ಗದಗ,: ಕೇಸರಿ ನಂದನ ಸಿನಿ ಕ್ರಿಯೇಶನ್ಸ್‍ರವರ ಹೆಮ್ಮೆಯ ದ್ವಿತೀಯ ಕಾಣಿಕೆ ಶ್ರೀಮತಿ ನವನೀತ ಲಕ್ಷ್ಮೀ ನಿರ್ಮಾಣದ ದೀಪಕ ಎಸ್.ರವರ ನಿರ್ದೇಶನದ ಉತ್ತರ ಕರ್ನಾಟಕದ ಹಾಸ್ಯ ಕಲಾವಿದರಾದ ರಾಜು ತಾಳಿಕೋಟಿಯವರ ಪುತ್ರ ಭರತರಾಜ ತಾಳಿಕೋಟಿ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ವಿಕ್ಕಿ ಎಂಬ ಚಲನಚಿತ್ರದ ಪೋಸ್ಟರ್ ಬಿಡುಗಡೆ ಪರಮಪೂಜ್ಯ ಕಲ್ಲಯ್ಯಜ್ಜನವರು ಶ್ರೀ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಈ ಚಿತ್ರವು ಶತದಿನೋತ್ಸವ ಆಚರಿಸಲಿ ಮತ್ತು ಯಶಸ್ವಿ ಕಂಡ ಚಿತ್ರಗಳ ಸಾಲಿನಲ್ಲಿ ಈ ಚಿತ್ರವು ಸೇರಲಿ ಎಂದು ಶುಭ ಹಾರೈಸಿ ಇಡೀ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ರಾಜು ತಾಳಿಕೋಟಿ ದಂಪತಿಗಳಿಗೆ ಹಾಗೂ ಯುವ ನಾಯಕನಟ ಭರತರಾಜ ತಾಳಿಕೋಟಿಯವರಿಗೆ ಸನ್ಮಾನಿಸಿ ಗೌರವಿಸಿದರು.
ರಾಜು ತಾಳಿಕೋಟಿಯವರು ಮಾತನಾಡಿ, ನನ್ನ ಮಗ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರ ನನ್ನನ್ನು ಹೇಗೆ ಬೆಳೆಸಿದಿರಿ ಆ ಪ್ರೀತಿಯು ಕೂಡಾ ನನ್ನ ಮಗನ ಮೇಲಿರಲಿ ನಮ್ಮ ಉತ್ತರ ಕರ್ನಾಟಕದ ಜನ ಹರಿಸಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಪ್ರೇಮಾ ತಾಳಿಕೋಟಿ, ಎಫ್. ವ್ಹಿ. ಮರಿಗೌಡ್ರ, ಪ್ರಭಯ್ಯ ಹಿರೇಮಠ, ಸಾಹಿಲ್ ನವಲಗುಂದ, ಮಂಜುನಾಥ ಗುಳೇದಗುಡ್ಡ ಹಾಗೂ ಕಲಾವಿದರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ