December 23, 2024

AKSHARA KRAANTI

AKSHARA KRAANTI




ಮೇಳದಲ್ಲಿ ಭಾಗವಹಿಸಿದ ಕುಮಾರ ಬಡಿಗೇರ ಹಾಗೂ ಶೇಖರಪ್ಪ ಬಡಿಗೇರಗೆ ಸನ್ಮಾನ

ಪಿ.ಎಂ.ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ವಸ್ತುಪ್ರದರ್ಶನ ಮೇಳದಲ್ಲಿ ಭಾಗವಹಿಸಿದ ಕುಮಾರ ಈ. ಬಡಿಗೇರ, ಹಾಗೂ ಶೇಖರಪ್ಪ ಬಡಿಗೇರ ಇವರುಗಳಿಗೆ ಸನ್ಮಾನ

ಅಕ್ಷರಕ್ರಾಂತಿ ನ್ಯೂಸ್
ಗದಗ,: ಪಿ.ಎಂ. ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬೆಂಗಳೂರಿನ ನ್ಯಾಷನಲ್ ಆರ್ಟ ಗ್ಯಾಲರಿ ಹಾಗು ಎಂ.ಎಸ್.ಎಂ.ಈ. ಸಂಯೋಗದೊಂದಿಗೆ ಜರುಗಿದ ವಸ್ತಪ್ರದರ್ಶನ ಮೇಳದಲ್ಲಿ ಭಾಗವಹಿಸಿದ ಕುಮಾರ ಈಶ್ವರಪ್ಪ ಬಡಿಗೇರ ಹಾಗೂ ದೆಹಲಿಯಲ್ಲಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಶೇಖರಪ್ಪ ಕಮ್ಮಾರ ಇವರನ್ನು ಗುರುತಿಸಿ ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರು ಗೌರವಪೂರ್ವಕವಾಗಿ ಸನ್ಮಾನಿಸಿದರು.

ನಂತರ ಮಾತನಾಡಿದ ಸಚಿವರು, ಗದಗ ಜಿಲ್ಲೆಯಿಂದ ಪಿ.ಎಂ. ವಿಶ್ವಕರ್ಮ ಪ್ರದರ್ಶನ ಮೇಳದಲ್ಲಿ ಭಾಗವಹಿಸಿ ಗದುಗಿನ ಕೀರ್ತಿಯನ್ನು ಹೆಚ್ಚಿಸಿದ್ದೀರಿ ಎಂದು ಮೆಚ್ಚುಗೆಯ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಬಸವರಾಜ ಮಲ್ಲೂರ, ರೋಮನ್ ತರಬೇತಿ ಕೇಂದ್ರದ ಮುಖ್ಯ ತರಬೇತಿದಾರರಾದ ಮಹ್ಮದ ಇಬ್ರಾಹಿಂ ಮುಲ್ಲಾ, ರಮೇಶ ಕೋಳೂರ, ಗದಗ ಜಿಲ್ಲಾ ವಿಶ್ವಕರ್ಮ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ವೀರಣ್ಣ ಹಲವಾಗಲಿ, ಉಪಾಧ್ಯಕ್ಷರಾದ ನಾಗರಾಜ ಕಮ್ಮಾರ, ಪ್ರಧಾನ ಕಾರ್ಯದರ್ಶಿಗಳಾದ ಶಂಕ್ರಾಚಾರ್ಯ ಪತ್ತಾರ, ಖಜಾಂಚಿ ಮಹೇಶ ಬಡಿಗೇರ, ಮೌನೇಶ ಬಡಿಗೇರ, ಶಿವಪ್ಪ ಕಮ್ಮಾರ, ಅಶೋಕ ಬಡಿಗೇರ, ಮಂಜುನಾಥ ಬಡಿಗೇರ, ರಮೇಶ ಬಡಿಗೇರ ಮುಂತಾದವರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!