ಗದಗ,: ನಗರದ ಪ್ರತಿಷ್ಠಿತ ಶತಮಾನೋತ್ಸವವನ್ನು ಪೂರೈಸಿದ ವಿದ್ಯಾದಾನ ಸಮಿತಿ ಬಾಲಕರ ಪ್ರೌಢ ಶಾಲೆ ಮತ್ತು ಕಾಲೇಜಿನಲ್ಲಿ ಪ್ರತಿವರ್ಷದಂತೆ ೨೦೨೪-೨೫ ನೇ ಸಾಲಿನ ಭಕ್ತಿಪೂರ್ವಕ ಶ್ರೀ ಗಣೇಶ ಪ್ರತಿಷ್ಠಾಪಿಸಿ ಗಣೇಶೋತ್ಸವ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಾದ ಹಯವದನ ಕುಲಕರ್ಣಿ, ವಿಹಾನ ಕೊಪ್ಪರ, ವಿದ್ಯಾನಾಥ ಹುನಗುಂದ ಗುಡಿ ಪೂಜಾ ಕೈಂಕರ್ಯಗಳನ್ನು ತಾವೆ ಮುತುವರ್ಜಿವಹಿಸಿ ಭಕ್ತಿಪೂರ್ವಕವಾಗಿ ನೆರೆವೇರಿಸುವುದರ ಜೊತೆಗೆ ಸಾಂಪ್ರದಾಯಗಳನ್ನು ರೂಢಿಸಿ ಮುನ್ನೆಡೆಸುವ ನಾಂದಿಯನ್ನು ಕಿರಿಯ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು. ಕಾಲೇಜು ವಿದ್ಯಾರ್ಥಿನಿಯರು ರಂಗು ರಂಗಿನ ರಂಗೋಲಿಗಳನ್ನು ಚಿತ್ರಿಸುವುದರ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಮೆರಗು ನೀಡಿದರು.ಗಣೇಶೋತ್ಸವದಲ್ಲಿ ವಿದ್ಯಾದಾನ ಸಮಿತಿಯ ಗೌರವ ಕಾರ್ಯದರ್ಶಿಗಳಾದ ಶ್ರೀನಿವಾಸ ಬಿ ಹುಯಿಲಗೋಳ, ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ. ಎಸ್.ವ್ಹಿ.ಬಂಡಿ, ಎಲ್ಲ ಉಪನ್ಯಾಸಕ ವರ್ಗ ಹಾಗೂ ಶಿಕ್ಷಕ – ಶಿಕ್ಷಕಿಯರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ