December 23, 2024

AKSHARA KRAANTI

AKSHARA KRAANTI




ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ಸೇಂಟ್ ಮೇರಿಸ್ ಶಾಲೆಯ ಪ್ರತಿಭೆಗಳು

ಗದಗ,: ನಗರದ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸಂಗೀತ, ಚಿತ್ರಕಲೆ, ಕ್ರೀಡೆಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಯು.ಕೆ.ಜಿ. ತರಗತಿಯ ಬಾಲಕಲಾವಿದ ಕುಮಾರ ವಿಯಾನ ಸಾಗರ ಮಳಲಿ ಸಂಗೀತದಲ್ಲಿ ಶ್ರೀ ಮಹಾಶಿವಶರಣೆ ರೇಣುಕಾ ಮಾತಾ ಟ್ರಸ್ಟ್ (ರಿ) ವತಿಯಿಂದ ಸಾಧಕ ಕಲಾ ಕುಸುಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅದೇ ರೀತಿ ಐದನೇ ತರಗತಿ ವಿದ್ಯಾರ್ಥಿಯಾದ ಕುಮಾರ ಸಮದ್ ಸ. ಮಾಳೆಕೊಪ್ಪ ರಾಷ್ಟ್ರಮಟ್ಟದ ಚಿಣ್ಣರ ಚಿತ್ತಾರದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಚಿಣ್ಣರ ಚಿತ್ತಾರಕ್ಕೆ ಪ್ರೇರಣೆ ನೀಡಿದ್ದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಉಮಾ. ಅ. ಪಾಟೀಲ ಇವರಿಗೂ ಕೂಡಾ ಬಾಲವಿಕಾಸ ಅಕಾಡೆಮಿ ಧಾರವಾಡ ಇವರು ದೃಶ್ಯಕಲಾ ಚಿಂತನಕಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಅದಲ್ಲದೇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ಸಮೀರಾ ಮಜ್ಜಗಿ, ಪೂರ್ವಿ ಸೋಳಂಕಿ, ಅನುಷಾ ಹಿಂಡಿ, ಭೂಮಿಕಾ ಹನಸನೂರ, ಕೃತಿಕಾ ಶಿಂಗಾಡಿ ಇವರು ವಿವಿಧ ಕ್ರೀಡೆಗಳಲ್ಲಿ ಬಹುಮಾನ ಪಡೆದು ಶಾಲೆಯ ಕೀರ್ತಿಗೆ ಕಾರಣೀಭೂತರಾಗಿದ್ದಾರೆ.
ಈ ಎಲ್ಲರಿಗೂ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!