ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಆಚರಣೆ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಜಿಲ್ಲಾ ಸಿವ್ಹಿಲ್ ಗುತ್ತಿಗೆದಾರರ ಅಸೋಶಿಯೇಷನ್ ಗದಗ, ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ನಗರದ ಮುಳಗುಂದ ನಾಕಾ ಹತ್ತಿರ ಇರುವ ಪ್ರವಾಸಿ ಮಂದಿರದಲ್ಲಿ ಸೋಮವಾರ ವಿವಿಧ ಇಲಾಖೆಯ ಅಭಿಯಂತರರಿಗೆ ಸನ್ಮಾನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.
ಈ ವೇಳೆ ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪರ್ಪಣೆ ಮತ್ತು ಸಸಿಗೆ ನೀರು ಹಾಕುಚ ಮೂಲಕ ವ್ಹಿ. ಎನ್. ಪಾಟೀಲ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಗದಗ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗದಗ ಜಿಲ್ಲಾ ಸಿವ್ಹಿಲ್ ಗುತ್ತಿಗೆದಾರರ ಅಸೋಸಿಯೇಶನ್ ಸರ್ ಎಂ. ವಿಶ್ವೇಶ್ವರಯ್ಯನರ ಜನ್ಮದಿನಾಚರಣೆ ಆಚರಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಗುತ್ತಿಗೆದಾರರು ಮತ್ತು ಇಲಾಖೆಯ ಪರಸ್ಪರ ಕೊಂಡಿಯಾಗಿ ಕೆಲಸ ಮಾಡಿದರೆ ಎಂತಹ ಕಾಮಗಾರಿಗಳನ್ನು ಮಾಡಲು ಸಾಧ್ಯ.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಿ ನೀವು ಸಹ ಒಂದು ಜನಸೇವೆ ಮಾಡಿದ ಹಾಗೆ ಎಂದರು.
ಈ ವೇಳೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಕೆ.ಪಾಟೀಲ್ ಅವರು ಮಾತನಾಡಿ, ಎಲ್ಲಾ ಅಭಿಯಂತರರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಮುನ್ನಡೆಯೋಣ. ಈ ಹಿಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಿದೆ. ಇಂಜಿನಿಯರ್‍ಗಳ ಮಕ್ಕಳು ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಇತರೆ ಯಾವುದೇ ಕೋರ್ಸ್ಗಳಲ್ಲಿ ಸಾಧನೆ ಮಾಡಿದರೆ ಸಂಘಟನೆಯ ವತಿಯಿಂದ ಅವರಿಗೆ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಮಾಡೋಣ. ಜೊತೆಗೆ, ಕಷ್ಟದಲ್ಲಿರುವ ಬಡವರಿಗೆ ಕೈಲಾದಷ್ಟು ಸಹಾಯ-ಸಹಕಾರ ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳೋಣ. ನನ್ನ ನೇತೃತ್ವದಲ್ಲಿ ಸಂಘಟನೆ ಇನ್ನೂ ಉತ್ತುಂಗಕ್ಕೆ ಬೆಳೆಯಲು ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಎಸ್. ಕೆ ಪಾಟೀಲ್ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಸ್.ಕೆ.ಗೌಡರ್, ಡಿ.ಬಿ. ನರೇಂದ್ರ, ಪ್ರಕಾಶ್ ಮುದಕಲ್, ಆಸಿಫ್. ಎಸ್.ಎಸ್. ಸೈಯದ್ ಹಾಗೂ ಕೆ.ವಿ. ಪಾಟೀಲ್ ಅವರಿಗೆ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಷನ್ ವತಿಯಿಂದ ಶಾಲು ಹೊದಿಸಿ ಹೂ-ಮಾಲೆಯನ್ನು ಹಾಕಿ ಸವಿ ನೆನಪಿನ ಕಾಣಿಕೆಯನ್ನು ನೀಡುವುದರ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಗೀತೆಯನ್ನು ನಾಗರಾಜ್ ಮಾಗಡಿ ನೆರವೇರಿಸಿದರು. ಉದ್ಘಾಟನೆಯನ್ನು ವಿ. ಎನ್.ಪಾಟೀಲ್ ನೆರೆವೇರಿಸಿದರು. ಇದೆ ವೇಳೆ ಮುಖ್ಯ ಅತಿಥಿಗಳ ನುಡಿಗಳನ್ನು ವಿ. ಎಂ.ಪಾಟೀಲ್ ಮತ್ತು ಎಸ್.ಟಿ. ಗೌಡರ್ ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಆದರ್ಶ ಶಿಕ್ಷಣ ಸಮಿತಿಯ ಪ್ರಾಧ್ಯಾಪಕ ಬಾಹುಬಲಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ವಿ.ಜಿ.ಮುಲ್ಕಿಪಾಟೀಲ, ಎ.ಬಿ. ಕಟಗಿ, ಕಾರ್ಯದರ್ಶಿ ಆರ್.ಡಿ. ರಂಗಪ್ಪನವರ, ಸಹ-ಕಾರ್ಯದರ್ಶಿ ಬಿ.ಐ. ಶಿರಗುಂಪಿ, ಖಜಾಂಚಿ ಸುರೇಶ ತಿರ್ಲಾಪುರ, ಉಪಖಜಾಂಚಿ ಬಿ.ಎಸ್. ಮೇಟಿ, ಆಡಳಿತ ಮಂಡಳಿ ಸದಸ್ಯರಾದ ಎ.ಎಚ್. ಪಾಟೀಲ, ಬಿ.ಆರ್. ಹೊಸಮನಿ, ಬಸವರಡ್ಡಿ ಹಂಚಿನಾಳ, ಅಣ್ಣಪ್ಪ ದರಿಯಣ್ಣವರ, ಸಿ. ಎಸ್. ನಾಗಾವಿ, ಎಂ.ಎಸ್. ಮಾದಣ್ಣವರ, ಯುವರಾಜ ಬಳ್ಳಾರಿ, ವಿಶ್ವನಾಥ ವಿ. ಪಾಟೀಲ, ಎಂ.ಪಿ. ಪಾಟೀಲ ಸೇರಿದಂತೆ ಹಿರಿಯ ಮತ್ತು ಕಿರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ