December 23, 2024

AKSHARA KRAANTI

AKSHARA KRAANTI




ಜನ್ಮ ಕೊಟ್ಟ ತಾಯಿ, ವಿದ್ಯೆ ಕೊಟ್ಟ ಗುರು, ಭೂಮಿ ತಾಯಿ ಈ ಮೂವರ ಋಣ ತೀರಿಸಲು ಸಾಧ್ಯವಿಲ್ಲ: ಪರಮಪೂಜ್ಯ ಕಲ್ಲಯ್ಯಜ್ಜನವರು

ಗದಗ,: ಸಂಸ್ಕಾರ, ಸಂಸ್ಕೃತಿ ಮುಖ್ಯವಾಗಿ ಮನುಕುಲಕ್ಕೆ ಬೇಕು. ಮನ ಗೆದ್ದು ಮಾರು ಗೆಲ್ಲು ಎಂದು ಹೇಳುವ ಹಾಗೆ ಅಕ್ಕಂದಿರೆಲ್ಲ ಸೇರಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಪ್ರಶಂಸನೀಯ. ಜನ್ಮ ಕೊಟ್ಟ ತಾಯಿ, ವಿದ್ಯೆ ಕೊಟ್ಟ ಗುರು, ಭೂಮಿ ತಾಯಿ ಈ ಮೂವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ನಾನು ಎಂಬ ಅಹಂ ಕೆಳಮಟ್ಟಕ್ಕೆ ಒಯ್ಯುವುದು, ನೀನು ಎಂಬ ಭಾವ ಎತ್ತರಕ್ಕೆ ಒಯ್ಯುವುದು, ಜ್ಞಾನದ ಸಂಪತ್ತನ್ನು ಸಂಸ್ಕಾರವಂತರಾಗಿ ಸ್ವೀಕರಿಸುವುದು ಒಳ್ಳೆಯದು. ಜಗತ್ತಿನಲ್ಲಿ ಅತಿ ದೊಡ್ಡ ಗುರು ಎಂದರೆ ತಾಯಿ, ಮಕ್ಕಳಿಗೆ ಒಳ್ಳೆಯ ನಡೆ-ನುಡಿ,ಆಚಾರ, ಸಂಸ್ಕೃತಿ, ಸಂಸ್ಕಾರಗಳನ್ನು ನೀಡಬೇಕು. ಸಮಾಜಕ್ಕೆ ನಿಮ್ಮಿಂದ ಏನು ಕೊಡಲ್ಪಟ್ಟಿದೆ ಎಂಬುದನ್ನು ನಾವು ಅವಲೋಕಿಸಬೇಕು. ಗುರುವಿನ ಬಗ್ಗೆ ಸಾಕಷ್ಟು ವಿಸ್ತಾರವಾಗಿ ಪರಮಪೂಜ್ಯ ಶ್ರೀ ಡಾ|| ಕಲ್ಲಯ್ಯಜ್ಜನವರು ತಮ್ಮ ಸಂದೇಶದಲ್ಲಿ ತಿಳಿಸಿದರು.ಅಕ್ಕನ ಬಳಗದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಅಕ್ಕನ ಬಳಗದ ಸದಸ್ಯಿನಿಯರಾದ ಶ್ರೀಮತಿ ಶಿವಲೀಲಾ ಹಿರೇಮಠ ಹಾಗೂ ಅವರ ಸಹೋದರ ಚನ್ನಬಸವರಾಜು ಹಿರೇಮಠ ಅವರು ತಮ್ಮ ಸಹೋದರಿಯವರಾದ ಲಿಂ. ಶ್ರೀಮತಿ ಉಮಾದೇವಿ ತಾಳಿಕೋಟಿಮಠ ಹಾಗೂ ಲಿಂ. ಪಂಚಾಕ್ಷರಯ್ಯ ಹಿರೇಮಠ ದಂಪತಿಗಳ ಸ್ಮರಣಾರ್ಥ ಫೋಟೋ ಅನಾವರಣ ಮಾಡಿದರು. ಪ್ರಸಾದದ ಭಕ್ತಿಸೇವೆಯನ್ನು ಕೂಡ ವಹಿಸಿಕೊಂಡಿದ್ದರು.
ಅಧ್ಯಕ್ಷರಾದ ಶ್ರೀಮತಿ ಲಲಿತಾ ವಿ. ಬಾಳಿಹಳ್ಳಿಮಠ ಅವರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಶಾರದಾ ಹಿರೇಮಠ ಪ್ರಾರ್ಥಿಸಿದರು. ವೇದಿಕೆ ಮೇಲೆ ಟ್ರಸ್ಟಿಗಳಾದ ಶ್ರೀಮತಿ ಶಾಂತ. ಬಿ. ಸಂಕನೂರ, ಕೋಶಾಧ್ಯಕ್ಷರಾದ ಜಯಲಕ್ಷ್ಮಿ ಬಳ್ಳಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಮತಿ ರೇಣುಕಾ ಅಮಾತ್ಯ ವಂದಿಸಿದರು. ಶ್ರೀಮತಿ ಪವಿತ್ರಾ ಬಿರಾದಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಾಗರತ್ನಾ ಹುಬಳಿಮಠ, ಕಸ್ತೂರಿ ಹಿರೇಗೌಡರ, ಮೀನಾಕ್ಷಿ ಸಜ್ಜನರ, ಶೈಲಜಾ ಕವಲೂರ, ರೇಖಾ ಶಿಗ್ಲಿಮಠ, ಶಾಂತ ಗೌಡರ, ಶಕುಂತಲಾ ಮಠದ, ಜಯಶ್ರೀ ಬಾಳಿಹಳ್ಳಿಮಠ, ಸುವರ್ಣಾ ಮದರಿಮಠ, ಮಂಜುಳಾ ಹಿರೇಮಠ, ಪುಷ್ಪಾ ಬಳ್ಳಾರಿ, ಪುಷ್ಪಾ ಹಿರೇಮಠ, ಜಯಲಕ್ಷ್ಮಿ ಗುಗ್ಗರಿ, ಸುವರ್ಣಾ ಹೊಸಂಗಡಿ, ಶಾರದಾ ಬೊಮ್ಮಸಾಗರ, ಶಶಿಕಲಾ ಹಿರೇಮಠ, ದೀಪಾ ಪಟ್ಟಣಶೆಟ್ಟಿ, ಹಾಗೂ ಎಲ್ಲಾ ಅಕ್ಕನ ಬಳಗದ ಸಹೋದರಿಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!