ಸಂಗೀತ ವಾದ್ಯ ಪರೀಕ್ಷೆ ಗದಗ ಜಿಲ್ಲಾ ಕೇಂದ್ರದಲ್ಲಿ ನಡೆಸುವಂತೆ ಡಾ|| ಪಂಡಿತ ಪುಟರಾಜ ರೈತ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ಗದಗ,: ಸಂಗೀತ ವಾದ್ಯ ಪರೀಕ್ಷೆಗಳನ್ನು ಗದಗ ಜಿಲ್ಲಾ ಕೇಂದ್ರದಲ್ಲಿ ನಡೆಸುವಂತೆ ಡಾ|| ಪಂಡಿತ ಪುಟರಾಜ ರೈತ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಗೀತ ವಾದ್ಯ ತಾಳ ಪರೀಕ್ಷೆಗಳನ್ನು ಈ ಮೊದಲು ನಡೆಸುವಂತೆ ಗದಗ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರಿಸಲು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಾಸಿಕ ಸಭೆ ನಡೆಸುತ್ತಿದ್ದ ಕಾನೂನು ಹಾಗೂ ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರಿಗೂ ಕೂಡ ಪರೀಕ್ಷಾ ಕೇಂದ್ರ ಗದಗ ನಗರದಲ್ಲಿಯೇ ಮುಂದುವರೆಸುವಂತೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಡಾ|| ಪಂಡಿತ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂಪಿ ಮುಳುಗುಂದ, ರಾಜ್ಯ ಕಾರ್ಯದರ್ಶಿಯಾದ ಉಮೇಶ ಗೋಪನಕಪ್ಪ, ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ದಾವಲಸಾಬ ನಾಗನೂರ, ರಾಜ್ಯ ಕಾರ್ಯದರ್ಶಿಯಾದ ಪರಮಪೂಜ್ಯ ಬಸವರಾಜ ಶರಣರು, ಮುಖಂಡರಾದ ಹಾಜಿಅಲಿ ಎಚ್ ಕೊಪ್ಪಳ, ಜಿಲ್ಲಾಧ್ಯಕ್ಷರಾದ ದೇವಪ್ಪ ಮಲಸಮುದ್ರ, ಡಾ|| ಶರಣಪ್ಪ ಹೂಗಾರ ಸೌವದತ್ತಿ ತಾಲೂಕ ಉಪಾಧ್ಯಕ್ಷರಾದ ಭೀಮಪ್ಪ ಜೇಡರ, ಶಿವಪುತ್ರಪ್ಪ ಗೊಜನೂರ, ಶ್ರೀಮತಿ ರೇಖಾ ಬೆಂತೂರ, ಲಕ್ಷ್ಮವ್ವ ನೆವ್ಲಿ, ಇನ್ನೂ ಅನೇಕ ರೈತ ಸಂಘದ ಕಾರ್ಯಕರ್ತರು ಸದಸ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
ಮನವಿ ಸಲ್ಲಿಸಿದ ನಂತರ ಗದಗ ಜಿಲ್ಲೆಗೆ ಹೊಸದಾಗಿ ವರ್ಗಾವಣೆಯಾಗಿ ಬಂದಂತಹ ಜಿಲ್ಲಾಧಿಕಾರಿಗಳಿಗೆ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ