December 23, 2024

AKSHARA KRAANTI

AKSHARA KRAANTI




ಯೋಗ ದಿನಾಚರಣೆ : ಸಸ್ಯ ಶ್ಯಾಮಲ ಕಾರ್ಯಕ್ರಮ

ಗದಗ ,: ಮುಂಡರಗಿ ತಾಲೂಕಿನ ಹಳ್ಳಿಗುಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಸಸ್ಯ ಶ್ಯಾಮಲ ಕಾರ್ಯಕ್ರಮ ಜರುಗಿತು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸಿ. ಟಿ. ಅರಳೆಲೆಮಠ ಅವರು ಮಕ್ಕಳಿಗೆ ವಿವಿಧ ಆಸನಗಳನ್ನು, ಸೂರ್ಯ ನಮಸ್ಕಾರ, ಪ್ರಾಣಾಯಾಮಗಳನ್ನು ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ಪ್ರದರ್ಶಿಸಿ ಮಕ್ಕಳಿಂದ ಮಕ್ಕಳಿಗೆ ಯೋಗಾಸನ ಮಾಡಿಸಿದರು.ಪತಂಜಲಿ ಮಹರ್ಷಿಗಳ ಉಸಿರಾಟದ ಪೂರಕ ರೇಚಕಗಳು ಉಸಿರಾಟದ ವೇಗವನ್ನು ಕಡಿಮೆ ಮಾಡುವುದರ ಮೂಲಕ ಮನಸ್ಸಿನ ಚಂಚಲತೆ, ಚಪಲತೆ, ಬಯಕೆ, ಮತ್ತು ಚಟಗಳನ್ನು ದೂರಿಕರಿಸಿ ಸನ್ಮಾರ್ಗ ಕಂಡುಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ ಎಂದರು. ಆ ದಿಸೆಯಲ್ಲಿ ನಿತ್ಯ ಜೀವನದಲ್ಲಿ ಯೋಗ ಚಟುವಟಿಕೆಗಳಿಗಾಗಿ ಸಮಯವನ್ನು ಮೀಸಲಿಟ್ಟು ಯೋಗಾಸನಗಳನ್ನು ನಿರ್ವಹಿಸಿ ಸ್ವಸ್ಥ, ಸದೃಢ ಆರೋಗ್ಯ, ಮನಸ್ಸು, ಹೊಂದಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ. ನಿಂಗು ಸೊಲಗಿ ವಿರಚಿತ ಯೋಗ ಗೀತೆಯನ್ನು ಶಿಕ್ಷಕಿಯರು ಮತ್ತು ಮಕ್ಕಳು ಪ್ರಸ್ತುತ ಪಡಿಸಿದರು. ಸಸ್ಯ ಶ್ಯಾಮಲ ಪಂಚವಟಿ ಕಾರ್ಯಕ್ರಮದಡಿಯಲ್ಲಿ ಹತ್ತಿ, ಅರಳೆ, ಬನ್ನಿ, ಬಿಲ್ವ ಮತ್ತು ಬೇವಿನ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯನಿ ಶ್ರೀಮತಿ ಎಸ್. ಜಿ. ಪಾಟೀಲ ಹಾಗೂ ಗುರುವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!