December 23, 2024

AKSHARA KRAANTI

AKSHARA KRAANTI




ವಿದ್ಯಾರ್ಥಿಗಳು ಶಿಲೆಗಳಾಗಲು ಶಿಕ್ಷಕರ ಪಾತ್ರ ಪ್ರಮುಖ : ಶ್ರೀಪ್ರಭು ಸ್ವಾಮೀಜಿ

ಗದಗ-ಮುಂಡರಿಗಿ,: ವಿದ್ಯಾರ್ಥಿಗಳು ಶಿಲೆಗಳಾಗಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಸೊಂಡೂರಿನ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮೀಜಿಯವರು ಹೇಳಿದರು.

ಅವರು ಗದಗ ತಾಲೂಕಿನ ಮುಂಡರಿಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಪ್ರಾಚಾರ್ಯ ಎಸ್.ಬಿ ಚಂಗಳಿಯವರ ವಯೋ ನಿವೃತ್ತಿ ಬಿಳ್ಕೋಡು ಸಮಾರಂಭ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಈ ದೇಶದ ಭದ್ರ ಬುನಾದಿಗೆ ನಾಲ್ಕು ಆಧಾರ ಸ್ಥಂಭಗಳೆಂದರೆ ಅದು ಸೈನಿಕ, ರೈತ, ಶಿಕ್ಷಕ ಮತ್ತು ವೈದ್ಯ. ಇವರೆಲ್ಲರೂ ತಮಗೆ ವಹಿಸಿದ ಕಾರ್ಯವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಇತರರಿಗೆ ಮಾದರಿ ತರಬೇತಿ ಅಧಿಕಾರಿಯಾಗಿ ಮಕ್ಕಳಿಗೆ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಅನೇಕ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕಠಿಣ ಪರಿಶ್ರಮ ಹಾಗೂ ಸೇವಾ ನಿಷ್ಠೆ ಎಂತವರಿಗಾದರೂ ಗೌರವವನ್ನು ತಂದುಕೊಡುತ್ತದೆ. ಅಂತಹ ಗೌರವಯುತರಲ್ಲಿ ಸಿದ್ದಣ್ಣ ಚಂಗಳಿ ಕೂಡ ಒಬ್ಬರು. ಅವರ ಮಾರ್ಗದರ್ಶನದಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಬಾಳನ್ನು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ನಂತರದಲ್ಲಿ ಪ್ರಾಚಾರ್ಯ ಎಸ್.ಬಿ ಚಂಗಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಕಾರ್ಯದಲ್ಲಿ ಸಾಫಲ್ಯ ಕಾಣಬೇಕಾದರೆ ಸಹೋದ್ಯೋಗಿಗಳ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಬೇಕು. ಅದೃಷ್ಟವಶಾತ ಅವೆರಡೂ ನನಗೆ ಲಭಿಸಿದವು. ತಮ್ಮೆಲ್ಲರ ಸಹಕಾರ ಹಾಗೂ ವೃತ್ತಿಯಲ್ಲಿ ನಾನು ತೋರಿಸಿದ ಶ್ರಮ ನನಗೆ ತೃಪ್ತಿಯನ್ನು ತಂದು ಕೊಟ್ಟಿದೆ ಎಂದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಬಳ್ಳಾರಿ, ಕೆ ಗವಿಶಂಕರ, ಎಸ್ ಎಮ್ ಶಿವರಾಚಯ್ಯ, ಎಸ್ ಹೆಚ್ ಪಾಟೀಲ್, ಎಸ್ ಎಸ್ ಅಂಗಡಿ, ಎಂಎನ್ ಹುಕುಮನಾಳ, ಎಸ್ ಕೆ ಸಂಗಳದ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!