ಗದಗ,: ಶ್ರೀ ಈಶ್ವರ ಸೇವಾ ಸಂಘ ಗದಗ, ಶ್ರೀ ಈಶ್ವರ ಮಹಿಳಾ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಹಾಗೂ ನಗರಸಭೆ ಗದಗ-ಬೆಟಗೇರಿ ಇವರ ಸಂಯೋಗದಲ್ಲಿ 12ನೇ ವರ್ಷದ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಫಕೀರೇಶ್ವರ ಸ್ವಾಮಿಗಳು ಶಿರಹಟ್ಟಿ ಇವರ ಜೀವನ ದರ್ಶನ ಪ್ರವಚನ, ಸಮಾರೋಪ ಸಮಾರಂಭವು ನಗರದ ಈಶ್ವರ ದೇವಸ್ಥಾನದ ಸಭಾಭವನ ಈಶ್ವರ ಬಡಾವಣೆ, ರಾಜೀವಗಾಂಧಿ ನಗರದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಫಕೀರ ಸಿದ್ಧರಾಮೇಶ್ವರ ಶಿವಯೋಗಿಗಳು 13ನೇ ಪಟ್ಟಾಧಿಕಾರಿಗಳು ಶ್ರೀ ಫಕೀರೇಶ್ವರ ಸಂಸ್ಥಾನ ಮಠ ಶಿರಹಟ್ಟಿ ವಹಿಸಿದ್ದರು.
ಅಧ್ಯಕ್ಷತೆಯನ್ನು ಚನ್ನಬಸಪ್ಪ ಅಕ್ಕಿ ಅಧ್ಯಕ್ಷರು ಈಶ್ವರ ಬಡಾವಣೆ, ಮುಖ್ಯ ಅಥಿತಿಗಳಾಗಿ ಬಿ.ಬಿ. ಅಸೂಟಿ, ಕೃಷ್ಣಗೌಡ ಎಚ್. ಪಾಟೀಲ, ಶ್ರೀಮತಿ ಭಾಗ್ಯ ಶಿರೋಳ, ಬಸವರಾಜ ಮಾಲಗಿತ್ತಿ, ಶ್ರೀಮತಿ ಚನ್ನಮ್ಮ ಸಂಶಿ ವಹಿಸಿಕೊಂಡಿದ್ದರು.ಈ ಕಾರ್ಯಕ್ರಮದ ಶರಣಬಸಪ್ಪ ಗುಡಿಮನಿಯವರನ್ನು ಶ್ರೀಮತಿ ಸುಶೀಲಾ ರಮೇಶ ಶೇರವಾಡೆ, ಬಸವರಾಜ ಅಂಗಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪ್ರವಚನಕರರಾದ ಶಿವಶರಣೆ ಸುಮಿತ್ರಾ ದೇವಿ ಪ್ರವಚನ ನೆರವೇರಿಸಿದರು.
ಇದೇ ಕಾರ್ಯಕ್ರಮದಲ್ಲಿ ಜಗದ್ಗುರು ಫಕೀರ ಸಿದ್ಧರಾಮೇಶ್ವರ ಶಿವಯೋಗಿಗಳ ತುಲಭಾರ ಸದ್ಭಕ್ತರಿಂದ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಹುಚ್ಚಣ್ಣ ಶಹಪೂರ, ಮಲ್ಲಣ್ಣ ಮಾವಿನಕಾಯಿ, ಸಂಗಣ್ಣ ಪಲ್ಲೇದ, ಎನ್.ಎಮ್. ಪಾಟೀಲ, ಎಸ್.ಎಸ್. ಸೋಮನಗೌಡ್ರ, ಡಿ.ಎಲ್. ನರ್ತಿ, ಯಮನಪ್ಪ ತಳವಾರ, ಎಸ್.ಡಿ. ಹೊನ್ನಪ್ಪನವರ, ಗುರುಪುತ್ರಪ್ಪ ಶಿವಶಿಂಪಿಗೇರ, ವಿರುಪಾಕ್ಷಪ್ಪ ಶಿವಶಿಂದಿಗೇರ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಕೆ.ಬಿ. ಕಂಬಳಿ ರವರು ನೆರವೇರಿಸಿಕೊಟ್ಟರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ