ಕಳಸಾಪೂರ ಬಸವಕೇಂದ್ರದಲ್ಲಿ 1514 ನೇ ಶಿವಾನುಭವ
ಗದಗ,: ತಾಲೂಕ ಕಳಸಾಪೂರ ಬಸವಕೇಂದ್ರದಲ್ಲಿ 1514ನೇ ಶಿವಾನುಭವ ಮೊದಲಿಗೆ ಸಾಮೂಹಿಕ ಪ್ರಾರ್ಥನೆಯನ್ನು ಪ್ರಶಾಂತ ಬ. ಖಂಡಮ್ಮನವರ ರಿಂದ ಜರುಗಿತು. ನಂತರ ಎಲ್ಲ ಮಕ್ಕಳಿಂದ ವಚನಗೋಷ್ಠಿ ನೆರವೇರಿತು.
ಕಾರ್ಯಕ್ರಮ ಉದ್ದೇಶಿಸಿ ಮಲ್ಲಿಕಾರ್ಜುನ ಗ. ಖಂಡಮ್ಮನವರ ಮಾತನಾಡಿ, ಬಸವಣ್ಣನವರ ವಚನದಲ್ಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯ ಬೇಡ, ಅನ್ಯರಿಗೆ ಅಸಯ್ಯಪಡಬೇಡ, ತನ್ನಬನ್ನಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವರ ನೊಲಿಸುವ ಪರಿ. ಹನ್ನೆರಡನೆಯ ಶತಮಾನವು ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ವಚನ ಚಳುವಳಿಯ ಮೂಲಕ ಇಡೀ ಜಗತ್ತೇ ಕಲ್ಯಾಣದ ಕಡೆಗೆ ಹೋಗುವಂತೆ ಮಾಡಿದ್ದು ಆ ಯುಗದ ವೈಶಿಷ್ಟ್ಯವಾಗಿದೆ. ಅಂದು ಬಸವರಾದಿ ಶರಣರು ಸಮಾಜದಲ್ಲಿಯ ಎಲ್ಲ ಬಗೆಯ ತಾರತಮ್ಯಗಳನ್ನು ನಿವಾರಣೆ ಮಾಡಿ ಸಮಾನತೆ ಹಾಗೂ ಪ್ರಗತಿಯನ್ನು ಸಾಧಿಸಿದ್ದು ತಮ್ಮ ವಚನಗಳ ಮೂಲಕವೇ ಎಂಬುದು ಗಮನಿಸಬೇಕಾದ ಅಂಶ. ಎಂಟು ನೂರು ವರ್ಷಗಳ ಹಿಂದೆ ರಚನೆಯಾದ ಈ ವಚನ ಸಾಹಿತ್ಯದಲ್ಲಿ ಇಂದಿನ ಆಧುನಿಕ, ವೈಜ್ಞಾನಿಕ ಹಾಗೂ ಸುಧಾರಿತ ನಾಗರಿಕರೆನಿಸಿಕೊಳ್ಳುವ ಯಾರಿಂದಲೂ ಒಂದೇ ಒಂದು ಪದವನ್ನೂ ಸಹ ಅಲುಗಾಡಿಸಲಾಗದಷ್ಟು ಪ್ರಬುದ್ಧತೆ ಹಾಗೂ ವೈಚಾರಿಕತೆ ತುಂಬಿರುವುದು ನಮಗೆಲ್ಲ ಅಚ್ಚರಿ ಮೂಡಿಸುತ್ತದೆ. ಇಂದಿನ ಸಂಕೀರ್ಣಮಯ ಸಮಾಜದಲ್ಲಿ ಶರಣರ ತತ್ವಗಳು ಅನುಷ್ಠಾನವಾದದ್ದೆ ಆದರೆ ಮೂಢನಂಬಿಕೆ ಹಾಗೂ ಜಾತೀಯತೆಗಳಂತಹ ಅನಿಷ್ಟಗಳನ್ನು ತೊಲಗುವುದರಲ್ಲಿ ಸಂದೇಹವೇ ಇಲ್ಲ. ಈ ನಿಟ್ಟಿನಲ್ಲಿ ವಿಚಾರ ಮಾಡಿದಾಗ ಇಂದಿನ ಪ್ರಾಥಮಿಕ ಶಾಲಾಹಂತದ ಮಕ್ಕಳಿಗೆ ದೈನಂದಿನ ಶಾಲಾ ಪ್ರಾರ್ಥನೆಯಲ್ಲಿ ವಚನಗಳನ್ನು ರೂಢಿ ಮಾಡಿಸಿದರೆ ಅವರಲ್ಲಿ ವೈಚಾರಿಕತೆ ಬೆಳೆಯಲು ಸಹಾಯಕವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಗಮನಿಸಿ ಶಾಲೆಯಲ್ಲಿ ಮಕ್ಕಳಿಂದ ದಿನಕ್ಕೊಂದು ವಚನ ಹೇಳುಸುವುದನ್ನು ಆರಂಭಿಸಬೇಕು ಎಂದು ನನ್ನದೊಂದು ಮನವಿ ಎಂದು ಬಸವಕೇಂದ್ರ ಕಾರ್ಯಾಧ್ಯಕ್ಷರು ಕನ್ನಡ ಅಭಿಮಾನಿ ಸಮಾಜ ಸೇವಕ ಮಲ್ಲಿಕಾರ್ಜುನ ಗ ಖಂಡಮ್ಮನವರ ವಿನಂತಿಸಿಕೊಂಡಿರುತ್ತಾರೆ.
ವೇದಿಕೆಯ ಮೇಲೆ ಬಸವಕೇಂದ್ರದ ಅಧ್ಯಕ್ಷರಾದ ಭೀಮಪ್ಪ ತಳವಾರ, ಕಾರ್ಯದರ್ಶಿಯಾದ ಮಹೇಶ ಹಾದಿಮನಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಹಾದಿಮನಿ, ಶಿವಾನಂದ ವಾಲಿಕಾರ ಮಕ್ಕಳು ಉಪಸ್ಥಿತರಿದ್ದರು.
ಸ್ವಾಗತ ಮತ್ತು ನಿರೂಪಣೆ ಶರಣಪ್ಪ ಹುಯಿಲಗೋಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೊನೆಗೆ ವಚನ ಮಂಗಲಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಶಿವರಾಜ ವಡ್ಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ