ಗದಗ,: ಬೆಟಗೇರಿ ವಾರ್ಡ 7ರ ರಾಮಕೃಷ್ಣ ಪರಮಹಂಸ ರಸ್ತೆಯಲ್ಲಿರುವ ನವಭಾರತ ಗಜಾನನೋತ್ಸವ ಸಮಿತಿ ಬೆಟಗೇರಿ ವತಿಯಿಂದ 32ನೇ ವರ್ಷದ ಗಜಾನನೋತ್ಸವವು ಶ್ರೀ ವಿಷ್ಣುವಿನ ರೂಪದಲ್ಲಿರುವ ಗಣೇಶ ಮೂರ್ತಿಯ ಪೂಜಾ ಕಾರ್ಯಕ್ರಮವು ಸಕಲ ರೀತಿಯ ಪೂಜಾ ವಿಧಿ, ವಿಧಾನಗಳ ಮೂಲಕ ಶ್ರೀ ಬಚ್ಚಲಕ್ಕಮ್ಮದೇವಿ ಸದ್ಭಕ್ತ ಕಮೀಟಿಯ ಹಿರಿಯರು ಸೇರಿದಂತೆ ನವಭಾರತ ಯುವಕ ಸಂಘದ ಅಧ್ಯಕ್ಷರ ಹಾಗೂ ಸರ್ವ ಪದಾಧಿಕಾರಿಗಳು ಸೇರಿದಂತೆ ಸಕಲ ಸದ್ಭಕ್ತರ ಉಪಸ್ಥಿತಿಯಲ್ಲಿ ಪೂಜೆ ಜರುಗಿತು.ಸೆ. 13 ರಂದು ಸಂಜೆ 6 ಗಂಟೆಗೆ ಗಣೇಶನಿಗೆ ಮಹಾಪೂಜೆ ಜರುಗುವುದು ಮತ್ತು ಪದ್ಮಭೂಷಣ ಡಾ. ಪಂ. ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ಮಹಾ ಅನ್ನಸಂತರ್ಪಣೆ ಜರುಗುವುದು. ಸೆ.15 ರಂದು ಸಂಜೆ 5 ಗಂಟೆಗೆ ಗಣೇಶನ ಪೂಜೆ, ಲಿಲಾವು ಕಾರ್ಯಕ್ರಮ ಜರುಗುವುದು ಹಾಗೂ ಗಣೇಶ ಮೂರ್ತಿಯ ಭವ್ಯ ಮೆರವಣೆಗೆಯೊಂದಿಗೆ ವಿಸರ್ಜನೆ ಕಾರ್ಯಕ್ರಮ ಎಂದು ನವಭಾರತ ಗಜಾನನ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ