ಇಟಗಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಹಬ್ಬದ ಪ್ರಯುಕ್ತ ಸಕ್ಕರೆ ಆರತಿ ಗೊಂಬೆಗಳನ್ನು ಬೆಳಗಿ ಸಂಭ್ರಮಿಸಿದ ಮಹಿಳೆಯರು
ಅಕ್ಷರಕ್ರಾಂತಿ ನ್ಯೂಸ್
ಗದಗ-ರೋಣ,: ಸಂಪ್ರದಾಯಕ ಹಬ್ಬಗಳ ಆಚರಣೆಯಲ್ಲಿ ಸೀಗೆ ಹುಣ್ಣಿಮೆಗೆ ಒಂದು ವಿಶೇಷತೆ ಇದೆ ಸೀಗೆ ಹುಣ್ಣಿಮೆಯಲ್ಲಿ ಪೂರ್ಣಚಂದಿರನ ಬೆಳದಿಂಗಳಲ್ಲಿ ಮಹಿಳೆಯರು ಸಕ್ಕರೆ ಆರತಿಯ ಗೊಂಬೆಗಳನ್ನು ಬೆಳಗುವುದು ಒಂದು ವಿಶೇಷ ಸಂಪ್ರದಾಯ.
ಅದರಂತೆ ರೋಣ ತಾಲೂಕು ಇಟಗಿ ಗ್ರಾಮದಲ್ಲಿ ಶ್ರದ್ದಾ ಭಕ್ತಿಯಿಂದ ಗ್ರಾಮ ದೇವತೆ ಶ್ರೀ ಭೀಮಾಂಬಿಕಾ ದೇವಸ್ಥಾನಕ್ಕೆ ಮಹಿಳೆಯರು ಮಕ್ಕಳು ತೆರಳಿ ಚೆಂಡು ಹೂವು, ಸೇವಂತಿ ಹಾಗೂ ಅಂಬರ ಹೂಗಳಿಂದ ಅಲಂಕರಿಸಿ ತಟ್ಟೆಗಳಲ್ಲಿ ವಿವಿಧ ಆಕಾರದ ಸಕ್ಕರೆ ಆರತಿಯ ಗೊಂಬೆಗಳು ಹಾಗೂ ದೀಪಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಗ್ರಾಮದಲ್ಲಿ ಸೀಗೆ ಹುಣ್ಣಿಮೆಯ ಪ್ರಯುಕ್ತ ಸಕ್ಕರೆ ಆರತಿ ಖರೀದಿಸಲು ಗ್ರಾಮದ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸಕ್ಕರೆ ಆರತಿಯ ಗೊಂಬೆಗಳನ್ನು ಅಲ್ಲದೆ ಬಣ್ಣ ಬಣ್ಣದ ಸಕ್ಕರೆ ಆರತಿಯ ಗೊಂಬೆಗಳನ್ನು ಖರೀದಿಸಿ ಮನೆಗೆ ತೆರಳಿವ ದೃಶ್ಯವು ಕಂಡು ಬಂತು. ಹಾಲ ಬೆಳದಿಂಗಳ ಬೆಳಕಲ್ಲಿ ಎಲ್ಲ ಮಕ್ಕಳು, ಮಹಿಳೆಯರು ಶೃಂಗಾರಗೊಂಡು ತಟ್ಟೆಗಳಲ್ಲಿ ಆರತಿ ಹಾಗೂ ದೀಪಗಳನ್ನು ಹಚ್ಚಿ ಸೀಗೆಗೆ ಆರತಿ ಮಾಡಲು ಹೊರಟಾಗ ಅದರ ಸೊಬಗನ್ನು ನೋಡುವುದೇ ಚೆಂದ. ಆರತಿಯನ್ನು ಬೆಳಗುವಾಗ ಸೀಗೆ ದೇವಿಯ ಹಾಡುಗಳನ್ನು ಗ್ರಾಮದ ಮಹಿಳೆಯರು ಹಾಡುವುದರ ಮೂಲಕ ಸಂಭ್ರಮದಿಂದ ಹಬ್ಬದ ಆಚರಣೆಯನ್ನು ಮಾಡಿದರು.
ಸೀಗೆ ಹುಣ್ಣಿಮೆಯಲ್ಲಿ ಆರತಿ ಬೆಳಗಿದ ಗ್ರಾಮದ ಮಹಿಳೆಯರಾದ ಭೀಮವ್ವ ಜಡದೇಲಿ, ಅನ್ನಪೂರ್ಣ ಕಟಗೇರಿ, ಅನುಶ್ರೀ ಪಾಟೀಲ, ಶ್ರೇಯಾ ಪಾಟೀಲ, ಲಕ್ಷ್ಮಿ ಅವಾರಿ, ತನುಶ್ರೀ ಪಲ್ಲೇದ, ಅನುಶ್ರೀ ಪಲ್ಲೇದ, ಗೀತಾ ಕೀಲ್ಲೆದ ಪ್ರತಿ ವರ್ಷದಂತೆ ಈ ವರ್ಷವು ಸೀಗೆ ಹುಣ್ಣಿಮೆಯಲ್ಲಿ ಗ್ರಾಮ ದೇವತೆ ಭೀಮಾಂಬಿಕಾ ದೇವಿಗೆ ಹಾಗೂ ಸೀಗೆ ದೇವಿಗೆ ಆರತಿಯನ್ನು ಬೇಳಗಿ ಸೀಗೆದೇವಿಗೆ ಹಾಗೂ ಶ್ರೀ ಭೀಮಾಂಬಿಕೆ ಹಾಡುಗಳನ್ನು ಹಾಡಿದರ ಮೂಲಕ ಸೀಗೆ ಹುಣ್ಣಿಮೆಯ ಹಬ್ಬವನ್ನು ಆಚರಣೆ ಮಾಡಿದೆವು ಎಂದಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ