ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಅಕ್ಷರಕ್ರಾಂತಿ ನ್ಯೂಸ್
ಗದಗ,: ಸಿರಿಗನ್ನಡ ವೇದಿಕೆ ರಾಜ್ಯ ಘಟಕವು ಗದಗ ಜಿಲ್ಲಾ ಸಿರಿಗನ್ನಡ ವೇದಿಕೆ ಹಾಗೂ ವಿಶಾಲ ಪ್ರಕಾಶನ ಮಾದಿನೂರು ಸಹಯೋಗದಲ್ಲಿ ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ಪತ್ರಿಕಾ ಸೇವೆಗಾಗಿ ಪ್ರತಿಷ್ಠಿತ ಮೊಹರೆ ಹನುಮಂತರಾಯ ಪ್ರಶಸ್ತಿ ಪುರಸ್ಕೃತರಾದ ಗದುಗಿನ ನವೋದಯ ದಿನಪತ್ರಿಕೆಯ ಸಂಪಾದಕರು ಖ್ಯಾತ ಪತ್ರಕರ್ತರಾದ ರಾಜೀವ ಕಿದಿಯೂರ ಅವರಿಗೆ “ಸಿರಿಗನ್ನಡ ಸಿರಿ” ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿತು.
ರಾಜ್ಯ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಜಿ.ಎಸ್.ಗೋನಾಳ ಅವರ ಅಧ್ಯಕ್ಷತೆಯಲ್ಲಿ ಗದುಗಿನ ನವೋದಯ ದಿನಪತ್ರಿಕೆಯ ಕಾರ್ಯಾಲಯದಲ್ಲಿ ಸರಳವಾಗಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಕವಿ, ಮಕ್ಕಳ ಸಾಹಿತಿ ಡಾ. ರಾಜೇಂದ್ರ ಎಸ್ ಗಡಾದ ಹಾಗೂ ಪತ್ರಕರ್ತ, ಲೇಖಕ ಜಿ.ಎಸ್. ಗೋನಾಳ ಅವರು ಕಿದಿಯೂರ ಅವರಿಗೆ ಶಾಲು ಹೊದಿಸಿ ಫಲಪುಷ್ಪದೊಂದಿಗೆ ಪ್ರಶಸ್ತಿ ಫಲಕ ಪ್ರದಾನ ಮಾಡಿ ಸನ್ಮಾನಿಸಿದರು.ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ರಾಜೇಂದ್ರ ಎಸ್ ಗಡಾದ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಗದಗು ಮತ್ತು ಕೊಪ್ಪಳ ಭಾಗದಲ್ಲಿ ಕವಿ ಸಾಹಿತಿಗಳನ್ನ ಹೋರಾಟಗಾರರನ್ನು ರಾಜಕಾರಣಿಗಳನ್ನ ಬೆಳೆಸಿದ ಕೀರ್ತಿ ನವೋದಯಕ್ಕೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಎಸ್ ಗೋನಾಳ ಮಾತನಾಡಿ, ಕಿದಿಯೂರ ಅವರು ತಮ್ಮ ತಂದೆಯ ಕಾಲದಿಂದಲೂ ಮೂರುವರೆ ದಶಕಗಳ ಕಾಲದಿಂದ ಪತ್ರಿಕೋದ್ಯಮದಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿದ್ದು ಇವರ ಸೇವೆಯನ್ನು ಪರಿಗಣಿಸಿ ಅವರಿಗೆ ಮೋಹರೆ ಹನುಮಂತ ರಾಯ್ ಪ್ರಶಸ್ತಿ ಸಂದ ಈ ಶುಭ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ನವೋದಯ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ದೀಪಕ್ ಕಿದಿಯೂರರವರು ಸರ್ವರನ್ನು ಸ್ವಾಗತಿಸಿ ನವೋದಯ ಪತ್ರಿಕೆ ಬೆಳೆದು ಬಂದ ದಾರಿಯನ್ನ ವಿವರಿಸಿದರು. ಸರಳವಾಗಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯಾಯವಾದಿಗಳಾದ ಮಾಲತೇಶ ಪಾಟೀಲ್, ರಮೇಶ್ ಕುರಿ, ಕವಿತ್ರಿಯರಾದ ಶ್ರೀಮತಿ ಶಿಲ್ಪಾ ಮ್ಯಾಗೇರಿ, ಅನುಸೂಯ ಮಿಟ್ಟಿ, ಪಿ ರೇಣುಕಾ ಪ್ರಕಾಶಕರಾದ ಸುರೇಶ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಪರವಾಗಿ ಕಿದಿಯೂರು ಅವರಿಗೆ ಗ್ರಂಥಗಳನ್ನು ನೀಡಿ ಶುಭ ಕೋರಲಾಯಿತು.
More Stories
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ