December 23, 2024

AKSHARA KRAANTI

AKSHARA KRAANTI




ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಜಿಲ್ಲಾ ವಕೀಲರ ಸಂಘ ನಗರಸಭೆ ಗದಗ-ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಅಕ್ಷರಕ್ರಾಂತಿ ನ್ಯೂಸ್
ಗದಗ,: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಜಿಲ್ಲಾ ವಕೀಲರ ಸಂಘ ನಗರಸಭೆ ಗದಗ-ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಹೇ ಸೇವಾ ಕಾರ್ಯಕ್ರಮದ ಚಾಲನೆಯನ್ನು ಸಿ.ಎಸ್. ಶಿವನಗೌಡರ, ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ ಇವರು ಚಾಲನೆ ನೀಡಿದರು. ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯನಿರ್ಮಿತ್ಯ ಸ್ವಭಾವದಲ್ಲಿ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಎಂಬ ಧ್ಯೇಯ ವಾಕ್ಯ ಅಡಿ ಸ್ವಚ್ಛತಾ ಈ ಸೇವಾ ಅಭಿಯಾನವನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು. ಅಭಿಯಾನದಲ್ಲಿ ಮೂರು ಅಂಶಗಳಿವೆ. ಸ್ವಚ್ಛತಾ ಕಿ ಭಾಗೇದಾರಿ, ಸಂಪೂರ್ಣ ಸ್ವಚ್ಛತೆ, ಸಫಾಯಿ ಕರ್ಮಚಾರಿಗಳ ಸುರಕ್ಷ ಹಾಗೂ ಕ್ಷೇಮಭಿವೃದ್ಧಿ ಕಾರ್ಯಕ್ರಮ. ಸಂಪೂರ್ಣ ಸ್ವಚ್ಛತೆ ಅಭಿಯಾನದಡಿಯಲ್ಲಿ ಮುಖ್ಯ ರಸ್ತೆಗಳನ್ನ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಾಲಾ ಬದಾಮಿ ರಸ್ತೆ ಅಂಬಾಭವಾನಿ ವೃತ್ತದವರೆಗೆ ಸಂಪೂರ್ಣ ಮುಖ್ಯ ರಸ್ತೆಗಳ ಸ್ವಚ್ಛತೆ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ವಚ್ಛತಾ ಕೀ ಭಾಗೇದಾರಿ ಅಭಿಯಾನದ ಅಡಿಯಲ್ಲಿ ತ್ರಿಕೋಟೇಶ್ವರ ದೇವಸ್ಥಾನ , ಭೀಷ್ಮ ಕೆರೆಯ ದಂಡೆ ಹಾಗೂ ಬೀದಿ ವ್ಯಾಪಾರಸ್ಥರಿಗೆ ಸ್ವಚ್ಛತಾ ಜಾತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಗದಗ ಬೆಟಗೇರಿ ನಗರಸಭೆಯ ಪೌರಕಾರ್ಮಿಕರಿಗೆ ಮಾಸ್ಟರ್ ಹೆಲ್ತ್ ಚೆಕಪ್ ಹಾಗೂ ತಂಬಾಕು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಎಲ್ಲೆಂದರಲ್ಲಿ ಕಸ ಎಸೆದಂತೆ ಹಾಗೂ ಸಮರ್ಪಕ ಕಸ ವಿಲೇವಾರಿಗೆ ಸಹಕಾರ ನೀಡುವಂತೆ ಕೋರಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಮ್.ಐ. ಹಿರೇಮನಿಪಾಟೀಲ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ, ಎಂ.ಬಿ. ಸಂಕದ, ಮಹೇಶ ಪೋತದಾರ ಪೌರಾಯುಕ್ತರು ಗದಗ-ಬೆಟಗೇರಿ, ಆನಂದ ಬದಿ ಪರಿಸರ ಅಭಿಯಂತರರು ನಗರಸಭೆ, ಎಮ್.ಎಮ್. ಮಕಾಂದಾರ ಆರೋಗ್ಯ ನಿರೀಕ್ಷಕರು, ಭಾಷಾಸಾಬ ಮಲ್ಲಸಮುದ್ರ ಅಧ್ಯಕ್ಷರು ಬೀದಿ ಬದಿ ವ್ಯಾಪಾರಸ್ಥರ ಸಂಘ, ಬಸವೇಶ್ವರ ಕಾಳೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!