December 22, 2024

AKSHARA KRAANTI

AKSHARA KRAANTI




ಬಹುಮುಖ ಪ್ರತಿಭೆ ಕು.ವೈಷ್ಣವಿ ರಾಠೋಡ, ಸಾಂಸ್ಕೃತಿಕ ಕಲಾ ಸಂಪತ್ತು

ಬಹುಮುಖ ಪ್ರತಿಭೆ ಕು.ವೈಷ್ಣವಿ ರಾಠೋಡ, ಸಾಂಸ್ಕೃತಿಕ ಕಲಾ ಸಂಪತ್ತು

ಕಾಲವೊಂದಿತ್ತು ಬಾಲ್ಯವೆಂದರೆ ಹುಡುಗಾಟ ! ಚಲ್ಲಾಟ, ಚಂದದಾಟ, ಆಟ, ಪಾಠ, ಊಟ, ತುಂಟಾಟ ಇವೆಲ್ಲವುಗಳಲ್ಲಿ ಕಾಲ ಕಳೆಯುತ್ತ : ಅಳು, ನಗು ಗೆಳೆಯರ ಜೊತೆ ಜಟಾಪಟಿ, ಮರಳಿನಲ್ಲಿ ಮನೆಕಟ್ಟಿ ಅಪ್ಪ-ಅವ್ವ ಆಟ ಆಡಿ, ಹಬ್ಬ, ದಿಬ್ಬಣ, ಚಿಣ್ಣಿದಾಂಡಿ, ಚಿಣಿಪಣಿ, ಕಣ್ಣ ಮುಚ್ಚಾಲೆ ಬಣ್ಣದ ಬುಗುರಿ, ಮನೆಯ ಅಂಗಳದ ತುಂಬ ಮಕ್ಕಳ ದಂಡೋ ದಂಡು. ಇಂತಹ ಮಕ್ಕಳ ಚಿಲಿಪಿಲಿ ದೃಶ್ಯನೋಡುವ ಕಾಲವೊಂದಿತ್ತು. ಅಂತಹ ಮಕ್ಕಳೆಲ್ಲ ಇಂದು ಸಮಾಜದ ಶಕ್ತಿಯಾಗಿ, ಆದರ್ಶ ವ್ಯಕ್ತಿಗಳಾಗಿ ಪ್ರೇರಕರಾಗಿದ್ದಾರೆ. ಆದರೆ ಇಂದು ಶಿಕ್ಷಣ ತನ್ನ ಸತ್ವ ಕಳೆದುಕೊಂಡು ನೈತಿಕತೆಗೆ ನೆಲೆ ಸಿಗದೆ ನರಳುತ್ತಿದೆ. ಕಾಲಾಯ ತಸ್ಮೈ ನಮಃ ! ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂದು ಹೇಳಲಾಗುತ್ತದೆ. ಪರಿವರ್ತನೆ ಜಗದ ನಿಯಮ ವಲ್ಲವೇ, ಪರಿವರ್ತನೆ ಆಗಬೇಕು ಆರೋಗ್ಯಪೂರ್ಣ ಪರಿವರ್ತನೆಯಾದರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ, ಇಲ್ಲದಿದ್ದರೆ ವಿನಾಶ ಕಾಲಕ್ಕೆ ವಿಪರೀತ ಬುದ್ದಿಯಂತಾಗಿದೆ. ಅದರಂತೆ ಇಂದು ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಅವರಿಗೆ ವಿದ್ಯೆ, ಬುದ್ದಿ ಸಂಸ್ಕಾರ ನೀಡಿ ಉತ್ತಮ ವ್ಯಕ್ತಿತ್ವನ್ನು ರೂಪಿಸಿ ಸಮಾಜದ ಶಕ್ತಿಯನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿರುವದರಿಂದ ಅವರನ್ನೇ ಆಸ್ತಿ ಮಾಡಿ ಎನ್ನುತ್ತಾರೆ ಜ್ಞಾನಿಗಳು. ಮಕ್ಕಳು ಮಣ್ಣಿನ ಮುದ್ದೆ ಇದ್ದ ಹಾಗೆ ಅವರನ್ನು ಎಂತಹ ಮೂರ್ತಿಯನ್ನಾದರೂ ಮಾಡಬಹುದು. ಅವರನ್ನು ರೂಪಿಸುವ ಸಾಮಥ್ರ್ಯ ಮಾತ್ರ ತಂದೆ, ತಾಯಿ, ಮತ್ತು ಗುರು ಎಂಬ ಬೆಳಕಿನಿಂದ ಮಾತ್ರ ಉತ್ತಮ ಮೂರ್ತಿಯನ್ನು ಸಿದ್ದಪಡಿಸುವ ಸಾಮಥ್ರ್ಯವಿದೆ. ಆದ್ದರಿಂದ ತಾಯಿ ಮೊದಲನೆ ಗುರುವಾದರೆ. ತಂದೆ ಆತ್ಮಸ್ಥೈರ್ಯವವನು ತುಂಬುವ ಎರಡನೇ ಗುರು. ಜ್ಞಾನದ ಬೆಳಕನ್ನು ತುಂಬಿ ಪ್ರತಿಭಾವಂತರನ್ನಾಗಿ ರೂಪಿಸುವ ಗುರು ಭವಿಷ್ಯದ ಶಕ್ತಿ ಆದ್ದರಿಂದ ಮಕ್ಕಳ ಭವಿಷ್ಯರೂಪಿಸಿ ಅವರ ಬೆಳವಣಿಗೆ ಕೀರ್ತಿಯಲ್ಲಿಯೇ ಗುರು ಮತ್ತು ಪಾಲಕರು ಆನಂದ ತುಂದಿಲರಾಗುತ್ತಾರೆ. ಅದರಂತೆ ನೀಲು ರಾಠೋಡ ದಂಪತಿಗಳ ಮಗಳಾದ ಬಹುಮುಖ ಪ್ರತಿಭಾವಂತೆ ಕು. ವೈಷ್ಣವಿ ರಾಠೋಡಗೆ ಆದರ್ಶ ಗುಣಗಳನ್ನು ತುಂಬಿ ಕಲಾ ಪ್ರತಿಭಾವಂತಳನ್ನಾಗಿ ಬೆಳೆಸುವಲ್ಲಿ ಅವರ ಶ್ರಮ ಅಮೋಘವಾದದ್ದು. ರಾಠೋಡ ದಂಪತಿಗಳ ಮಗಳಾದ ಕುಮಾರಿ ವೈಷ್ಣವಿ. ಎನ್. ರಾಠೋಡ್ ಬಹುಮಖ ಕಲಾ ಪ್ರತಿಭೆಯನ್ನು ಹೊಂದಿದ ಚೈತನ್ಯಶೀಲ ಮತ್ತು ಸೃಜನಶೀಲರು. ಏಕೆಂದರೆ ನೃತ್ಯ, ಕಲೆ ಮತ್ತು ಸಾಮಾಜಿಕ ಕಳಕಳಿಯ ಧವರ್iಜಾಗೃತಿ ಮಾಡುವ ಬಂಜಾರ ಸಮಾಜದ ಭವ್ಯ ಪ್ರತಿಭೆ ಕುಮಾರಿ. ವೈಷ್ಣವಿ ರಾಠೋಡ.
ನಹಿ ಜ್ಞಾನೇನ ಸದೃಶಂ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ಜ್ಞಾನದಿಂದಲೇ ಈ ಪ್ರಪಂಚ ಸಂವರ್ಧನೆಯ ಸಿರಿಯಲ್ಲಿ ಬೀಗುತಿದೆ. ಒಬ್ಬ ದಾರ್ಶನಿಕ ಹೇಳುತ್ತಾರೆ, ಮುದುಕಾಗೋ ಮೊದಲ ಬುದ್ಧಿ ದೊಡ್ಡದಂತಿದ್ದೆ | ಬುದ್ಧಿಯಲ್ಲಿ ತುಂಬಬೇಕು ಮನುಜನ ಹೊಟ್ಟೆ ಬುದ್ಧಿಯ ಬೆಳೆಸಿಕೊಂಡು ಏನಾದರೇನಂತೆ ಖಾಲಿನೆ ಉಳಿತಲ್ಲೋ ಈ ನಿನ್ನ ಹೊಟ್ಟೆ. ಎನ್ನುವಂತೆ ಜ್ಞಾನ ಬುದ್ಧಿಯ ಜುಗಲ್ ಬಂದಿಯಲ್ಲಿ ಮಾನವ ಸೆಣಸಾಡುತ್ತಿದ್ದಾನೆ. ಅಕ್ಷರಜ್ಞಾನ ಇಲ್ಲದವರೂ ಸಹ ಬುದ್ಧಿಯ ಬಲದಿಂದ ಸಿರಿ ಸಂಪತ್ತನ್ನು ಗಳಿಸಿದ್ದಾರೆ. ಅಕ್ಷರಜ್ಞಾನಿ, ಜ್ಞಾನನಿಧಿ ಬುದ್ದಿಜೀವಿ ಎಂದು ಹೆಸರಾದ ಮಾನವನು ಹಣ ಸಂಪಾದನೆಗೆ ಬೇವರ ಸುರಿಸುತ್ತಿದ್ದಾನೆ. ಸಂಪಾದನೆಗೆ ಶಿಕ್ಷಣ (ಜ್ಞಾನ) ಮುಖ್ಯವಲ್ಲ ಬುದ್ಧಿಶಕ್ತಿಯ ಬಲವೊಂದೇ ಸಾಕು. ಬುದ್ದಿ ಬಲದಲ್ಲಿ ಸಿರಿ-ಗಿರಿಯ ವೃದ್ಧಿಯಲ್ಲಿ ತನ್ಮಯನಾಗಿದ್ದಾನೆ. ವ್ಯಕ್ತಿತ್ವ ಎಂದರೆ ಉನ್ನತ ಮಟ್ಟಕ್ಕೇರಿದ ಮಾದರಿ ವ್ಯಕ್ತಿತ್ವ ಮಾತ್ರ ಎಲ್ಲರಿಗೂ ಆದರ್ಶವಾಗಲು ಸಾಧ್ಯ. ವ್ಯಕ್ತಿಯು ತತ್ವಗಳನ್ನು ತಮ್ಮ ಬದುಕಿನ ಜೀವಾಳವಾಗಿಸಿಕೊಂಡವರು ವಿರಳ. ಸಮಾಜದ ಹಲವಾರು ನೂನ್ಯತೆಗಳಿಗೆ ತಮ್ಮ ತತ್ವ ಸಿದ್ಧಾಂತಗಳನ್ನು ಕಳೆದುಕೊಂಡು ಪರಿಸ್ಥಿತಿ ಹಾಗೂ ಮನಸ್ಥಿತಿಗೆ ಹೊಂದಿಕೊಂಡು ನಡೆಯುವವರೇ ಅಧಿಕ. ಅಂತಹದರಲ್ಲಿ ಯಾವ ಪರಸ್ಥಿತಿಗೂ ಮನಸ್ಥಿತಿಯನ್ನು ಬದಲಾಯಿಸದೆ “ಕರ್ತವ್ಯೋಧರ್ಮ ಸಂಗ್ರಹ” ಎಂಬ ತತ್ವ ಸಿದ್ಧಾಂತಕ್ಕೆ ಕಟ್ಟು ಬೀಳುವರು ಆದರೆ ನೀಲು ರಾಠೋಡ ದಂಪತಿಗಳ gಯಾವದೇ ಪರಸ್ಥಿತಿ ಇರಲಿ ವಿಚಲಿತವಾದವರಲ್ಲ. ನಮಗೆ ಕಡು ಬಡತನ ಬರಲಿ ಮಕ್ಕಳ ಕಲಿಕೆ ಅವರ ಆಸಕ್ತಿಗೆ ಕೊರತೆ ಮಾಡುವದಿಲ್ಲ ಎನ್ನುತ್ತಾರೆ. ಮಕ್ಕಳ ಬೆಳವಣಿಗೆಗೆ ಸಮಯ, ಸಂಯಮ, ಸೌಜನ್ಯವನ್ನು ನೀಡುತ್ತ ಆತ್ಮಸ್ಥೈರ್ಯ ತುಂಬಿದ್ದಾರೆ. ಸಾವಿರಾರು ಜನಗಳ ಮುಂದೆ ನಿರರ್ಗಳವಾಗಿ ಬಂಜಾರ ಧರ್ಮದ ಮಹತ್ವ, ಧರ್ಮಜಾಗೃತಿಯ ತತ್ವಗಳನ್ನು ಹರಳು ಉರಿದಂತೆ ಮಾತನಾಡುವ ಧೈರ್ಯ ಹೊಂದಿದ್ದಾರೆ. ಕುಮಾರಿ ವೈಷ್ಣವಿ ವಿಜ್ಞಾನ, ಲೆಕ್ಕ ಕಾಸಿನ ಆಡಂಬರದಲ್ಲಿರುವಾಗ , ಭಾವನೆತುಂಬುವ ಕಲೆ, ಕಾವ್ಯಕಥೆ ಲಲಿತ ಕಲೆ ಬೆಳೆವಣಿಗೆಗೆ ನೀರೆರೆಯುವವರು ವಿರಳ. ಅದರಂತೆ ಕಲೆಯ ಪ್ರತಿಭೆಕುರಿತು ಪ್ರೋತ್ಸಾಹಿಸಲು ಯಾವ ಪಾಲಕರು ಪ್ರೋತ್ಸಾಹ ನೀಡುವದಿಲ್ಲ. ಇಂತಹ ದಿನಮಾನದಲ್ಲಿ ಮಕ್ಕಳ ಆಸೆಗಳಿಗೆ ಬಣ್ಣತುಂಬಿ ಭವ್ಯ ಪ್ರತಿಭೆಯನ್ನಾಗಿ ಬೆಳೆಸಿದವರು ನೀಲು ರಾಠೋಡ ದಂಪತಿಗಳು.
ನೃತ್ಯ ಪ್ರತಿಭೆಯಾಗಿ ನೂರಾರು ವೇದಿಕೆಯಲ್ಲಿತನ್ನ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಹಲವಾರು ಹಿರಿಯ ಕಲಾವಿದರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉತ್ಸವಗಳು, ಮೇಳಗಳು, ಹಲವಾರು ಸಾಂಸ್ಕøತಿಕ ವೇದಿಕೆಯಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿ ಉತ್ತಮ ಭಾಷಣ ಮಾಡುವದರ ಮೂಲಕ ಸಾಹಿತಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲಕಲ್ಲ ಮಹಾಂತ ಸ್ವಾಮಿಗಳ ಮಠ ಹಾಗೂ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ವಿವಿಧ ಜಿಲ್ಲೆಗಳ ವೇಡಿಕೆಯಲ್ಲಿ ಕೀರ್ತನೆಯನ್ನೂ ಮಾಡಿದ್ದಾಳೆ. ಆದ್ದರಿಂದ ಇವರ ಬಹುಮುಖ ಪ್ರತಿಭೆ ಸಣ್ಣ ವಯಸ್ಸಿನಲ್ಲಿ ಅಪಾರ ಸಾಧನೆ ಹೊಂದದ ವೈಷ್ಣವಿ ಇನ್ನೂ ಹಲವಾರು ಕಲೆಗಳಲ್ಲಿ ಪರೀಣಿತರು.
ಕು. ವೈಷ್ಣವಿ ನೀಲು ರಾಠೋಡ ಬ್ರೈಟ್ ಹಾರಿಜನ್ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತಿದ್ದು ಶಾಲೆಯಕೀರ್ತಿಯನ್ನು ಹೆಚ್ಚಿಸಲು ಕಾರಣರಾಗಿದ್ದಾರೆ. ಓದಿನಲ್ಲೂ ಅಪಾರ ಪ್ರತಿಭಾವಂತೆಯಾಗಿದ್ದಾಳೆ. ಯಾವದೇ ವಿಷಯದಲ್ಲಿ ತನ್ನ ಪ್ರದರ್ಶನ ಮತ್ತು ತಮ್ಮ ಪಾತ್ರವಿದ್ದಾಗ ಕಲಾ ಪ್ರದರ್ಶನಕ್ಕೆ ಬೇಕಾದ ಎಲ್ಲಾ ಸಿದ್ದತೆ ಅಭ್ಯಾಸ, ಸಮಯ ಪಾಲನೆಯನ್ನು ರೂಢಿಸಿಕೊಂಡು ತನ್ನ ಕೆಲಸದಲ್ಲಿ ನಿತ್ಯ ನಿರತಳಾಗುತ್ತಾಳೆ. ಅಂತಹ ಸೃಜಶೀಲ ವ್ಯಕ್ತಿತ್ವವನ್ನು ವೈಷ್ಣವಿ ಹೊಂದಿದ್ದಾರೆ. ಇದರ ಜೊತೆಗೆ ಆಟ ಪಾಠಗಳು ಎಲ್ಲದರಲ್ಲೂ ಮುಂದಿದ್ದಾಳೆ ಇವಳ ವ್ಯಕ್ತಿತ್ವ ಮಕ್ಕಳಿಗೆ ಮಾದರಿ ಎಂದು ಹೇಳಬಹುದು. ಗದುಗಿನ ಬಂಜಾರ ಮೂಲದ ನೀಲು ರಾಠೋಡರ ಮೊದಲನೇ ಮಗಳಾಗಿ ಗದುಗಿನಲ್ಲಿ ಜನಿಸಿದ್ದಾರೆ. ಇವರ ಕಲಾ ಚಟುವಟಿಕೆಗಳು ಬಾಲ್ಯದಿಂದಲೂ ಬೆಳೆದಿದ್ದರಿಂದ ತಂದೆ ತಾಯಿಗಳು ಅವಳ ಚಟುವಟಿಕೆಗೆ ಆಸಕ್ತಿ ತುಂಬಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇದರ ಫಲವಾಗಿ ಅವಳು ಒಬ್ಬ ಉತ್ತಮ ಸಾಂಸ್ಕೃತಿಕ ಪ್ರತಿಭೆಯಗಿ ಬೆಳೆದಿದ್ದಾಳೆ. ಕನ್ನಡ ಸಂಸ್ಕೃತಿ ಇಲಾಖೆಯ ಕಲಾ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ. ಕೆ.ಎಚ್. ಪಾಟೀಲ ಪ್ರತಿಷ್ಠಾನ ಆಯೋಜಿಸಿದ ತತ್ವರ ಸಾಯನ ಕಾರ್ಯಕ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬಾಲವಿಕಾಸ ಅಕಾಡೆಮಿ ಧಾರವಾಡ ಆಯೋಜಿಸಿದ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕøತಿಕ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಯ ಅತಿಥಿಯಾಗಿ, ನ್ಯೂಸ್ 18 ಆಯೋಜಿದ ಕರುನಾಡ ಹಬ್ಬ, ದೇಶಪಾಂಡೆ ಫೌಂಡೇಶನ್ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ. ಕೆ.ಎಸ್.ಆರ್.ಟಿ.ಸಿ. ಕಾರ್ಯಕ್ರಮ ಹೀಗೆ ಹಲವಾರು ಪ್ರತಿಷ್ಠಿತ ವೇದಿಕೆಯಲ್ಲಿ ಭರತನಾಟ್ಯ ನೃತ್ಯ, ಕಲೆ, ಕೀರ್ತನ, ಸಂಗೀತ, ಭಾಷಣ ಕಲೆಯನ್ನು ಪ್ರದರ್ಶಿಸಿ ಕರ್ನಾಟಕ ಬಾಲ ರತ್ನ ಪ್ರಶಸ್ತಿ, ಕರುನಾಡ ಕಣ್ಮಣಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಸಮಾಜ ಸೇವೆ : ಸಣ್ಣ ವಯಸ್ಸಿನಲ್ಲಿ ಅಪಾರ ಜನಪರ ಕಾಳಜಿಯನ್ನು ಹೊಂದಿದ ವೈಷ್ಣವಿ ಕನ್ನಡ , ಹಿಂದಿ, ಲಂಬಾಣಿ, ಇಂಗ್ಲೀಷ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾಳೆ. ಬಂಜಾರ ಸಮುದಾಯದಿಂದ ಬಂದಿರುವದರಿಂದ ಆ ಸಮಾಜದ ಜನ-ಮನ ಪರಿವರ್ತಿಸುವ ಮನ ಮಿಡಿಯುವ ಮಾತುಗಳನ್ನು ಹಳ್ಳಿ ಹಳ್ಳಿಗಳಲ್ಲಿ ತಮ್ಮ ಉಪನ್ಯಾಸ ನೀಡಿದ್ದಾರೆ. ಸೇವಾಲಾಲರ ತತ್ವ ಸಿದ್ದಾಂತಗಳನ್ನು ಓದಿ ಅರಿತುಕೊಂಡು ಧರ್ಮದ ಉದ್ದೇಶಗಳನ್ನು ಲಂಬಾಣಿ ಭಾóóಷೆಯಲ್ಲಿ ಏರುಧ್ವನಿಯಲ್ಲಿ ಅರಳು ಹುರಿದಂತೆ ಮಾತನಾಡುವ ಬಾಲಕಿಯ ಧೈರ್ಯವನ್ನು ನೋಡಿ ಪ್ರೇಕ್ಷಕರು ಬಾಯಿಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಯಾವುದೇ ಧರ್ಮದ ಉದ್ದೇಶವಿಷ್ಟೆ ಹಸಿದವರಿಗೆ ಅನ್ನ, ನೀರು, ಆಶ್ರಯ ನೀಡುವದೇ ಮಾನವೀಯ ಧರ್ಮ ಇದನ್ನು ಹೊರತು ಹೊರತು ಬೇರಿಲ್ಲ ಇಂತಹ ಹಲವಾರು ಅರ್ಥಪೂರ್ಣ ವಾಕ್ಯಗಳೊಂದಿಗೆ ತಮ್ಮ ಜನಾಂಗದ ಪರಿವರ್ತನೆಗೆ ಹಲವಾರು ರಾಜ್ಯ ಹಾಗೂ ಹೊರರಾಜ್ಯದ ತಾಂಡಾಗಳಲ್ಲಿ ಭಾಷಣ ಮಾಡಿದ್ದಾರೆ. ಜಾಗೃತಿ ಮೂಡಿಸುತಿದ್ದಾರೆ. ಶಿಕ್ಷಣದ ಮಹತ್ವ ತಿಳಿಸಿದ್ದಾರೆ. ಆದರ್ಶ ಬದುಕು ಕಟ್ಟಿಕೊಳ್ಳುವ ಮಾತುಗಳನ್ನು ಆಡಿಜನ ಮನ ಬದಲಾಯಿಸಲು ಈ ಕಿರಿಯ ವಯಸ್ಸಿನಲ್ಲಿ ಶ್ರಮಿಸುತ್ತಿರುದು ಆಶ್ಚರ್ಯವಾದರೂ ಸತ್ಯವಲ್ಲವೇ. ಮಕ್ಕಳಿದ್ದರೆ ಹೀಗಿರಬೇಕು ! ಮೋಬೈಲ್ ಲೋಕದಲ್ಲಿ ಕಾಲ ಕಳೆಯುವ ಕಾಲವಿದು. ಆಟ ಪಾಠ ಮಾಯವಾಗಿವೆ. ಊಟ ಮರೆತು ಮೊಬೈಲ್ ಲೋಕದಲ್ಲಿ ಬೀಜಿಯಾಗುವ ಕಾಲದಲ್ಲಿ ಇಂತಹ ಮಕ್ಕಳು ಸಿಗುವದು ಅಪರೂಪ. ಅದಕ್ಕೆ ಕಾರಣ ಅವರ ಮನೆಯ ಪರಿಸರವೇ ಇದಕ್ಕೆ ಮೂಲ ಕಾರಣ. ಅದರಂತೆ ಮಕ್ಕಳನ್ನು ಮಾಧ್ಯಮದ ಮಾಯೆಯಿಂದ ದೂರವಿರಿಸೋಣ ಅವರ ಪ್ರತಿಭೆಯನ್ನು ಬೆಳೆಸೋಣ ಉಳಿಸೋಣ.

– ಪ್ರೊ. ಬಸವರಾಜ ನೆಲಜೇರಿ, ಗದಗ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!