ಭಕ್ತಿಗೀತೆಗಳ ಸ್ಪರ್ಧೆ ಕಾರ್ಯಕ್ರಮ
ಅಕ್ಷರಕ್ರಾಂತಿ ನ್ಯೂಸ್
ಗದಗ,: ದಸರಾ ಹಬ್ಬದ ನಿಮಿತ್ಯ ದೇವಾಂಗ ಸಮಾಜ ಸಮಾನ ಮನಸ್ಕರ ವೇದಿಕೆ ವತಿಯಿಂದ ಬೆಟಗೇರಿ ಹಳೇ ಬನಶಂಕರಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಕ್ತಿ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಲಾಗಿತ್ತು. ಈ ಸ್ಪರ್ಧೆಯಲ್ಲಿ ಮೇಘನಾ ಗಿಡ್ನಂದಿ ಮೊದಲನೆ ಬಹುಮಾನ ಪಡೆದರು. ಶೃತಿ ಕೂಬಳ್ಳಿ ಸಾ. ಹುಬ್ಬಳ್ಳಿ ಎರಡನೇ ಬಹುಮಾನ ಹಾಗೂ ಅನನ್ಯ ಮಾಗುಂಡ ತೃತೀಯ ಬಹುಮಾನ ಮತ್ತು ಸಮಾಧಾನಕರ ಬಹುಮಾನವನ್ನು ಶ್ರೀಮತಿ ಭಾಗ್ಯ ಆರಿ ಹಾಗೂ ಅಮೃತಾ ಕೊಪ್ಪಳ ಪಡೆದರು. ಇವರೆಲ್ಲರೂ ಸಮಾಜ ಬಾಂಧವರು ಅಭಿನಂದನೆ ಸಲ್ಲಿಸಿದರು.
ನಿರ್ಣಾಯಕರಾಗಿ ಎಸ್.ಎಸ್. ಚಿಕ್ಕಮಠ ಹಾಗೂ ಶ್ರೀಮತಿ ರೇಣುಕಾ ಬೆಟಗೇರಿಯವರು ಆಗಮಿಸಿದ್ದರು.
ಗೌರವಾಧ್ಯಕ್ಷರಾದ ಕೇಶವರಾಮ ಕೊಳ್ಳಿ ಮಾತನಾಡಿ, ಭಕ್ತಿ ಗೀತೆ ಸ್ಪರ್ಧೆಯ ರೂಪರೇಷೆಗಳನ್ನು ತಿಳಿಸಿದರು. ಈ ಕಾರ್ಯಕ್ರಮವನ್ನು ಮೊಟ್ಟ ಮೊದಲ ಬಾರಿಗೆ ಮಾಡತಾ ಇದ್ದೀವಿ. ಈ ಕಾರ್ಯಕ್ರಮಕ್ಕೆ ಅದ್ಭುತವಾದ ಯಶಸ್ಸು ಸಿಕ್ಕಿದೆ. ಸುಮಾರು 69 ಸ್ಪರ್ಧಾಳುಗಳು ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿದ್ದರು. ಅದರಲ್ಲಿ 50 ಜನ ಸ್ಪರ್ಧಾಳಗಳು ಭಾಗವಹಿಸಿ ಭಕ್ತಿ ಪೂರ್ವಕವಾಗಿ ಹಾಡುಗಳನ್ನು ಹಾಡಿ ಸೇರಿದ ಜನರ ಮನಮಿಡಿದರು ಎಂದರೆ ತಪ್ಪಾಗಲಾರದು. ಉದ್ಘಾಟಕರಾಗಿ ರಾಜೇಂದ್ರ ಭರದ್ವಾಡರು ಭಕ್ತಿಗೀತೆ ಸ್ಪರ್ಧೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ದಶರಥ ಕೊಳ್ಳಿ ಹಾಗೂ ರಾಘವೇಂದ್ರ ಕೊಪ್ಪಳವರು ದೇವಾಂಗ ಸಮಾಜ ಸಮಾನ ಮನಸ್ಕರ ವೇದಿಕೆಯಿಂದ ಈ ಸ್ಪರ್ಧೆ ಸಮಾಜ ಮೆಚ್ಚುವಂತಹ ಕೆಲಸ ಹಾಗೂ ಇದನ್ನು ಮಾಡುವುದರಿಂದ ಸಮಾಜ ಬಾಂಧವರಲ್ಲಿ ಸ್ಪರ್ಧಾ ಮನೋಭಾವನೆ ಮೂಡುತ್ತದೆ. ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಬೇಕೆಂದರು. ಅಧ್ಯಕ್ಷತೆ ವಹಿಸಿದ ಶ್ರೀಮತಿ ಭಾರತಿ ಗಡ್ಡಿಯವರು ಕಾರ್ಯಕ್ರಮದ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿ ಇನ್ನೂ ಹೆಚ್ಚು ಹೆಚ್ಚು ಕೆಲಸಗಳು ಈ ವೇದಿಕೆಯಿಂದ ನಡೆಯಲಿ ಎಂದರು.
ಗೀತಾ ದೇವಾಂಗಮಠ ಕಾರ್ಯಕ್ರಮ ನಿರೂಪಣೆ ಮಾಡಿದರು. ಮೇಘನಾ ಗಿಡ್ನಂದಿ ಪ್ರಾರ್ಥನಾ ಗೀತೆ ಹಾಡಿದರು, ಶಿವಣ್ಣ ಮಾಗುಂಡರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ