ಡಂಬಳ: ರೊಟ್ಟಿ ಜಾತ್ರೆಯ ಮೂಲಕ ಕೋಮಸೌರ್ಹಾದತೆಗೆ ಪ್ರಸಿದ್ದಿ ಪಡೆದ, ಸಾಮಾಜಿಕ ಪರಿವರ್ತನೆಯ ‘ತೋಂಟದ ಖಡಕ್ ರೊಟ್ಟಿ ಜಾತ್ರೆ’ ಇಂದಿನಿಂದ ಆರಂಭವಾಗಲಿದೆ.ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆಯ ನಿರ್ಮೂಲನೆ ಸೇರಿದಂತೆ ಸಾಮಾಜಿಕ ಸಾಮರಸ್ಯ ಮೂಡಬೇಕು ಎನ್ನುವ ದೂರದೃಷ್ಠಿಯಿಂದ ಈ ಜಾತ್ರೆ ಸಮ ಸಮಾಜ ಪರಿವರ್ತನೆಯಲ್ಲಿ ತನ್ನದೆ ಆದ ಹೊಸ ಮೇಲುಗೈ ಸಾಧಿಸುತ್ತಿದ್ದು, ಪ್ರಸಿದ್ದಿ ಪಡೆಯುತ್ತಿದೆ.284ನೇ ಜಾತ್ರೆಯ ತೇರು ಫೆ. 24ರಂದು ಹಾಗೂ 25ರಂದು ಲಘು ರಥೋತ್ಸವ ನಡೆಯಲಿದ್ದು, ಸಕಲ ಸಿದ್ದತೆ ಮಾಡಲಾಗಿದೆ. ‘ರೊಟ್ಟಿ ತಿಂದರೆ ರಟ್ಯಾಗ ಸತುವು’ ಎಂಬ ಗಾದೆಯಂತೆ ರೊಟ್ಟಿ ಪ್ರಸಾದದ ಜಾತ್ರೆ ನಡೆಯುವುದು ಉತ್ತರ ಕರ್ನಾಟಕ ಭಾಗದ ಜನರ ಗಟ್ಟಿತನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
60 ಸಾವಿರ ರೊಟ್ಟಿ: ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲಿ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಜಾತ್ರೆಯಲ್ಲಿ 30 ಕ್ವಿಂಟಲ್ ಬಿಳಿಜೋಳದಿಂದ ಅಂದಾಜು 60 ಸಾವಿರ ರೊಟ್ಟಿ ಸಿದ್ದಪಡಿಸಲಾಗಿದೆ.
ಡಂಬಳ, ಹೊಸಡಂಬಳ, ನಾರಾಯಣಪೂರ, ಡೋಣಿ ತಾಂಡ, ಅತ್ತಿಟ್ಟಿ ಮುಂತಾದ ಗ್ರಾಮಗಳ ಭಕ್ತರ ಮನೆ ಮೆನೆಗೆ ಹಿಟ್ಟು ನೀಡಲಾಗಿದೆ. ಜಾತ್ರೆಯ ಮುನ್ನಾದಿನ ಹಾಲಹುಗ್ಗಿ, ಅನ್ನ-ಸಾರು, ವಿವಿಧ ಭಕ್ಷಭೋಜ್ಯಗಳ ದಾಸೋಹ ನಡೆಯುತ್ತದೆ. ಎರಡನೇ ದಿನ 5 ಥರದ ಧಾನ್ಯಗಳನ್ನು ನೆನೆಹಾಕಿ ಮೊಳಕೆ ಒಡೆಸಿ, ಅಡುಗೆ ಮಾಡಿರುತ್ತಾರೆ. ಮೆಂತೆ, ಪಾಲಕ್ ಮಿಶ್ರಮಾಡಿ ಅದರಲ್ಲಿ ಶೇಂಗಾಕಾಳನ್ನು ಬೆರೆಸಿ ‘ಗರಗಟ’ ತಯಾರಿಸಲಾಗುತ್ತದೆ. ‘ಕರಿಹಿಂಡಿ’ ಮಾಡಿರುತ್ತಾರೆ. ಹಳ್ಳಿಗಳಿಂದ-ನಗರಗಳಿಂದ ಬಂದ ಭಕ್ತರು ಮಠದ ಆವರಣದಲ್ಲಿ ಸಾಲು-ಸಾಲಾಗಿ ಕುಳಿತು ಪ್ರಸಾದ ಸ್ವೀಕರಿಸುತ್ತಾರೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ