ಗದಗ,: ನಗರದ ಮುಂಡರಗಿ ರಸ್ತೆಯಲ್ಲಿರುವ ಮಹೇಶ್ ಪಬ್ಲಿಕ್ ಸ್ಕೂಲ್‍ನಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ತ ಮಕ್ಕಳಿಗೆ ಕ್ಲೇ ಮಾಡ್ಲಿಂಗ್ ಕಾಂಪಿಟಿಷನ್ ಏರ್ಪಡಿಸಲಾಗಿತ್ತು .ಈ ಒಂದು ಸ್ಪರ್ಧೆಯಲ್ಲಿ ವಿವಿಧ ತರಗತಿಯ ಮಕ್ಕಳು ಸುಂದರವಾದ ನಂದಿ ವಿಗ್ರಹಗಳನ್ನು ಕೈಯಿಂದಲೇ ತಯಾರು ಮಾಡಿ ಬಂದು ಶಾಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು.
ಈ ಸಮಾರಂಭದ ನಿಮಿತ್ತ ಸಂಸ್ಥೆಯ ಕಾರ್ಯದರ್ಶಿಗಳಾದ ಮಹಾಂತೇಶ ಬಾತಾಖಾನಿ ಅವರು ಮಣ್ಣೆತ್ತಿನ ಅಮಾವಾಸ್ಯೆಯ ಹಿರಿಮೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸಹಶಿಕ್ಷಕಿರಾದ ಶ್ರೀಮತಿ ಲಲಿತ, ಸವಿತಾ, ಸಿರಿಗೌರಿ ಐಶ್ವರ್ಯ, ಶಾರದ ಹಾಗೂ ಕುಮಾರಿ ಭಾಗ್ಯಶ್ರೀ ಹಿರೇಮಠ ಭಾಗವಹಿಸಿದ್ದರು. ಸಹಶಿಕ್ಷಕರಾದ ಸಚಿನ್ ಖೊ ಡೇ ಅವರು ಒಂದು ಸುಂದರ ನಂದಿಯ ಚಿತ್ರಪಟ ರಚಿಸಿ ಮಕ್ಕಳಿಗೆ ಮನರಂಜಿಸಿದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ