December 23, 2024

AKSHARA KRAANTI

AKSHARA KRAANTI




ಶ್ರೀ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳಿ ಹಾಗೂ ಶ್ರೀ ಗಜಾನನ ಸಮಿತಿಯಿಂದ ಅನ್ನಸಂತರ್ಪಣೆ

ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 14 ಪುಣ್ಯಸ್ಮರಣೆ ನಿಮಿತ್ಯ ಅನ್ನಸಂತರ್ಪಣೆ ಕಾರ್ಯಕ್ರಮ

ಗದಗ,: ಶ್ರೀ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳಿ ಹಾಗೂ ಶ್ರೀ ಗಜಾನನ ಸಮಿತಿ ವತಿಯಿಂದ ಗದಗ ನಗರದ ಡಿಸಿ ಮಿಲ್ ರೋಡ್ ತಳಗೇರಿ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶಮೂರ್ತಿಯ ಮಂಟಪದಲ್ಲಿ ಶನಿವಾರ ಮಧ್ಯಾಹ್ನ ಸತ್ಯನಾರಾಯಣ ಪೂಜೆ ಹಾಗೂ ಪರಮಪೂಜ್ಯ ಪದ್ಮಭೂಷಣ ಡಾ॥ ಪಂ. ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ ಮಹಾಅನ್ನಸಂತರ್ಪಣೆ ಅನ್ನಸಂತರ್ಪಣೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಗದಗ-ಬೆಟಗೇರಿ ನಗರಸಭೆಯ ಪ್ರಭಾರಿ ಪೌರಾಯುಕ್ತರಾದ ಮಹೇಶ್ ಪೋತದಾರ ಅವರು ಆಗಮಿಸಿ ಡಿ. ಸಿ. ಮಿಲ್ ರೋಡ ತಳಗೇರಿ ಓಣಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಹಾಗೂ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾಅನ್ನಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗದಗ ನಗರದ ಡಿ.ಸಿ. ಮಿಲ್ ರೋಡ ತಳಗೇರಿ ಓಣಿಯಲ್ಲಿ ಹೆಚ್ಚು ಪೌರ ಕಾರ್ಮಿಕರು ವಾಸಿಸುವ ಸ್ಥಳದಲ್ಲಿ ನಡೆಯುತ್ತಿರುವ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯ ಪವಿತ್ರ ಕಾರ್ಯಕ್ಕೆ ನನಗೆ ಆಹ್ವಾನ ನೀಡಿದ್ದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಸಮಾಜ ಕಲ್ಯಾಣ ಅಧಿಕಾರಿಗಳಾದ ಮಹೇಶ ಪೋತದಾರ ಹಾಗೂ ಗದಗ-ಬೆಟಗೇರಿ ನಗರಸಭೆಯ ಪರಿಸರ ಅಭಿಯಂತರರಾದ ಆನಂದ ಬದಿ, ಬಿಜೆಪಿ ಪಕ್ಷದ ಎಸ್. ಸಿ. ಮೋರ್ಚಾದ ಗದಗ ಜಿಲ್ಲಾಧ್ಯಕ್ಷರಾದ ಮಂಜುನಾಥ ಎಸ್. ಮುಳಗುಂದ, ಬಿಜೆಪಿ ಪಕ್ಷದ ಮುಖಂಡರಾದ ಶರಣು ಪಾಟೀಲ ಹಾಗೂ ಶ್ರೀ ಕಪ್ಪತ್ತುಗಿರಿ ಸಾಹಿತ್ಯ ಮತ್ತು ಕಲೆ ರಾಜ್ಯ ಸಂಘಟನೆ (ರಿ) ವತಿಯಿಂದ ಪ್ರತಿ ವರ್ಷ ಶಿಕ್ಷಣ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡುವ ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಲಕ್ಕುಂಡಿ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಯ ದೈಹಿಕ ಶಿಕ್ಷಕರಾದ ವಿರೇಶ ಕಮ್ಮಾರ ಅವರಿಗೆ ಪ್ರಶಸ್ತಿಯನ್ನು ಪಡೆದಿದ್ದರಿಂದ ಇವರನ್ನು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಘವೇಂದ್ರ ಪರಸಪ್ಪ ಪರಾಪೂರ ಹಾಗೂ ಗಣೇಶ ಯಲ್ಲಪ್ಪ ಹುಬ್ಬಳ್ಳಿ ಇವರ ನೇತೃತದಲ್ಲಿ ಇವರೆಲ್ಲರನ್ನೂ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಪ್ರಕಾಶ ಕಲ್ಮನಿ, ಎಸ್. ಎನ್. ಬಳ್ಳಾರಿ ಗುರುಗಳು, ಅಶೋಕ ಕುಡತಿನ್ನಿ, ವಿರುಪಾಕ್ಷಪ್ಪ ರಾಮಗಿರಿ, ವಿಜಯ ಮಲ್ಲೇಶ ಕಲ್ಮನಿ, ವಿರುಪಾಕ್ಷಿ ಪರಸಪ್ಪ ಪರಾಪೂರ, ಪದ್ಮಿನಿ ಮುತ್ತಲದಿನ್ನಿ, ಶ್ರೀ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳಿ ಹಾಗೂ ಶ್ರೀ ಗಜಾನನ ಸಮಿತಿ ಸರ್ವ ಪದಾಧಿಕಾರಿಗಳು, ಓಣಿಯ ಹಿರಿಯರು, ತಾಯಂದಿರುವ, ಯುವಕರು, ಮಹಿಳೆಯರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!