ಗದಗ,: ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಸ್ವತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಗುರುವಾರ ನಡೆಯಿತು.
ನಮ್ಮ ದೇಶಕ್ಕೆ ಸ್ವಾತಂತ್ರ್ಯಲಭಿಸಿ 77 ವರ್ಷಗಳು ಕಳೆದು 78ನೇ ವರ್ಷಕ್ಕೆ ಪಾದರ್ಪಣೆ ಮಾಡಿದ ಸಂದರ್ಭದಲ್ಲಿ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಧ್ವಜಾರೋಹಣವನ್ನು ನೆರವೇರಿಸಿ ಘೋಷಣೆಗಳನ್ನು ಕೂಗಿ ಗೌರವ ಸಲ್ಲಿಸಲಾಯಿತು.
ಧ್ವಜಾರೋಹಣವನ್ನು ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂ.ವೈ ಮುಧೋಳರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಕ್ತಾರರಾದ ವಿ ಆರ್ ಗೋವಿಂದಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹಾಜಿಅಲಿ ಎಚ್ ಕೊಪ್ಪಳ, ಪದಾಧಿಕಾರಿಗಳಾದ ದೇವಪ್ಪ ಮಲಸಮುದ್ರ, ಶಿರಾಜ ಕದಡಿ, ವೀರೇಶ ಜಿರ್ಲ್, ಸಂಶಿ ವಕೀಲರು, ಓದೋಜಿ ವಕೀಲರು, ಎಂ ಎಸ್ ಪರ್ವತಗೌಡ್ರು, ರಾಜೇಸಾಬ ತಹಶೀಲ್ದಾರ, ಸಂಗಪ್ಪ ಎಲಬುಣಚಿ, ಪ್ರಫುಲ ಪುಣೆಕರ, ತಿಪ್ಪಣ್ಣ ಹುಡೇದ, ಶರಣಪ್ಪ ಹೂಗಾರ, ಮಾಬುಸಾಬ ಹುಲ್ಲೂರ, ವೀರೇಶ ಬಣಕಾರ, ರಾಜೇಶಸಾಬ ಧಾಲಾಯತ, ಫಕೀರಪ್ಪ ತುಳಿ, ನಿಂಗಪ್ಪ ಪಂಚಿಗೇರಿ, ಮಾಬುಸಾಬ ಬನ್ನಿಕೊಪ್ಪ, ನಿಂಗಪ್ಪ ಪ್ಯಾಟಿ, ಬಾದಶಹ ಭಾಗವಾನ, ಅಸ್ಲಾಂ ಶಿರಹಟ್ಟಿ, ಇಮಾಮಸಾಬ ಉಮಚಿಗಿ, ಹಾರುನರಶೀದ ಕೊಪ್ಪಳ, ಹಾಗೂ ಮುಖಂಡರಾದ ಶಿವಣ್ಣ ಬಳ್ಳಾರಿ, ಕಾರ್ಯಾಲಯದ ಪಕ್ಕದಲ್ಲಿರುವ ಎಲ್ಲಾ ಅಂಗಡಿಗಳ ಮಾಲೀಕರು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ