December 23, 2024

AKSHARA KRAANTI

AKSHARA KRAANTI




ಹಿರಿಯ ಪತ್ರಕರ್ತರಾದ ವಿಲಾಸ್ ನಾಂದೋಡ್ಕರ್, ರಘುನಾಥಗೆ ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ

ಗದಗ,: ಜಿಲ್ಲೆಯ ಡಂಬಳ ಗ್ರಾಮದ ತೋಂಟದಾರ್ಯ ಪುರಸ್ಕಾರ ಸಮಿತಿ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ನೆನಪಿಗಾಗಿ ಪ್ರತಿವರ್ಷ ನೀಡುವ ರಾಜ್ಯಮಟ್ಟದ ಡಾ.ತೋಂಟದ ಸಿದ್ಧಲಿಂಗ ಶ್ರೀ ಪುರಸ್ಕಾರಕ್ಕೆ 2024ನೇ ಸಾಲಿನಲ್ಲಿ ಹಿರಿಯ ಪತ್ರಕರ್ತರಾದ ಟಿವಿ9 ವಾಹಿನಿಯ ಪ್ರಧಾನ ಕಾರ್ಯಕ್ರಮ ನಿರ್ಮಾಪಕರಾದ ವಿಲಾಸ್ ನಾಂದೋಡ್ಕರ್ ಹಾಗೂ ಸುಧಾ, ಮಯೂರ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರಘುನಾಥ ಚ.ಹ ಅವರು ಭಾಜನರಾಗಿದ್ದಾರೆ. ಧಾರವಾಡ ಹಾಗೂ ತುಮಕೂರು ಜಿಲ್ಲೆಯವರಾದ ಇಬ್ಬರೂ ಹಿರಿಯ ಪತ್ರಕರ್ತರು ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ.

ದೃಶ್ಯ ಮಾಧ್ಯಮದಲ್ಲಿ ವಿಲಾಸ್ ನಾಂದೋಡ್ಕರ್ ಅವರು ಛಾಪು ಮೂಡಿಸಿದ್ದರೆ, ಪತ್ರಕರ್ತ ವೃತ್ತಿಯ ಜೊತೆಗೆ ಸಾಹಿತಿಯಾಗಿಯು ಗುರುತಿಸಿಕೊಂಡ ರಘುನಾಥ ಚ.ಹ ಅವರು10ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಹೆಸರಾದವರು. ಪ್ರಶಸ್ತಿ ಗೌರವ ತಲಾ 5000 ನಗದು ಬಹುಮಾನ, ಗೌರವ ಫಲಕ ಹೊಂದಿದ್ದು ಜುಲೈ ತಿಂಗಳಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪುರಸ್ಕಾರ ಸಮಿತಿಯ ಸಂಚಾಲಕರಾದ ಡಾ. ಶಶಿಧರ್ ತೋಡ್ಕರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!