ಗದಗ,: ನಗರದ ಪ್ರತಿಷ್ಠಿತ ಶ್ರೀಮತಿ ಶಾಂತಾ ಎಸ್. ಕಂಪಗೌಡ್ರ ಇಂಟರ್‍ನ್ಯಾಶನಲ್ ಸಿಬಿಎಸ್‍ಇ ಇಂಗ್ಲೀಷ ಮಿಡಿಯಂ ಸ್ಕೂಲ್‍ನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಗದುಗಿನ ಡಾ. ಸಂಗಮನಾಥ ಬ. ಶೆಟ್ಟರ ಎಲವು, ಕೀಲು ತಜ್ಞರು ನೇರವೇರಿಸಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹಾಗೆ ಬಂದಿದ್ದಲ ಅದು ಹಲವಾರು ವೀರ ಪುರುಷರ ಪರಿಶ್ರಮದ ಫಲ, ಬ್ರಿಟಿಷರ ದಬ್ಬಾಳಿಕೆಯಿಂದ ಬೆಂದ ನಾವೆಲ್ಲ ಇಂದು ಪ್ರಗತಿಪಥದತ್ತ ಸಾಗುತ್ತಿದ್ದೇವೆ. ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ. ಶ್ರೀಮತಿ ಶಾಂತಾ ಕಂಪಗೌಡ್ರ ಶಾಲೆಯು ಸಹ ಹಿರಿಯರ ಪರಿಶ್ರಮದ ಫಲವಾಗಿ ಬೆಳೆಯುತ್ತಿದೆ. ಸರ್ಕಾರದ ಯುವುದೇ ಸೌಲಭ್ಯಗಳಿಲ್ಲದೆ ಆಡಳಿತ ಮಂಡಳಿಯ ಸಹಕಾರದಿಂದ ಬೆಳೆದ ಈ ಶಾಲೆಯು ಭವಿಷ್ಯದ ಮಕ್ಕಳಿಗೆ ದಾರಿ ದೀಪವಾಗಲಿ ಎಂದು ಹಾರೈಸಿದರು. ಪಾಲಕರಿಗೂ ಸಹ ಸಂಸ್ಥೆಗೆ ಸಹಕಾರ ನೀಡುವಂತೆ ತಿಳಿಸಿದರು.
ವೇದಿಕೆಯ ಮೇಲೆ ಸಂಸ್ಥಾಪಕ ಅಧ್ಯಕ್ಷರು, ಕಾರ್ಯದರ್ಶಿಗಳು, ಅತಿಥಿಗಳು ಪ್ರಾಂಶುಪಾಲರು, ಮುಖ್ಯೋಪಾಧ್ಯಾಯನಿಯರು ಆಸೀನರಾಗಿದ್ದರು. ಕಾರ್ಯಕ್ರಮವನ್ನು ಶಾಲೆಯ ಮುದ್ದು ಮಕ್ಕಳು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಂಗೀತ, ಪ್ರಾರ್ಥನಾ ಗೀತೆ, ದೇಶಭಕ್ತಿಗೀತೆ, ಲೇಜಿಮ್, ಡಂಬಲ್ಸ್ ಹಾಗೂ ನೃತ್ಯಗಳು ವಿಜೃಂಭಣೆಯಿಂದ ಜರುಗಿದವು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ