ಗದಗ, :ಸಾರ್ವಜನಿಕ ಸೇವೆಯಲ್ಲಿ ಶಿಸ್ತು, ನಿಷ್ಠೆ ಪುಣ್ಯವಿದ್ದಂತೆ, ಅಶಿಸ್ತು ಎಂಬುದು ಪಾಪವಿದ್ದಂತೆ ಈ ಮೊದಲು ಮಾಡಿದ ಪಾಪವನ್ನು ಮಕ್ಕಳು, ಮೊಮ್ಮಕ್ಕಳು ಅನುಭವಿಸುತ್ತಿದ್ದರು, ಇದೀಗ ಮಾಡಿದ ಪಾಪವನ್ನು “ಇಲ್ಲೇ ಆಯ್ಕೆ ಇಲ್ಲೇ ಬಹುಮಾನ “ರೀತಿಯಲ್ಲಿ ಅವರವರೇ ಅನುಭವಿಸುವಂತಹ ಕಾಲವಿದೆ. ಪ್ರತಿ ಸಾರ್ವಜನಿಕ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಾದ ಪ್ರಶಾಂತ ವರಗಪ್ಪನವರ ಕರೆ ನೀಡಿದರು.
ಅವರು ಗದಗ ಬೆಟಗೇರಿ ನಗರಸಭೆ – ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ – ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಆಶ್ರಯದಲ್ಲಿ ಆಯೋಜಿಸಿದ ನೀರು ಪೂರೈಕೆ ಕಾರ್ಮಿಕರಾದ ಈರಣ್ಣ ಗುಡಿಸಾಗರ ಅವರ ಸೇವಾ ನಿವೃತ್ತಿ ಪ್ರಯುಕ್ತ ಬೀಳ್ಕೊಡುವ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಯಾವುದೇ ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಯು ಎಂತದೆ ಸಂದರ್ಭದಲ್ಲಿ ಕೂಡಾ ಕಾರ್ಯ ಒತ್ತಡ ಹಾಗೂ ಮನೆತನದ ಒತ್ತಡಗಳನ್ನು ಸಮವಾಗಿ ನಿಭಾಯಿಸಿದಾಗ ಮಾತ್ರ ಯಶಸ್ವಿಯಾಗಬಲ್ಲರೆಂದು ನಿವೃತ್ತಿವರೆಗೂ ಸೇವೆ ಸಲ್ಲಿಸಿದ ಸಿಬ್ಬಂದಿ ಕುರಿತು ಹರ್ಷ ವ್ಯಕ್ತಪಡಿಸಿದರು. ಸಭೆಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಎಚ ಎ ಬಂಡಿವಡ್ಡರ ಅವರು ಮಾತನಾಡಿ, ನಿವೃತ್ತಿ ಅಥವಾ ಇತರೆ ಕಾರಣಗಳಿಂದ ತೆರವಾಗುವ ಹುದ್ದೆಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದೇ ಇತರೆ ಸಿಬ್ಬಂದಿಯ ಮೇಲೆ ಕಾರ್ಯ ಒತ್ತಡ ಹೆಚ್ಚಾಗಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಪರ್ಯಾಯ ವ್ಯವಸ್ಥೆ ಕುರಿತು ಪೌರಾಯುಕ್ತರಲ್ಲಿ ಮನವಿ ಮಾಡುತ್ತಾ ನಿವೃತ್ತ ನೌಕರರಿಗೆ ಶುಭ ಕೋರಿದರು. ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ವೆಂಕಟೇಶ ರಾಮಗಿರಿ, ಕಾರ್ಯಾಲಯ ವ್ಯವಸ್ಥಾಪಕರಾದ ಪರುಶುರಾಮ ಶೇರಖಾನೆ, ಡಿ ಎಚ್ ನದಾಫ್, ಅನಂತ ಪುಣೇಕರ, ಚಂದ್ರು ಹಾದಿಮನಿ, ಹೆಮೇಶ್ ಯಟ್ಟಿ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿ, ನಿವೃತ್ತ ನೌಕರರಿಗೆ ಶುಭ ಹಾರೈಸಿದರು.
ಪೌರಾಯುಕ್ತರು ಸೇವಾ ನಿವೃತ್ತಿ ಹೊಂದಿದ ಈರಣ್ಣ ಆರ್ ಗುಡಿಸಾಗರ ಅವರಿಗೆ ಶಾಲು ಹೊದಿಸಿ, ಫಲ ತಾಂಬೂಲದೊಂದಿಗೆ ಸತ್ಕರಿಸಿ ಗೌರವಿಸಿದರು. ಡಿ ಎಚ್ ಸೀತಿಮನಿ ಸರ್ವರನ್ನು ಸ್ವಾಗತಿಸಿದರು, ಸಿದ್ದು ಹುಣಸಿಮರದ ಕಾರ್ಯಕ್ರಮ ನಿರೂಪಣೆ ಮಾಡಿದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ