ವಿಜಯ ಕರಾಟೆ ಸ್ಪೋಟ್ರ್ಸ್ ಅಸೋಸಿಯೇಷನ್ ಗದಗ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢಶಾಲಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಇತ್ತೀಚಿಗೆ ಶಾಲಾ ಶಿಕ್ಷಣ ಇಲಾಖೆ ಪ್ರಾಥಮಿಕ-ಪ್ರೌಢಶಾಲಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜಯ ಕರಾಟೆ ಸ್ಪೋಟ್ರ್ಸ ಅಸೋಸಿಯೇಶನ್, ಗದಗ ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಕ್ರೀಡಾಕೂಟ ವಿವಿಧ ವಿಭಾಗದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರೋಪ್ ಸ್ಕಿಪಿಂಗ್ 2024-25 ರಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ 14 ವರ್ಷದ ಬಾಲಕರ ಪ್ರಾಥಮಿಕ ವಿಭಾಗದಲ್ಲಿ ಇಲಿಯಾಸ. ಗ. ಶಿರಹಟ್ಟಿ. 30 ಸೆಕೆಂಡ್ ವೇಗ ಹಾಗೂ ಓನ್ ಲೆಗ್ ಸ್ವಿಚ್, ವಿದ್ಯಾರ್ಥಿನಿಯರ 14 ವರ್ಷದ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ ಬೃಂದಾ. ಮ. ಕೋಳಿವಾಡ ಫ್ರಿಸ್ಟೈಲ್ ಹಾಗೂ 30 ಸೆಕೆಂಡ್ ಡಬಲ್, ನಂದಿತಾ ಹ.ಹೆಬಸೂರ 3 ನಿಮಿಷ್ ಇಂಡ್ಯೂರೆನ್ಸ್, ವೈಷ್ಣವಿ.ಸ.ಕುಕನೂರ 30 ಸೆಕೆಂಡ್ ವೇಗ ಹಾಗೂ ಓನ್ ಲೆಗ್ ಸ್ವಿಚ್, 17 ವರ್ಷದ ಬಾಲಕಿಯರ ಪ್ರೌಢಶಾಲಾ ವಿಭಾಗದಲ್ಲಿ ಪೂಜಾ. ಶ. ಹಿರೇಮನಿ 3 ನಿಮಿಷ್ ಇಂಡ್ಯೂರೆನ್ಸ್, ಹಾಗೂ ಓನ್ ಲೆಗ್ ಸ್ವಿಚ್, ಭೂಮಿಕಾ. ಪ. ಶೇಂದ್ರೆ. 30 ಸೆಕೆಂಡ್ ವೇಗ ಅದಿತಿ. ವಿ. ರೋಖಡೆ. 30 ಸೆಕೆಂಡ್ ಡಬಲ್, ಹಾಗೂ ಫ್ರಿಸ್ಟೈಲ್ 17 ವರ್ಷದ ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ಸುನಿಲಕುಮಾರ. ವಿ.ಹೊಂಬಳ 30 ಸೆಕೆಂಡ್ ವೇಗ, ನಿಖಿಲ. ಹ. ಸೋಮಸಾಳೆ 3 ನಿಮಿಷ್ ಇಂಡ್ಯೂರೆನ್ಸ್ ಹಾಗೂ ಓನ್ ಲೆಗ್ ಸ್ವಿಚ್ ಈ ಮೇಲ್ಕಂಡ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಸಂಸ್ಥೆಯ ಕಾರ್ಯದರ್ಶಿ ಗಣೇಶ ಇಳಕಲ್ ಹಾಗೂ ಅಧ್ಯಕ್ಷರಾದ ವಿಜಯಕುಮಾರ ಓದುಸುಮಠ ಅಭಿನಂದನೆ ಸಲ್ಲಿಸಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ