ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಜನ್ಮದಿನಾಚರಣೆ
ಗದಗ,: ಕಾಂಗ್ರೆಸ್ ಪಕ್ಷದ ಮಹಿಳಾ ಪ್ರಧಾನ ಕಾರ್ಯದರ್ಶಿ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಅವರು ಪಟ್ಟಣದ ಬಿ.ಡಿ. ತಟ್ಟಿ ವಿಕಲಚೇತನ ಶಾಲೆಯ ಮಕ್ಕಳೊಂದಿಗೆ ತಮ್ಮ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ವೇಳೆ ಮಕ್ಕಳಿಗೆ ನೋಟಬುಕ್, ಪೆನ್, ಸಿಹಿ ಹಂಚಿ ಮಾತನಾಡಿದ ಅವರು, ವಿಶೇಷ ಚೇತನ ಮಕ್ಕಳು ದೇವರ ಸಮಾನರಾಗಿದ್ದು, ಆ ಮಕ್ಕಳ ಹಾರೈಕೆಯಿದ ಬದುಕು ಸುಂದರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನ್ಮ ದಿನಾಚರಣೆಗಳು ದಾರಿ ತಪ್ಪುತ್ತಿದ್ದು, ಸಂಪ್ರದಾಯ, ಸಂಸ್ಕೃತಿ ಮರೆತು ಪಾಶ್ಚಾತ್ಯ ಸಂಸ್ಕೃತಿ ಸಂಪ್ರದಾಯ ವೈಭವೀಕರಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ನಾವು ಮಾಡುವ ಯಾವುದೇ ಕೆಲಸದಿಂದ ಇನ್ನೊಬ್ಬರಿಗೆ ಸಹಾಯ-ಸಂತಸ ನೀಡಬೇಕು. ಆಗ ಮಾತ್ರ ಆಚರಣೆಗೊಂದು ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಮೋಹನ ನಂದೆಣ್ಣವರ, ಸದಾನಂದ ನಂದೆಣ್ಣವರ, ಸಂತೋಷ ನಂದೆಣ್ಣವರ, ಮಹಾಂತೇಶ ಗುಡಸಲಮನಿ, ಪೃಥ್ವಿ ನಂದೆಣ್ಣವರ, ರಾಮು ಅಡಗಿಮನಿ, ಸಂತೋಷ ಹಾದಿಮನಿ, ನಿಂಗಪ್ಪ ಬಾಲಣ್ಣವರ, ಶಿವು ಅಯ್ಯಣ್ಣವರ, ವಸೀಂ ಮುಚ್ಚಾಲೆ, ಹನಮಂತ ಗುಡಿಸಲಮನಿ ಸೇರಿ ಹಲವರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ