾನಿ ಬಳ್ಳಾರಿ, ಸುಪ್ರೀತ ಇಂಗಳಳ್ಳಿ, ಮಂಗಲಾ ನಾಲವಾತ್ವಡಮಠ, ಮಧು ಮುತ್ತಿನಪೆಂಡಿಮಠ ನೃತ್ಯ ಮಾಡಿದರು. ದಾನೇಶ್ವರಿ ಮಾನ್ವಿ, ಉಮಾ ರಾಮನಕೊಪ್ಪ, ನೇತ್ರಾ ಸವಡಿ ಮೂರು ಜನ ಸೇರಿ ಸುಂದರವಾಗಿ ನೃತ್ಯ ಮಾಡಿದರು.
ಪ್ರಿಯಾ ಶಿಗ್ಲಿಮಠ, ಸುಗಲಾ ಎಳಮಲಿ, ಪಾರ್ವತಿ ಬಳ್ಳಾರಿ, ಜಯಲಕ್ಷ್ಮೀ ಬಳ್ಳಾರಿ, ಶಿವಲೀಲಾ ಅಕ್ಕಿ, ರೇಣುಕಾ ಅಮಾತ್ಯ, ಲತಾ ಮುತ್ತಿನಪೆಂಡಿಮಠ, ಮದರಿಮಠ, ಪವಿತ್ರಾ ಬಿರಾದಾರ, ವಿಜಯಲಕ್ಷ್ಮೀ ಮಾನ್ವಿ ಎಲ್ಲರೂ ಸೇರಿ ಸಮೂಹ ನೃತ್ಯವನ್ನು ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದರು.
ಅಧ್ಯಕ್ಷರಾದ ಶ್ರೀಮತಿ ಲಲಿತಾ ಬಾಳಿಹಳ್ಳಿಮಠ ಸ್ವಾಗತಿಸಿದರು. ಪುಷ್ಪಾ ಬಳ್ಳಾರಿ ನಿರೂಪಿಸಿದರು. ಬೀನಾ ಮಾನ್ವಿ ಪ್ರಾರ್ಥಿಸಿದರು. ಪ್ರಸಾದದ ಸೇವೆಯನ್ನು ಶ್ರೀಮತಿ ಗಿರಿಜಾ ನಾಲವತವಾಡಮಠ ವಹಿಸಿದ್ದರು. ಖಜಾಂಚಿ ಜಯಲಕ್ಷ್ಮೀ ಬಳ್ಳಾರಿಯವರು ಕಾರ್ಯಕ್ರಮ ಸಂಯೋಜಿಸಿದರು. ಶ್ರೀಮತಿ ರೇಣುಕಾ ಅಮಾತ್ಯ ವಂದಿಸಿದರು. ಶ್ರೇಯಾ ಪವಾಡಶೆಟ್ಟರ, ಕಲಾವತಿ ಪಟ್ಟಣಶೆಟ್ಟಿ, ಮಂಗಲಾ ಯಳಮಲಿ, ನಾಗರತ್ನ ಹುಬಳಿಮಠ, ಪಾರ್ವತಿ ಮಾಳೆಕೊಪ್ಪಮಠ, ನಂದಾ ಬಾಳಿಹಳ್ಳಿಮಠ, ಉಮಾದೇವಿ ಶಿಗ್ಗಲಿಮಠ, ನಿರ್ಮಲಾ ಶಿಗ್ಗಲಿಮಠ ಸುಜಾತಾ ಹಿರೇಮಠ ಇನ್ನೂ ಅನೇಕ ಸದಸ್ಯನಿಯರು ಭಾಗವಹಿಸಿದ್ದರು.
ಪಾರ್ವತಿ ಮಾಳೆಕೊಪ್ಪಮಠರವರು ಸುಂದರವಾಗಿ ತಯಾರಾಗಿ ಬಂದಂತವರಿಗೆ ಬಹುಮಾನ ನೀಡಿದರು. ವಾಣಿ ಮುನವಳ್ಳಿ, ಗಿರಿಜಾ ನಾಲವತ್ವಾಡಮಠ, ಉಮಾ ರಾಮನಕೊಪ್ಪ, ಮಂಗಲಾ ಗೊಡಚಿ ಬಹುಮಾನ ಪಡೆದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ