December 23, 2024

AKSHARA KRAANTI

AKSHARA KRAANTI




ಗಜಾನನೋತ್ಸವ | ವಾರ್ಡ 29 ರಲ್ಲಿ ಪ್ರತಿಷ್ಠಾಪನೆಗೊಂಡ ಗಣಪತಿಗೆ ಪೂಜೆ

ಗದಗ,: ನವನಗರ ಕ್ಷೇಮಾಭಿವೃದ್ಧಿ ಸಂಘ ಕೆ.ಎಚ್.ಬಿ. ಬಡಾವಣೆಯ ಆಶ್ರಯದಲ್ಲಿ ಶ್ರೀ ಗಜಾನನೋತ್ಸವ ಸಮಿತಿ ರಾಜೀವಗಾಂಧಿ ನಗರ ವಾರ್ಡ 29 ರಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀಗಣೇಶನಿಗೆ ಮೂರನೇ ದಿನದ ಪೂಜೆಯನ್ನು ಶ್ರೀಮತಿ ವಿಜಯಶ್ರೀ ಬಸವರಾಜ ಅಯ್ಯನಗೌಡರ ದಂಪತಿಗಳ ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ವಿನಾಯಕ ದೀಕ್ಷಿತ ನೆರವೇರಿಸಿದರು.ಇಂದು ದಿ. 9 ರಂದು ರಂಗೋಲಿ ಸ್ಪರ್ಧೆ, ದಿ. 10 ರಂದು ಸಾಯಂಕಾಲ ಸಂಗೀತ ಕಾರ್ಯಕ್ರಮ, ದಿ. 11 ರಂದು ಗಣೇಶನಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಗಣೇಶ ವಿಸರ್ಜನೆ ಕಾರ್ಯಕ್ರಮ ನೆರವೇರುವುದು ಎಂದು ಗಜಾನನೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!