ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂಧ್ಯ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಗದಗ,: ಮಂಜು ಶಿಕ್ಷಣ ಸಂಸ್ಥೆಯ ಗದಗ ಜಿಲ್ಲೆಯಲ್ಲಿರುವ ಬುದ್ಧಿಮಾಂಧ್ಯ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ವಿಶೇಷ ಮಕ್ಕಳು ವಿಶೇಷ ಶಿಕ್ಷಕರ ಮಾರ್ಗದರ್ಶನದೊಂದಿಗೆ ಯೋಗದ ಕೆಲವು ಆಸನಗಳನ್ನು ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರು, ವಿಶೇಷ ಶಿಕ್ಷಕ/ಶಿಕ್ಷಕೇತರರು ಉಪಸ್ಥಿತರಿದ್ದರು. ಶಿಕ್ಷಕರಾದ ವಿನಾಯಕ್ಸಿಂಗ್ ರಜಪೂತ್ ಅವರು ಯೋಗದ ಮಹತ್ವ ಕುರಿತು ಮಕ್ಕಳು ಮಾಡಿದ ಯೋಗಾಸನಗಳನ್ನು ನೋಡಿ ಶ್ಲಾಘಿಸಿದರು. ಕೊನೆಯಲ್ಲಿ ವಂದನಾರ್ಪಣೆಯನ್ನು ಸಹ ಶಿಕ್ಷಕರಾದ ಎಚ್ .ಟಿ. ಕೊಪ್ಪದ ವಂದಿಸಿದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ