ಮಂಜು ಶಿಕ್ಷಣ ಸಂಸ್ಥೆ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಮಂಜು ಶಿಕ್ಷಣ ಸಂಸ್ಥೆ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರು ರಾಜ್ಯಪ್ರಶಸ್ತಿ ಪುರಸ್ಕೃತರಾದ ಶಂಕರ್ ಸಿಂಗ್ ಎಸ್ ರಜಪೂತರವರು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವಿಶೇಷ ಶಾಲೆಯ ಸಹ ಶಿಕ್ಷಕರಾದ ವಿನಾಯಕ್‍ಸಿಂಗ್ ಎಸ್ ರಜಪೂತ ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮ ಪ್ರಾರಂಭಿಸಿದರು. ಇದೇ ವೇಳೆಯಲ್ಲಿ ಕಾರ್ಯಕ್ರಮವನ್ನು ಎನ್ ಆರ್ ಸಿನ್ನೂರ್ ನೆರವೇರಿಸಿದರು. ನಂತರ ಪ್ರದಾನ ಗುರುಗಳಾದ ವೀರೇಂದ್ರಸಿಂಗ್ ಎಸ್ ರಜಪೂತ್ ಸರ್ವರನ್ನು ಸ್ವಾಗತಿಸಿದರು. ವಿಶೇಷ ಶಾಲೆಯ ಶಿಕ್ಷಕಿಯಾದ ಆರ್ ಆರ್ ಹಿರೇಮಠ ವಂದಿಸಿದರು.ಇದೇ ಸಂದರ್ಭದಲ್ಲಿ ಎಚ್ ಟಿ ಕೊಪ್ಪದ್, ಶಿಲ್ಪ ಡೊಳ್ಳಿನ್, ಐ ಸಿ ಪಲ್ಲೇದ, ಎಂ ಎಸ್ ಹೊಸೂರ್, ಪ್ರಕಾಶ್ ದಿಗಿದಿಗಿ ಸುವರ್ಣ ಲಕ್ಷ್ಮಿ ಎಲ್ಲರೂ ಉಪಸ್ಥಿರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ