ಕಳಸಾಪೂರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಸೇವಾ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಕಳಸಾಪೂರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಸೇವಾ ಸಂಘ ಏರ್ಪಡಿಸಿದ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಫಕೀರೇಶ್ವರ ಸ್ವಾಮೀಜಿಗಳು, ಓಂಕಾರೇಶ್ವರ ಹಿರೇಮಠ ಓಂಕಾರಗಿರಿ, ಕಳಸಾಪೂರ-ಸೊರಟೂರ-ಮಲ್ಲಸಮುದ್ರ, ಅಧ್ಯಕ್ಷತೆಯನ್ನು ಶರದರಾವ್ ಹುಯಿಲಗೋಳ ಅವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರವಿ ಡಿ. ಚನ್ನಣ್ಣನವರ ಐ.ಪಿ.ಎಸ್. ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಸರ್ಕಾರ, ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆ ಬೆಂಗಳೂರು (ಡಿ.ಐ.ಜಿ.ಪಿ) ರವರು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಕೊಡಬೇಕು, ಅಲ್ಲದೇ ತಂದೆ-ತಾಯಿಗಳನ್ನು ಗೌರವಿಸಬೇಕು. ಹತ್ತು ದೇವರು ಸುತ್ತುವುದಕ್ಕಿಂತ ಹೆತ್ತ ತಾಯಿ-ತಂದೆಗಳನ್ನು ಪೂಜಿಸು ಎಂದರು.ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹವನ್ನು ಬಿಟ್ಟು ಓದಿನತ್ತ ಹೆಚ್ಚು ಗಮನ ಕೊಡಬೇಕು ಯುವಕರು ದುಶ್ಚಟಗಳಿಂದ ದೂರವಿರಬೇಕು, ಆರೋಗ್ಯವಂತರಾಗಿ ಊರಿನ ಗುರು-ಹಿರಿಯರ ಮಾತುಗಳನ್ನು ಆಲಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಾಲ್ಮೀಕಿಯವರ ಜೀವನ ಚರಿತ್ರೆ ಕುರಿತು ವಿ.ಡಿ.ಎಸ್.ಟಿ.ಸಿ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಮ್.ಸಿ. ಕಟ್ಟಿಮನಿಯವರು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಚಂದ್ರಕಾಂತ ನಾರಾಯಣ ಹುಲಕೋಟಿ, ಸಂದೇಶ ಇರಾಳ, ಎಂ.ಆರ್. ಪಾಟೀಲ, ಬಸಯ್ಯ ಇಟಗಿಮಠ, ಬಸವರಾಜ ಶಿರುಂದ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಧಾ ಹ. ನಾಯ್ಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತವನ್ನು ಉಷಾ ಶ. ಹುಯಿಲಗೋಳ ಹಾಗೂ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ಪೃಥ್ವಿಕ ತಹಶೀಲ್ದಾರ ಬಾಲಕ ವಾಲ್ಮೀಕಿಯವರು ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ 2024ರ ಶ್ರೀ ವಾಲ್ಮೀಕಿ ರತ್ನ ಪ್ರಶಸ್ತಿಗೆ ಭಾಜನರಾದ ರವಿ ಡಿ. ಚನ್ನಣ್ಣವರಿಗೆ ಕಳಸಾಪೂರ ಗ್ರಾಮದ ಗುರು-ಹಿರಿಯರು ಹಾಗೂ ಮಹರ್ಷಿ ವಾಲ್ಮೀಕಿ ಸೇವಾ ಸಂಘ ವತಿಯಿಂದ ಶ್ರೀ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಅಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರ, ವಾಲ್ಮೀಕಿ ಲೇಖನವನ್ನು ವಿಶೇಷವಾಗಿ ಗ್ರಾಮದ ಸಮಸ್ತ ವಾಲ್ಮೀಕಿ ಜನಾಂಗದ ಸಮ್ಮುಖದಲ್ಲಿ ಲೇಖನವನ್ನು ಪ್ರಚುರಪಡಿಸಿದ ಚಿದಾನಂದಯ್ಯ ಶಾಂತಯ್ಯನಮಠ ಗದಗ ಸೇರಿದಂತೆ ಊರಿನ ಸಮಸ್ತ ಜನಾಂಗದ ಗುರು-ಹಿರಿಯರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ