December 23, 2024

AKSHARA KRAANTI

AKSHARA KRAANTI




ಕಾರ್ಗಿಲ್ ವಿಜಯೋತ್ಸವ ಆಚರಣೆ

ಗದಗ,: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಇವರ ಸಹಯೋಗದೊಂದಿಗೆ ೨೫ನೇಯ ಕಾರ್ಗಿಲ್ ವಿಜಯೋತ್ಸವದ ರಜತಮಹೋತ್ಸವ ಹಾಗೂ ೧೯೬೨, ೧೯೬೫, ೧೯೭೧ ಮತ್ತು ೧೯೯೯ ರ ಯುದ್ಧದಲ್ಲಿ ಹುತಾತ್ಮ ವೀರಯೋಧರಿಗೆ ಗೌರವ ನಮನ ಕಾರ್ಯಕ್ರಮದ ಅಂಗವಾಗಿ ಬೈಕ್ ರ‍್ಯಾಲಿ, ಪಾದಯಾತ್ರೆಯ ಮುಖಾಂತರ ಈ ರ‍್ಯಾಲಿಯಲ್ಲಿ ಅಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕ ಸಂಘಟನಾ ಕಾರ್ಯದರ್ಶಿಗಳಾದ ಶಿವಾಜಿ ಚವ್ಹಾಣ ಅವರು ಚಾಲನೆಯಲ್ಲಿ ಪಾಲ್ಗೊಂಡಿದ್ದರು.

ಈ ರ‍್ಯಾಲಿಯಲ್ಲಿ ನಗರದ ಶಾಲಾ ಕಾಲೇಜು, ವಿದ್ಯಾರ್ಥಿಗಳು, ದೇಶಪ್ರೇಮಿಗಳು, ಸಮಾಜಸೇವಕರು, ಎನ್.ಸಿ.ಸಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳೆಯರು ಪಾಲ್ಗೊಂಡಿರುವ ಈ ರ‍್ಯಾಲಿಯು ನಗರದ ಕಿತ್ತೂರ ಚನ್ನಮ್ಮ ಸರ್ಕಲ್ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುತಾತ್ಮ ಯೋಧರಿಗೆ ಗೌರವ ನಮನವನ್ನು ಸಲ್ಲಿಸಲಾಯಿತು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!