52ನೇ ವಾರ್ಷಿಕ ಮಹಾಸಭೆ- ಶೇ 15% ಲಾಭಾಂಶ ವಿತರಣೆ ರೂ.76 ಲಕ್ಷ 83 ಸಾವಿರ ನಿವ್ವಳ ಲಾಭ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಶ್ರೀ ಜಗದಂಬಾ ಸೌಹಾರ್ದ ಪತ್ತಿನ ಸಹಕಾರಿಯ ವಾರ್ಷಿಕ ಸಾಧಾರಣ ಸಭೆ ದ ರವಿವಾರ ಶ್ರೀ ಜಗದಂಬಾ ದೇವಸ್ಥಾನ ಸಹಸ್ರಾರ್ಜುನ ಸಮುದಾಯ ಭವನದಲ್ಲಿ
ಜರುಗಿತು.
ಸಹಕಾರಿಯ ಅಧ್ಯಕ್ಷರಾದ ಅಂಬಾಸಾ ಆರ್. ಕಬಾಡಿ ರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸಲಾಯಿತು.
ಸಹಕಾರಿಯ ದುಡಿಯುವ ಬಂಡವಾಳ 19 ಕೋಟಿ, 46 ಲಕ್ಷ ಇದ್ದು, ಒಟ್ಟು ವ್ಯವಹಾರ 50 ಕೋಟಿ, 55 ಲಕ್ಷ ಇರುತ್ತದೆ.
ಸಹಕಾರಿಯ ಜಮಾ-ಖರ್ಚು, ಲಾಭ-ಹಾನಿ, ಆಢಾವೆ ಪತ್ರಿಕೆ ಮತ್ತು ವಾರ್ಷಿಕ ವರದಿಯನ್ನು ವ್ಯವಸ್ಥಾಪಕರಾದ ಪರಶುರಾಮ ಎನ್. ಹಬೀಬ ಇವರು ಓದಿ ಸಭೆಗೆ ಆಗಮಿಸಿದ ಎಲ್ಲ ಶೇರುದಾರ ಸದಸ್ಯರ ಒಪ್ಪಿಗೆ ಪಡೆಯಲಾಯಿತು.
ಸಹಕಾರಿಯ ಉಪಾಧ್ಯಕ್ಷರಾದ ಜಿ.ಎನ್. ಹಬೀಬ ರವರು ಮಾತನಾಡಿ, ಸಹಕಾರಿಯ ಶೇರುದಾರರಿಂದ ಸಾಲದ ಮೀತಿ ಹೆಚ್ಚಳ ಮಾಡುವ ಕುರಿತು ಬಂದ ಬೇಡಿಕೆಯನ್ನು ಎಲ್ಲರಿಗೂ ತಿಳಿಸಿ ಅದಕ್ಕಾಗಿ ನಾವು ಸಹಿತ ನಮ್ಮ ಸಹಕಾರಿಯಿಂದ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ಕೊಡಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ಸಹಕಾರಿಯ ಬಾಯಲಾ ಕೆಲವೊಂದು ತಿದ್ದುಪಡಿ ಮಾಡುವ ವಿಚಾರವನ್ನು ಮಾಡಿರುತ್ತೇವೆ ಅಂತಾ ತಿಳಿಸಿದರು.
ಕೊನೆಯದಾಗಿ ಸಹಕಾರಿಯ ನಿರ್ದೇಶಕರಾದ ವ್ಹಿ.ಆರ್. ಮೇರವಾಡೆ ರವರು ವಂದನಾರ್ಪಣೆ ಕಾರ್ಯಕ್ರಮ ನಡೆಸಿದರು.
ಸಭೆಯಲ್ಲಿ ನಿರ್ದೇಶಕರಾದ ಡಿ.ಎಸ್. ಶಿದ್ಲಿಂಗ್, ಡಿ.ಆರ್. ಬದಿ, ಆರ್.ವ್ಹಿ. ಖಟವಟೆ, ಕೆ.ವ್ಹಿ. ಬಾಕಳೆ, ಎಸ್.ಎಲ್. ಶಿದ್ಲಿಂಗ, ಶ್ರೀಮತಿ ಬಿ.ಆರ್. ಟಿಕಣದಾರ, ಶ್ರೀಮತಿ ಎಸ್.ಎಸ್. ಕಾಟಿಗರ, ವ್ಹಿ.
ಆರ್. ಮೇರವಾಡೆ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ